ಹಾವೇರಿ: ಎಲ್‌ಪಿಜಿ ಸಿಗದೆ ಆಟೋಗೆ ಹಗ್ಗ ಕಟ್ಟಿ 10 ಕಿ.ಮೀ ಕಾರು ಎಳೆತಂದ ಮಾಲೀಕ
ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಹಾವೇರಿಯಲ್ಲಿ ತೀವ್ರ ಎಲ್‌ಪಿಜಿ ಸಿಲಿಂಡರ್ ಕೊರತೆ ಸೃಷ್ಟಿಸಿದೆ. ಗೋ ಗ್ಯಾಸ್ ಬಂಕ್ ಮುಚ್ಚಿರುವುದರಿಂದ, ರೊಟ್ಟಿ ವ್ಯಾಪಾರಿಯೊಬ್ಬರು 10 ಕಿ.ಮೀ. ದೂರದಿಂದ ಆಟೋಗೆ ಹಗ್ಗ ಕಟ್ಟಿ ಸಿಲಿಂಡರ್ ತರಲು ಪರದಾಡಿದ್ದಾರೆ. ಪ್ರತಿ ಕೆ.ಜಿ.ಗೆ 120 ರೂ. ಇದ್ದರೂ ಸಿಲಿಂಡರ್ ಸಿಗುತ್ತಿಲ್ಲ. ಆಟೋ ಚಾಲಕರು ಮತ್ತು ಜನಸಾಮಾನ್ಯರು ಯುದ್ಧ ನಿಲ್ಲಿಸಿ, ಸುಗಮ ಎಲ್‌ಪಿಜಿ ಪೂರೈಕೆಗೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ, ಏಪ್ರಿಲ್ 18: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಹಾವೇರಿಯ ಜನಸಾಮಾನ್ಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಎಲ್‌ಪಿಜಿ ಸಿಲಿಂಡರ್ ಸಿಗದೆ ಹೈರಾಣಾದ ವ್ಯಾಪಾರಿಯೊಬ್ಬರು ಅನಿಲ ತುಂಬಿಸಲು ಸುಮಾರು 10 ಕಿಲೋ ಮೀಟರ್ ದೂರದವರೆಗೆ ಆಟೋಗೆ ಹಗ್ಗ ಕಟ್ಟಿ ಓಮಿನಿ ಕಾರನ್ನು ಎಳೆದುಕೊಂಡು ಬಂದ ಘಟನೆ ಹಾವೇರಿ-ಹಾನಗಲ್ ರಸ್ತೆಯಲ್ಲಿ ಕಂಡುಬಂದಿದೆ. ಗುಡಿ ಕೈಗಾರಿಕೆಯಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ರೊಟ್ಟಿ ಪೂರೈಕೆ ಮಾಡುವ ವ್ಯಾಪಾರಿಯೊಬ್ಬರು ತಮ್ಮ ಜೀವನೋಪಾಯಕ್ಕಾಗಿ ಎಲ್‌ಪಿಜಿ ಅವಲಂಬಿಸಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಗ್ಯಾಸ್ ಕೊರತೆ ಎದುರಾಗಿದ್ದು, ಬಂಕ್‌ಗಳು ಬಂದ್ ಆಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

