AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ದಿಢೀರ್​​ ಸಭೆಯ ಕಾರಣ ಇನ್ನೂ ನಿಗೂಢ

ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ದಿಢೀರ್​​ ಸಭೆಯ ಕಾರಣ ಇನ್ನೂ ನಿಗೂಢ

Pramod Shastri G
| Edited By: |

Updated on:May 26, 2026 | 12:46 PM

Share

ಕರ್ನಾಟಕ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ. ರಾಜ್ಯಸಭೆ, ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಮುಖ್ಯ ವಿಷಯವಾದರೂ, ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರಚನೆಯ ಕುರಿತು ಭಾರೀ ಚರ್ಚೆ ನಡೆಯುವ ನಿರೀಕ್ಷೆಯಿದೆ. ಸಭೆಯ ಅಜೆಂಡಾ ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ತಿಳಿದಿಲ್ಲದಿರುವುದು ಕುತೂಹಲ ಮೂಡಿಸಿದೆ.

ನವದೆಹಲಿ/ ಬೆಂಗಳೂರು, ಮೇ 26: ಕಾಂಗ್ರೆಸ್ ಹೈಕಮಾಂಡ್‌ ನಾಯಕರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್​​ ಗಾಂಧಿ,  ವೇಣುಗೋಪಾಲ್, ಮತ್ತು ಸುರ್ಜೆವಾಲ ಸೇರಿದಂತೆ ಹಿರಿಯ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದು, ಸಭೆಯ ಅಜೆಂಡಾ ಗೌಪ್ಯವಾಗಿಯೇ ಉಳಿದಿದೆ. ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಕೂಡ ಚರ್ಚೆಯ ಮುಖ್ಯ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ವರದಿಯಾಗಿದ್ದು, ಹೈಕಮಾಂಡ್​​ ಕೂಡ ಈ ವಿಚಾರದಲ್ಲಿ ರಹಸ್ಯ ಕಾದುಕೊಂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 26, 2026 12:45 PM
Follow Us
Pramod Shastri G
Pramod Shastri G