ಎಗ್ ಮಂಚೂರಿ ತಿಂದಿದ್ದೀರಾ? ಮನೆಯಲ್ಲಿ ಮಾಡಿ ಸವಿಯಿರಿ

TV9 Web
| Updated By: sandhya thejappa

Updated on: Jun 26, 2021 | 8:44 AM

ಹೋಟೆಲ್​ನಲ್ಲಿ ಏನೇನೋ ಹಾಕಿ ಮಂಚೂರಿ ತಯಾರಿ ಮಾಡುತ್ತಾರೆ ಅಂತ ತಿನ್ನುವುದಕ್ಕೆ ಹಲವರು ಹಿಂಜರಿಯುತ್ತಾರೆ. ಆದರೆ ನೀವು ನಿಮ್ಮ ಕೈಯಾರೆ ಸಿದ್ಧಮಾಡುವುದರಿಂದ ತಿನ್ನುವುದಕ್ಕೆ ಹೆದರುವ ಅಗತ್ಯವಿಲ್ಲ. ಮೊಟ್ಟೆ ಮಂಚೂರಿಯನ್ನು ಸುಲುಭ, ರುಚಿಯಾಗಿ ಮನೆಯಲ್ಲೇ ಮಾಡಿ ತಿನ್ನಿ.

ಗೋಭಿ ಮಂಚೂರಿ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಗಂತೂ ಪಂಚ ಪ್ರಾಣ. ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಬಾರಿಯಾದರೂ ಗೋಭಿ ಮಂಚೂರಿಯನ್ನು ಮನೆಯಲ್ಲಿ ಮಾಡಿ ತಿಂದಿರುತ್ತೀರ. ಆದರೆ ಮೊಟ್ಟೆ (ಎಗ್) ಮಂಚೂರಿ ಮಾಡಿದ್ದೀರಾ? ಬಹುತೇಕರು ಮೊಟ್ಟೆ ಮಂಚೂರಿಯನ್ನು ಇನ್ನು ತಿಂದೇ ಇಲ್ಲ. ಮೊಟ್ಟೆ ಮಂಚೂರಿಯನ್ನು ಒಮ್ಮೆ ತಿಂದರೆ ಪದೇ ಪದೇ ತಿನ್ನಬೇಕು ಅಂತ ಅನಿಸುತ್ತೆ. ಹೊರಗೆ ಹೋಟೆಲ್​ಗೆ ಹೋಗಿ ತರುವ ಬದಲು, ಮನೆಯಲ್ಲೇ ಮೊಟ್ಟೆ ಮಂಚೂರಿಯನ್ನು ಮಾಡಿ ಸವಿಯಿರಿ. ಮಳೆಗಾಲದಲ್ಲಿ ಏನಾದ್ರು ಬಿಸಿ ಬಿಸಿ ತಿಂಡಿ ತಿನ್ನಬೇಕು ಅಂತ ಅನಿಸುತ್ತೆ. ಹಾಗಾಗಿ ಮೊಟ್ಟೆ ಮಂಚೂರಿ ಒಳ್ಳೆಯ ಆಪ್ಶನ್.

ಹೋಟೆಲ್​ನಲ್ಲಿ ಏನೇನೋ ಹಾಕಿ ಮಂಚೂರಿ ತಯಾರಿ ಮಾಡುತ್ತಾರೆ ಅಂತ ತಿನ್ನುವುದಕ್ಕೆ ಹಲವರು ಹಿಂಜರಿಯುತ್ತಾರೆ. ಆದರೆ ನೀವು ನಿಮ್ಮ ಕೈಯಾರೆ ಸಿದ್ಧಮಾಡುವುದರಿಂದ ತಿನ್ನುವುದಕ್ಕೆ ಹೆದರುವ ಅಗತ್ಯವಿಲ್ಲ. ಮೊಟ್ಟೆ ಮಂಚೂರಿಯನ್ನು ಸುಲುಭ, ರುಚಿಯಾಗಿ ಮನೆಯಲ್ಲೇ ಮಾಡಿ ತಿನ್ನಿ. ಮೊಟ್ಟೆ ಮಂಚೂರಿ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ಈ ಕೆಳಗಂಡಂತೆ ತಿಳಿಸಲಾಗಿದೆ. ವಿಡಿಯೋದಲ್ಲಿ ಮಾಡುವ ವಿಧಾನವನ್ನು ವಿವರಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಮೊಟ್ಟೆ
ಕಡಲೆ ಬೇಳೆ ಹಿಟ್ಟು
ಗರಂ ಮಸಾಲ
ಕೊತ್ತಂಬರಿ ಸೊಪ್ಪು
ಉಪ್ಪು
ಹಸಿ ಮೆಣಸಿನಕಾಯಿ
ಬೆಳ್ಳುಳ್ಳಿ
ಖಾರದ ಪುಡಿ
ಟೋಮ್ಯಾಟೋ ಸಾಸ್
ಈರುಳ್ಳಿ
ಹಸಿ ಮೊಟ್ಟೆ

ಇದನ್ನೂ ನೋಡಿ

ಕೋಲಾರ ಸ್ಟೈಲ್ ಚಿಕನ್ ಪೆಪ್ಪರ್ ಫ್ರೈನ ಹೇಗೆ ಮಾಡ್ತಾರೆ ನೋಡಿ

ಮಲ್ನಾಡ್ ಸ್ಟೈಲ್​ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ

(How to make tasty Egg Manchurian in home)