AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

’ವೈಚಾರಿಕ ನಕ್ಸಲಿಸಂ ಎಂಬ ಹೋಮಿಯೋಪತಿ ಮಾತ್ರೆ ನೀಡಿದ್ದೆ’; ಪ್ರಧಾನಿ ಮೋದಿ ವಾಗ್ದಾಳಿ

’ವೈಚಾರಿಕ ನಕ್ಸಲಿಸಂ ಎಂಬ ಹೋಮಿಯೋಪತಿ ಮಾತ್ರೆ ನೀಡಿದ್ದೆ’; ಪ್ರಧಾನಿ ಮೋದಿ ವಾಗ್ದಾಳಿ

ಸುಷ್ಮಾ ಚಕ್ರೆ
|

Updated on: Sep 05, 2026 | 9:49 PM

Share

ಸ್ವಾತಂತ್ರ್ಯ ದಿನೋತ್ಸವದ ಭಾಷಣದಲ್ಲಿ ತಾವು ಬಳಸಿದ್ದ ಪದವನ್ನು ಸ್ಮರಿಸಿದ ಪ್ರಧಾನಿ ಮೋದಿ, "ಸ್ವಾತಂತ್ರ್ಯ ದಿನಾಚರಣೆಯಂದು ನಾನು ‘ದಿಮಾಗಿ ನಕ್ಸಲ್’ ಎಂಬ ಪದವನ್ನು ಬಳಸಿದೆ. ಈ ದಿಮಾಗಿ ನಕ್ಸಲರು ದೇಶವಿರೋಧಿ ಅಜೆಂಡಾಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ. ಇದೇ ವೇಳೆ ಹೋಮಿಯೋಪತಿ ಔಷಧದ ಉದಾಹರಣೆ ನೀಡಿದ ಪ್ರಧಾನಿ, ಹೋಮಿಯೋಪತಿ ಮಾತ್ರೆ ನೀಡಿದಾಗ ರೋಗದ ಲಕ್ಷಣಗಳು ಆರಂಭದಲ್ಲಿ ಹೊರಬಂದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಸ್ವಾತಂತ್ರ್ಯ ದಿನೋತ್ಸವದ ಭಾಷಣದಲ್ಲಿ ನಾನು ‘ದಿಮಾಗಿ ನಕ್ಸಲ್’ ಪದವನ್ನು ಬಳಸಿದ ತಕ್ಷಣ, ನಾನು ಯಾರನ್ನು ಉದ್ದೇಶಿಸಿ ಹೇಳಿದ್ದೆನೋ ಅವರೆಲ್ಲರೂ ಸ್ವತಃ ಬಹಿರಂಗವಾಗಿ ಹೊರಬಂದರು" ಎಂದು ಹೇಳಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 5: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ‘ದಿಮಾಗಿ ನಕ್ಸಲ್’ (ವೈಚಾರಿಕ ನಕ್ಸಲರು) ವಿರುದ್ಧ ಮತ್ತೊಮ್ಮೆ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಇಂದು ಎಸ್​ಆರ್​ಸಿಸಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ದಿಮಾಗಿ ನಕ್ಸಲರು ಎಂಬ ಪದವನ್ನು ಬಳಸಿದ ಅವರು, “ಈ ದಿಮಾಗಿ ನಕ್ಸಲರ ಬಗ್ಗೆ ನಾನು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಹೋಮಿಯೋಪತಿ ಮಾತ್ರೆ ನೀಡಿದ್ದೆ. ಅದು ಚೆನ್ನಾಗೇ ಕೆಲಸ ಮಾಡಿತು” ಎಂದಿದ್ದಾರೆ.

ಸ್ವಾತಂತ್ರ್ಯ ದಿನೋತ್ಸವದ ಭಾಷಣದಲ್ಲಿ ತಾವು ಬಳಸಿದ್ದ ಪದವನ್ನು ಸ್ಮರಿಸಿದ ಪ್ರಧಾನಿ ಮೋದಿ, “ಸ್ವಾತಂತ್ರ್ಯ ದಿನಾಚರಣೆಯಂದು ನಾನು ‘ದಿಮಾಗಿ ನಕ್ಸಲ್’ ಎಂಬ ಪದವನ್ನು ಬಳಸಿದೆ. ಈ ದಿಮಾಗಿ ನಕ್ಸಲರು ದೇಶವಿರೋಧಿ ಅಜೆಂಡಾಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ ಎಂದಿದ್ದಾರೆ. ಇದೇ ವೇಳೆ ಹೋಮಿಯೋಪತಿ ಔಷಧದ ಉದಾಹರಣೆ ನೀಡಿದ ಪ್ರಧಾನಿ, ಹೋಮಿಯೋಪತಿ ಮಾತ್ರೆ ನೀಡಿದಾಗ ರೋಗದ ಲಕ್ಷಣಗಳು ಆರಂಭದಲ್ಲಿ ಹೊರಬಂದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಸ್ವಾತಂತ್ರ್ಯ ದಿನೋತ್ಸವದ ಭಾಷಣದಲ್ಲಿ ನಾನು ‘ದಿಮಾಗಿ ನಕ್ಸಲ್’ ಪದವನ್ನು ಬಳಸಿದ ತಕ್ಷಣ, ನಾನು ಯಾರನ್ನು ಉದ್ದೇಶಿಸಿ ಹೇಳಿದ್ದೆನೋ ಅವರೆಲ್ಲರೂ ಒಬ್ಬರಾದ ಮೇಲೊಬ್ಬರು ಹೊರಬಂದರು” ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಯಾರು ದಿಮಾಗಿ ನಕ್ಸಲರಾಗಿ ಹೊರಬಂದಿದ್ದಾರೋ, ಅವರಿಗೆ ನಾನು ಹೇಳಲು ಬಯಸುವುದೇನೆಂದರೆ, ಈ ದೇಶ ನಿಮ್ಮನ್ನು ಗಮನಿಸುತ್ತಿದೆ” ಎಂದು ಮೋದಿ ಎಚ್ಚರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us