‘ಸ್ಟಾರ್ ಹೀರೋಗಳು ಹೀಗೆ ಮಾಡಿದರೆ ನಿರ್ಮಾಪಕರು ಸರ್ವನಾಶ’: ಕೆ. ಮಂಜು ಅಸಮಾಧಾನ
ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ಹಿರಿಯ ನಿರ್ಮಾಪಕ ಕೆ. ಮಂಜು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕೊವಿಡ್ ಬರುವುದಕ್ಕೂ ಮುನ್ನ ಪಡೆಯುತ್ತಿದ್ದ ಸಂಭಾವನೆಯನ್ನು ತೆಗೆದುಕೊಂಡು ಹೀರೋಗಳು ಸಿನಿಮಾ ಮಾಡಿದರೆ ಚಿತ್ರರಂಗ ತುಂಬಾ ಚೆನ್ನಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ಹಿರಿಯ ನಿರ್ಮಾಪಕ ಕೆ. ಮಂಜು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕೊವಿಡ್ ಬರುವುದಕ್ಕೂ ಮುನ್ನ ಪಡೆಯುತ್ತಿದ್ದ ಸಂಭಾವನೆಯನ್ನು ತೆಗೆದುಕೊಂಡು ಹೀರೋಗಳು ಸಿನಿಮಾ ಮಾಡಿದರೆ ಚಿತ್ರರಂಗ ತುಂಬಾ ಚೆನ್ನಾಗಿರುತ್ತದೆ. ಕೆಲವು ಸ್ಟಾರ್ ನಟರು ಬಾಯಿಗೆ ಬಂದಂತೆ ಸಂಭಾವನೆ ತೆಗೆದುಕೊಂಡು, ಕಥೆಯಲ್ಲಿ ಹಸ್ತಕ್ಷೇಪ ಮಾಡಿ, ತುಂಬಾ ಖರ್ಚು ಮಾಡಿಸಿದರೆ ನಿರ್ಮಾಪಕ ಸರ್ವನಾಶ. ಇತ್ತೀಚೆಗೆ ಯಾರೂ ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಯಾಕೆಂದರೆ, ಲಾಭ ಆಗುತ್ತಿಲ್ಲ. ಚಿತ್ರರಂಗಕ್ಕೆ ಕಲಾವಿದರು ಸಹಕಾರ ನೀಡಿದರೆ ಎಲ್ಲ ನಿರ್ಮಾಪಕರು ಸಿನಿಮಾ ಮಾಡುತ್ತಾರೆ. ಹಳೇ ನಿರ್ಮಾಪಕರಿಗೆ ಎಷ್ಟು ಖರ್ಚು ಮಾಡಬೇಕು ಎಂಬುದು ಗೊತ್ತಿರುತ್ತದೆ. ಅಂತಹ ನಿರ್ಮಾಪಕರು ಚಿತ್ರರಂಗದಲ್ಲಿ ಇದ್ದರೆ ಹಲವರಿಗೆ ಅವಕಾಶ ಸಿಗುತ್ತದೆ. ಸ್ಟಾರ್ ಹೀರೋಗಳೆಲ್ಲ ನಿಮ್ಮ ಹಿನ್ನೆಲೆಯನ್ನು ನೋಡಿಕೊಳ್ಳಿ. ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ನೀವು ಹೇಗಿದ್ರಿ ಎಂಬುದನ್ನು ನೆನಪು ಮಾಡಿಕೊಳ್ಳಿ’ ಎಂದು ಸ್ಟಾರ್ ನಟರಿಗೆ ಕೆ. ಮಂಜು ಅವರು ಕಿವಿಮಾತು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

