38 ಸಾವಿರ ಕೋಟಿ ರೂ.ಬಾಕಿ ಉಳಿಸಿಕೊಂಡ ಸರ್ಕಾರ: ಸಿಎಂ ಭೇಟಿಯಾದ ಗುತ್ತಿಗೆದಾರರ ನಿಯೋಗ
ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹಾಗೂ ಪದಾಧಿಕಾರಿಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿಂದು ಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಾಕಿ ಇರುವ 38 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ ಮಾಡಿತು. ಸಭೆ ಬಳಿಕ ಕರ್ನಾಟಕ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಜಿ.ಮಂಜುನಾಥ್ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ಬಳಿ ನಾವು ಮೂರು ಬೇಡಿಕೆಗಳು ಇಟ್ಟಿದ್ದೇವೆ. ಗುತ್ತಿಗೆದಾರರಿಗೆ ಇನ್ನೂ 38 ಸಾವಿರ ಕೋಟಿ ಹಣ ಬಾಕಿ ಕೊಡಬೇಕಿದೆ. ಮೊದಲು ಹಳೆ ವರ್ಕ್ ಬಿಲ್ ಬಳಿಕ ಹೊಸ ಕಾಮಗಾರಿಗಳ ಬಿಲ್ ಕೊಡಿ ಎಂದು ಕೇಳಿದ್ದೇವೆ ಎಂದರು.
ಬೆಂಗಳೂರು, (ನವೆಂಬರ್ 02): ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹಾಗೂ ಪದಾಧಿಕಾರಿಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿಂದು ಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಾಕಿ ಇರುವ 38 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ ಮಾಡಿತು. ಸಭೆ ಬಳಿಕ ಕರ್ನಾಟಕ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಜಿ.ಮಂಜುನಾಥ್ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ಬಳಿ ನಾವು ಮೂರು ಬೇಡಿಕೆಗಳು ಇಟ್ಟಿದ್ದೇವೆ. ಗುತ್ತಿಗೆದಾರರಿಗೆ ಇನ್ನೂ 38 ಸಾವಿರ ಕೋಟಿ ಹಣ ಬಾಕಿ ಕೊಡಬೇಕಿದೆ. ಮೊದಲು ಹಳೆ ವರ್ಕ್ ಬಿಲ್ ಬಳಿಕ ಹೊಸ ಕಾಮಗಾರಿಗಳ ಬಿಲ್ ಕೊಡಿ ಎಂದು ಕೇಳಿದ್ದೇವೆ ಎಂದರು.
ಸಿಎಂ ಗ್ರಾಮೀಣಾಭಿವೃದ್ಧಿ ರಸ್ತೆ ಯೋಜನೆಯಡಿ ಕಾಮಗಾರಿ ಬಿಲ್ ಬಾಕಿ ಇತ್ತು. 16 ಸಾವಿರ ಕೋಟಿ ಬಾಕಿ ಬಿಲ್ ಕ್ಲಿಯರ್ ಮಾಡುವುದಾಗಿ ಹೇಳಿದ್ದಾರೆ. ಸೆಕ್ರೆಟರಿ ಅವರೇ ಜವಾಬ್ದಾರಿ ತಗೆದುಕೊಂಡಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ 14 ಸಾವಿರ ಕೋಟಿ ಬಿಲ್ ಬಾಕಿ ಇದೆ. ಅದನ್ನು ಸಿನಿಯಾರಿಟಿಯಡಿ ಬಿಡುಗಡೆ ಮಾಡಿ ಎಂದಿದ್ದೇವೆ. ನಾಳೆಯಿಂದಲೇ ಆದೇಶ ಮಾಡುವುದಾಗಿ ಸಿಎಂ ಡಿಕೆಶಿ ಹೇಳಿದ್ದಾರೆ. ಸಿನಿಯಾರಿಟಿ ಪ್ರಕಾರವೇ ಕೊಡಬೇಕು ಎಂದು ಆದೇಶ ಮಾಡಲಿದ್ದಾರೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾತ್ರಿಕರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ
ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ, ಮೊಸರಿನ ದರ ಇಳಿಕೆ
ರಾಜ್ಯದ ಬೆಲೆ ಏರಿಕೆ, ಆರ್ಥಿಕ ನಿರ್ಧಾರಗಳ ಬಗ್ಗೆ ಡಿಕೆಶಿ ಹೇಳಿದ್ದೇನು?
ಖಾಸಗಿ ಕೆಲಸ ಬಿಟ್ಟು ಬಂದ ಶಿಕ್ಷಕರಿಗೆ 15 ತಿಂಗಳಿಂದ ಸಂಬಳ ನೀಡದ ಸರ್ಕಾರ

