ಕೆಪಿಸಿಸಿ ಅಧ್ಯಕ್ಷರ ಕುರ್ಚಿ ಖಾಲಿ ಇಲ್ಲ, ಖಾಲಿಯಾದಾಗಷ್ಟೇ ಬದಲಾವಣೆ ಮಾತು: ಜಮೀರ್ ಅಹ್ಮದ್

ಕೆಪಿಸಿಸಿ ಅಧ್ಯಕ್ಷರ ಕುರ್ಚಿ ಖಾಲಿ ಇಲ್ಲ, ಖಾಲಿಯಾದಾಗಷ್ಟೇ ಬದಲಾವಣೆ ಮಾತು: ಜಮೀರ್ ಅಹ್ಮದ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 29, 2024 | 8:15 PM

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು, ಇಬ್ಬರೂ ಸಿಡಬ್ಲ್ಯೂಸಿಯ ಸದಸ್ಯರಾಗಿದ್ದಾರೆ, ಎಐಸಿಸಿ ಅಧ್ಯಕ್ಷ ಮತ್ತು ರಾಹುಲ್ ಗಾಂಧಿಯವರಿಗೆ ಸೌಜನ್ಯದ ಭೇಟಿ ನೀಡಿದ್ದಾರೆ, ಅಷ್ಟೇ ಎಂದು ಜಮೀರ್ ಅಹ್ಮದ್ ಹೇಳಿದರು.

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ, ಅದು ಮಾಧ್ಯಮಗಳ ಸೃಷ್ಟಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಅಧ್ಯಕ್ಷರ ಕುರ್ಚಿ ಖಾಲಿ ಇಲ್ಲ. ಕಾಂಗ್ರೆಸ್ ಯಾವತ್ತಿಗೂ ಹೈಕಮಾಂಡ್ ಹಾಕಿದ ಗೆರೆಯನನ್ನು ದಾಟದ ಪಕ್ಷ, ಪಕ್ಷದ ನಾಯಕರು ತಮ್ಮ ಅಭಿಪ್ರಾಯಗಳನ್ನು ಹೇಳಬಹುದು, ಆದರೆ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳೋದು ಹೈಕಮಾಂಡ್ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾನು ಮಠದಲ್ಲಿ ಬೆಳೆದವರನು, ಒಕ್ಕಲಿಗರ ವಿರುದ್ಧ ಮಾತಾಡುವುದು ಸಾಧ್ಯವಿಲ್ಲ: ಜಮೀರ್ ಅಹ್ಮದ್ ಖಾನ್