AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಖರ್ಚಿಗೆ ಹಣ ಕೊಡದ್ದಕ್ಕೆ ಮಂಗಳಮುಖಿಯ ಮುಖವನ್ನೇ ಕೊಚ್ಚಿ ಹಾಕಿದ ಯುವಕರ ಗುಂಪು

ಮೈಸೂರು: ಖರ್ಚಿಗೆ ಹಣ ಕೊಡದ್ದಕ್ಕೆ ಮಂಗಳಮುಖಿಯ ಮುಖವನ್ನೇ ಕೊಚ್ಚಿ ಹಾಕಿದ ಯುವಕರ ಗುಂಪು

ರಾಮ್​, ಮೈಸೂರು
| Edited By: |

Updated on: Mar 31, 2026 | 3:45 PM

Share

ಮೈಸೂರಿನ ಅಮೃತ ಬಡಾವಣೆಯಲ್ಲಿ ಮಂಗಳಮುಖಿಯರ ಮೇಲೆ ಯುವಕರ ಗುಂಪೊಂದು ಭೀಕರ ಹಲ್ಲೆ ನಡೆಸಿದೆ. ಹಣ ನೀಡಲು ನಿರಾಕರಿಸಿದ್ದಕ್ಕೆ ತಲ್ವಾರ್ ಮತ್ತು ಚಾಕುವಿನಿಂದ ದಾಳಿ ನಡೆಸಲಾಗಿದ್ದು, ಪಾರಿ ಎಂಬುವವರ ಮುಖಕ್ಕೆ ಇರಿಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಮೈಸೂರು, ಮಾ. 31: ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಯುವಕರ ತಂಡವೊಂದು ಮಂಗಳಮುಖಿಯರ ಮೇಲೆ ತಲ್ವಾರ್ ಮತ್ತು ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದಿದೆ. ಅಮೃತ ಬಡಾವಣೆ ನಿವಾಸಿಯಾದ ಆನಮ್ ಎಂಬ ಮಂಗಳಮುಖಿಯ ಬಳಿ ಕೆಲವು ಯುವಕರು ತಮ್ಮ ವೈಯಕ್ತಿಕ ಖರ್ಚಿಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಆನಮ್ ಹಣ ನೀಡಲು ನಿರಾಕರಿಸಿದಾಗ ಯುವಕರು ಗಲಾಟೆ ಆರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡು ಆನಮ್ ತನ್ನ ಸ್ನೇಹಿತೆ ಪಾರಿ ಎಂಬಾಕೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಾಳೆ. ಗೌಸಿಯಾನಗರದ ನಿವಾಸಿಯಾದ ಪಾರಿ ಸ್ಥಳಕ್ಕೆ ಬರುತ್ತಿದ್ದಂತೆಯೇ, ಆಕ್ರೋಶಗೊಂಡಿದ್ದ ಯುವಕರು ತಲ್ವಾರ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪಾರಿ ಅವರ ಮುಖಕ್ಕೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಲಾಗಿದೆ. ಸದ್ಯ ಗಾಯಾಳು ಪಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಮಂಗಳಮುಖಿಯರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ದಕ್ಷಿಣ (ಸೌತ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಿಡಿಗೇಡಿ ಯುವಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us