AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು: ಮಾಕ್​​ಡ್ರಿಲ್​​ ಎಂದು ತಿಳಿಯದೆ ಕಂಗಾಲಾದ ಜನ

ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು: ಮಾಕ್​​ಡ್ರಿಲ್​​ ಎಂದು ತಿಳಿಯದೆ ಕಂಗಾಲಾದ ಜನ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Jul 23, 2026 | 1:04 PM

Share

ಮಂಗಳೂರಿನಲ್ಲಿ ಎನ್‌ಎಸ್‌ಜಿ ಕಮಾಂಡೋಗಳು ಎರಡು ದಿನಗಳ ಬೃಹತ್ ಅಣಕು ಕಾರ್ಯಾಚರಣೆ ನಡೆಸಿದ್ದಾರೆ. ಭಯೋತ್ಪಾದಕ ದಾಳಿಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಹೇಗೆ ನಿರ್ವಹಿಸಬೇಕೆಂದು ಪ್ರದರ್ಶಿಸಲಾಗಿದ್ದು, ಸೇನಾ ಹೆಲಿಕಾಪ್ಟರ್‌ಗಳು ಕಟ್ಟಡಗಳ ಮೇಲೆ ಲ್ಯಾಂಡ್ ಆಗಿದ್ದರಿಂದ ಜನರಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ ಇದು ರಾಷ್ಟ್ರೀಯ ಭದ್ರತಾ ತರಬೇತಿಯ ಭಾಗ ಎಂದು ತಿಳಿದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಮಂಗಳೂರು, ಜುಲೈ 23: ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕಮಾಂಡೋಗಳು ಮಂಗಳೂರಿನಲ್ಲಿ ಬೃಹತ್ ಅಣಕು ಕಾರ್ಯಾಚರಣೆಯನ್ನು ನಡೆಸಿವೆ. ಭಯೋತ್ಪಾದಕ ದಾಳಿಗಳನ್ನು ಎದುರಿಸಲು ಮತ್ತು ಸಂಕಷ್ಟದ ಸಂದರ್ಭಗಳನ್ನು ನಿರ್ವಹಿಸಲು ಕೈಗೊಳ್ಳುವ ಕ್ರಮಗಳನ್ನು ಈ ಮಾಕ್​​ಡ್ರಿಲ್​​ನಲ್ಲಿ ಪ್ರದರ್ಶಿಸಲಾಗಿದೆ. ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ಸೇನಾ ಹೆಲಿಕಾಪ್ಟರ್‌ಗಳನ್ನು ನೋಡಿ ಸ್ಥಳೀಯ ನಿವಾಸಿಗಳಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. ಆದರೆ ಇದು ಕೇವಲ ತಾಲೀಮು ಎಂದು ತಿಳಿದ ನಂತರ ಸಾರ್ವಜನಿಕರು ನಿರಾಳರಾದರು. ಎನ್ಎಂಪಿಎ, ಇನ್ಫೋಸಿಸ್ ಮತ್ತು ಕೆಲವು ಶಿಕ್ಷಣ ಸಂಸ್ಥೆಗಳ ಬಳಿ ಈ ಡ್ರಿಲ್ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jul 23, 2026 01:02 PM

Follow Us