AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಬಿಎ ಚುನಾವಣೆ: ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?

ಜಿಬಿಎ ಚುನಾವಣೆ: ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?

TV9 Web
| Edited By: |

Updated on: Apr 07, 2026 | 5:58 PM

Share

ಉಪ ಚುನಾವಣೆ ಅಬ್ಬರದ ನಡುವೆ ಜಿಬಿಎ ಚುನಾವಣೆಗೂ ಪಕ್ಷಗಳು ತಯಾರಿ ನಡೆಸಿವೆ. ಆದರೆ ಮೈತ್ರಿಯಾಗಿಯೇ ಉಪ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್​​ ಈ ಹೊಂದಾಣಿಕೆಯನ್ನು ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ಚುನಾವಣೆಗೂ ಮುಂದುವರಿಸುತ್ತವಾ ಎಂಬ ಪ್ರಶ್ನೆ ಸದ್ಯಕ್ಕಿದೆ. ಈ ವಿಚಾರವಾಗಿ ಈ ಹಿಂದೆಯೂ ಕೆಲ ನಾಯಕರಿಂದ ಪರ-ವಿರೋಧ ಅಬಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ ಮೈತ್ರಿ ನಿರ್ಧಾರದ ಬಗ್ಗೆ ವಿಪಕ್ಷ ನಾಯಕ ಆರ್​​.ಅಶೋಕ್​​ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, ಏಪ್ರಿಲ್​​ 07: ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಗೆ ಬಿಜೆಪಿ ಮತತು ಜೆಡಿಎಸ್​​ ಮೈತ್ರಿಯಾಗಿಯೇ ಕಣಕ್ಕೆ ಇಳಿಯುತ್ತವೆಯೇ ಎಂಬ ಪ್ರಶ್ನೆಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ಉತ್ತರಿಸಿದ್ದು, ಮೈತ್ರಿ ಕುರಿತ ಯಾವುದೇ ನಿರ್ಧಾರ ತಮ್ಮ ಕೈಯಲ್ಲಿಲ್ಲ. ಆ ತಿರ್ಮಾನ ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಸೇರಿದ್ದು. ಮೈತ್ರಿ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ಆದರೆ, ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಜೆಡಿಎಸ್ ಶೇಕಡಾ 50ರಷ್ಟು ಸ್ಥಾನಗಳನ್ನು ಕೇಳುತ್ತಿದೆ ಎಂಬ ಮಾತುಗಳ ಕುರಿತೂ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕೇಂದ್ರ ನಾಯಕರು ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಚುನಾವಣೆ ಘೋಷಣೆಯಾದ ನಂತರವೇ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us