ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಈರುಳ್ಳಿ ಹೊತ್ತೊಯ್ದ ಜನರು
ಮುಖ್ಯಾಂಶಗಳು
- ಚಾಲಕ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಈರುಳ್ಳಿ ತುಂಬಿದ ಲಾರಿ
- ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಬಳಿ ಘಟನೆ
- ಈರುಳ್ಳಿಗಾಗಿ ಮುಗಿಬಿದ್ದ ಜನರು
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಈರುಳ್ಳಿ ತುಂಬಿದ ಲಾರಿಯೊಂದು ಜಮೀನಿಗೆ ಪಲ್ಟಿ ಹೊಡೆದ ಘಟನೆ ನಡೆದಿದೆ. ಸುಮಾರು 20 ಟನ್ಗೂ ಅಧಿಕ ಮೌಲ್ಯದ ಈರುಳ್ಳಿ ಲಾರಿಯಿಂದ ಚೆಲ್ಲಿದ ಕೂಡಲೇ ಸ್ಥಳೀಯರು ಅವುಗಳನ್ನು ಹೊತ್ತೊಯ್ಯಲು ಮುಗಿಬಿದ್ದಿದ್ದಾರೆ.
ರಾಯಚೂರು, ಅಕ್ಟೋಬರ್ 17: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಈರುಳ್ಳಿ ತುಂಬಿದ ಲಾರಿ ಪಲ್ಟಿ ಹೊಡೆದ ಘಟನೆ ನಡೆದಿದೆ. ಸಿಂಧನೂರಿನಿಂದ ರಾಯಚೂರು ಕಡೆಗೆ ಈರುಳ್ಳಿ ತುಂಬಿದ ಲಾರಿ ಹೊರಟಿತ್ತು. 20 ಟನ್ಗೂ ಅಧಿಕ ಈರುಳ್ಳಿ ಚೀಲಗಳನ್ನ ಸಾಗಿಸುತ್ತಿದ್ದ ಲಾರಿ ಮಾರ್ಗ ಮಧ್ಯೆ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ ಈರುಳ್ಳಿಗಾಗಿ ಮುಗಿದ್ದ ಜನರು ಸುಮಾರು 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಈರುಳ್ಳಿ ಹೊತ್ತೊಯ್ದಿದ್ದಾರೆ. ಜನರು ಈರುಳ್ಳಿ ಚೀಲಗಳನ್ನ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಬಿಗ್ ಬಾಸ್ ಮನೆಯಲ್ಲಿ ಈ ವಾರ ಪ್ರಶಾಂತ್ ಹಾಗೂ ಗಾನವಿಗೆ ತರಾಟೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್ಡಿಕೆ
ಕಬ್ಬು ಬೆಳೆಗೆ ಎಂಎಸ್ಪಿ ನಿಗದಿ ಬಗ್ಗೆ ರೈತರಿಗೆ ಗುಡ್ನ್ಯೂಸ್ ಕೊಟ್ಟ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ

