RCB vs DC: W,W,W.. ಒಂದೇ ಓವರ್‌ನಲ್ಲಿ 2 ವಿಕೆಟ್ ಉರುಳಿಸಿದ ಭುವಿ
Bhuvneshwar Kumar wickets: ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯದಲ್ಲಿ, ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು. ಆರ್‌ಸಿಬಿ ನೀಡಿದ 175 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭುವನೇಶ್ವರ್ ಮೊದಲ ಓವರ್‌ನಲ್ಲೇ ಆಘಾತ ನೀಡಿದರು. ಪಾತುಮ್ ನಿಸ್ಸಾಂಕ, ಕರುಣ್ ನಾಯರ್ ಮತ್ತು ಸಮೀರ್ ರಿಜ್ವಿ ಸೇರಿದಂತೆ ಡೆಲ್ಲಿಯ ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು.
ಐಪಿಎಲ್ 2026 ರ 26 ನೇ ಪಂದ್ಯ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 175 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಮೊದಲ ಓವರ್‌ನಲ್ಲೇ ಶಾಕ್ ನೀಡಿದರು. ಈ ಓವರ್ನ ನಾಲ್ಕನೇ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಪಾತುಮ್ ನಿಸ್ಸಾಂಕ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಸಿಸ್ಸಾಂಕ ಕೇವಲ 1 ರನ್ಗೆ ಸುಸ್ತಾದರು.
ಆ ನಂತರ ಇನ್ನಿಂಗ್ಸ್ನ ಮೂರನೇ ಓವರ್ ಬೌಲ್ ಮಾಡಲು ಬಂದ ಭುವನೇಶ್ವರ್ ಈ ಓವರ್‌ನಲ್ಲಿ ಕರುಣ್ ನಾಯರ್ ಮತ್ತು ಸಮೀರ್ ರಿಜ್ವಿ ಅವರನ್ನು ಔಟ್ ಮಾಡಿದರು. ಓವರ್ನ ಎರಡನೇ ಎಸೆತದಲ್ಲಿ ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್ಗೆ 5 ರನ್ ಬಾರಿಸಿದ್ದ ಕರುಣ್ ನಾಯರ್ ಬಲಿಯಾದರೆ, ಆ ನಂತರ ಬಂದ ಸಮೀರ್ ರಿಜ್ವಿ ಕೂಡ ಓವರ್ನ ಐದನೇ ಎಸೆತದಲ್ಲಿ ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಹಿಡಿದ ಸೂಪರ್ಮ್ಯಾನ್ ಕ್ಯಾಚ್ಗೆ ಕೇವಲ 2 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.

