ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ ಅರ್ಧಶತಕ ಬಾರಿಸಿದ ರಿಷಭ್ ಪಂತ್
Rishabh Pant's Unbeaten Half-Century: ದಕ್ಷಿಣ ಆಫ್ರಿಕಾ ಎ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ರಿಷಭ್ ಪಂತ್ ಅಜೇಯ ಅರ್ಧಶತಕ (64) ಗಳಿಸಿ ಭಾರತ ಎ ತಂಡಕ್ಕೆ ಆಸರೆಯಾಗಿದ್ದಾರೆ. 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಪಂತ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಪಂದ್ಯ ಗೆಲ್ಲಲು ಭಾರತ ಎ ತಂಡಕ್ಕೆ ಕೊನೆಯ ದಿನ 156 ರನ್‌ಗಳ ಅಗತ್ಯವಿದೆ.
ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಮೂರನೇ ದಿನದಂದು ಭಾರತ ಎ ತಂಡದ ನಾಯಕ ರಿಷಭ್ ಪಂತ್ ಅಜೇಯ ಅರ್ಧಶತಕ ಬಾರಿಸಿ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್‌ಗೆ ಬಂದ ಪಂತ್ ಅದ್ಭುತ ಅರ್ಧಶತಕ ಬಾರಿಸುವ ಮೂಲಕ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಗೆಲ್ಲಲು 275 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಆರಂಭವನ್ನು ಕಂಡಿತು. ಕೇವಲ 32 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಬ್ಯಾಟಿಂಗ್‌ಗೆ ಇಳಿದ ನಾಯಕ ರಿಷಭ್ ಪಂತ್, ರಜತ್ ಪಾಟಿದಾರ್ (28 ರನ್) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 87 ರನ್‌ಗಳನ್ನು ಸೇರಿಸಿದರು. ಪಂತ್ 65 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಅರ್ಧಶತಕವನ್ನು ಪೂರೈಸಿದರು.
ದಿನದಾಟದ ಅಂತ್ಯಕ್ಕೆ ಭಾರತ ಎ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 119 ರನ್ ಗಳಿಸಿದೆ. ಪಂತ್ 81 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 64 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಯುಷ್ ಬಡೋನಿ ಖಾತೆ ತೆರೆಯದೆ ಅಜೇಯರಾಗಿದ್ದಾರೆ. ಇದೀಗ ಪಂದ್ಯದ ಕೊನೆಯ ದಿನದಂದು ಭಾರತ ತಂಡ ಗೆಲುವು ಸಾಧಿಸಲು 156 ರನ್ ಗಳಿಸಬೇಕಾಗಿದೆ, ಕೈಯಲ್ಲಿ 6 ವಿಕೆಟ್‌ಗಳು ಮಾತ್ರ ಇವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

