AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ, ಪೊಲೀಸರಿಂದ ಲಘು ಲಾಠಿ ಚಾರ್ಜ್

ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ, ಪೊಲೀಸರಿಂದ ಲಘು ಲಾಠಿ ಚಾರ್ಜ್

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jun 27, 2026 | 2:52 PM

Share

ರಾಜ್ಯಾದೆಲ್ಲೆಡೆ ಇಂದು (ಜೂನ್ 27) ಕೆಂಪೇಗೌಡ ಜಯಂತಿ (Kempegowda Jayanti) ಕಾರ್ಯಕ್ರಮ ಆಚರಣೆ ಮಾಡಲಾಯ್ತು. ಆದ್ರೆ, ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಹೌದು...ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಹೇಳನ ಹೇಳಿಕೆ ನೀಡಿದ ಸಂಬಂಧ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು. ಕಾರ್ಯಕ್ರಮ ವೇದಿಕೆಯಿಂದ ಅವರನ್ನು ಹೊರಕಳಿಸುವಂತೆ ಯುವಕರ ಗುಂಪು ಲ್ಲಿ ಗಲಾಟೆ ಮಾಡಿದ್ದು, ಈ ವೇಳೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸಹ ಹರಸಾಹಸಪಟ್ಟಿದ್ದು, ಆದರೂ ಗಲಾಟೆ ಕಂಟ್ರೋಲ್ ತಪ್ಪುತ್ತಿದ್ದಂತೆಯೇ ಪೊಲೀಸರು ಕೊನೆಗೆ ಲಘು ಲಾಠಿ ಪ್ರಹಾರ ನಡೆಸಿದರು.

ಮುಖ್ಯಾಂಶಗಳು

  • ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ
  • ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗದ್ದಲ
  • ಪ್ರದೀಪ್ ಈಶ್ವರ್‌ರನ್ನು ವೇದಿಕೆಯಿಂದ ಹೊರಕಳಿಸುವಂತೆ ಹೆಚ್‌ಡಿಕೆ,ಸುಧಾಕರ್ ಬೆಂಬಲಿಗರಿಂದ ಆಕ್ರೋಶ

ಚಿಕ್ಕಬಳ್ಳಾಪುರ, (ಜೂನ್ 27): ರಾಜ್ಯಾದೆಲ್ಲೆಡೆ ಇಂದು (ಜೂನ್ 27) ಕೆಂಪೇಗೌಡ ಜಯಂತಿ (Kempegowda Jayanti) ಕಾರ್ಯಕ್ರಮ ಆಚರಣೆ ಮಾಡಲಾಯ್ತು. ಆದ್ರೆ, ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಹೌದು…ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಹೇಳನ ಹೇಳಿಕೆ ನೀಡಿದ ಸಂಬಂಧ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು. ಕಾರ್ಯಕ್ರಮ ವೇದಿಕೆಯಿಂದ ಅವರನ್ನು ಹೊರಕಳಿಸುವಂತೆ ಯುವಕರ ಗುಂಪು ಲ್ಲಿ ಗಲಾಟೆ ಮಾಡಿದ್ದು, ಈ ವೇಳೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸಹ ಹರಸಾಹಸಪಟ್ಟಿದ್ದು, ಆದರೂ ಗಲಾಟೆ ಕಂಟ್ರೋಲ್ ತಪ್ಪುತ್ತಿದ್ದಂತೆಯೇ ಪೊಲೀಸರು ಕೊನೆಗೆ ಲಘು ಲಾಠಿ ಪ್ರಹಾರ ನಡೆಸಿದರು.

ಉದ್ರಿಕ್ತ ಯುವಕರನ್ನು ಜಿಲ್ಲಾಧಿಕಾರಿಗಳು ಸಹ ಎಷ್ಟು ಸಮಾಧಾನಪಡಿಸಿದರೂ ಸಹ ಅವರು ಕೇಳಿಲ್ಲ. ಕೊನೆಗೆ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥಶ್ರೀಗಳನ್ನು ಕರೆಸಿ ಶಾಂತಿಗೊಳಿಸುವಲ್ಲಿ ಯಶಸ್ವಿಯಾದರು. ಯಾರೋ ಮೇಲಿನ ದ್ವೇಷವನ್ನು ಕೆಂಪೇಗೌಡರ ಮೇಲೆ ತೀರಿಸಿಕೊಳ್ಳಬೇಡಿ. ಕೆಂಪೇಗೌಡರ ಜಯಂತಿಯನ್ನು ಶಾಂತವಾಗಿ ಆಚರಿಸಿ. ನಿಮ್ಮ ನಿರ್ಧಾರಗಳಿಂದ ಚಿಕ್ಕಬಳ್ಳಾಪುರಕ್ಕೆ ಕೆಟ್ಟ ಹೆಸರು ಬರುತ್ತೆ. ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಗೆ ಅವಕಾಶ ನೀಡದಿದ್ದರೆ. ಹೆಚ್‌ಡಿಕೆ, ಹೆಚ್‌ಡಿಡಿ, ಡಿಕೆ ಶಿವಕುಮಾರ್​​​ ಗೆ ಅಪಮಾನ ಮಾಡಿದಂತೆ ಎಂದು ಸಮಾಧಾನಪಡಿಸಿದರು. ಇನ್ನು ಸ್ವಾಮೀಜಿಗಳು ಈ ಮಾತು ಹೇಳುತ್ತಿದ್ದಂತೆಯೇ ಯುವಕರು ಶಾಂತರಾಗಿದ್ದು, ಬಳಿಕ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮುಂದುವರೆಯಿತು.

Published on: Jun 27, 2026 02:51 PM

Follow Us