RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರ ಸಸ್ಪೆಂಡ್: ರಾಜ್ಯ ಸರ್ಕಾರ ದ್ವೇಷ ಭಾವನೆಯಿಂದ ವರ್ತಿಸುತ್ತಿದೆ; ಜೋಶಿ ಕಿಡಿ
ಯಾದಗಿರಿಯಲ್ಲಿ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಇಬ್ಬರು ಶಿಕ್ಷಕರನ್ನು ಒಂಬತ್ತು ತಿಂಗಳ ಬಳಿಕ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಕ್ರಮ ದ್ವೇಷಪೂರಿತ ಎಂದು ಆರೋಪಿಸಿರುವ ಅವರು, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಇಂತಹ ಆದೇಶಗಳು ನ್ಯಾಯಾಲಯದಲ್ಲಿ ರದ್ದಾಗುತ್ತವೆ ಎಂದು ಎಚ್ಚರಿಸಿದ್ದಾರೆ. ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ, ಆಗಸ್ಟ್ 28: ‘ರಾಜ್ಯ ಸರ್ಕಾರ ದ್ವೇಷ ಭಾವನೆಯಿಂದ ವರ್ತಿಸುತ್ತಿದೆ. ಸಂಘದ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ 1970ರಿಂದ ಇಂತಹ ಕೇಸ್ಗಳನ್ನು ಕೋರ್ಟ್ ಕಿತ್ತೆಸೆದಿದೆ. ಕೋರ್ಟ್ನಲ್ಲಿ ಕೇಸ್ ಬಿದ್ದೋಗುತ್ತೆ. ಸರ್ಕಾರದ ಮಾನ ಮರ್ಯಾದೆ ಹೋಗುತ್ತೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. RSS ಪಥಸಂಚಲನದಲ್ಲಿ ಭಾಗಿಯಾದ್ದ ಇಬ್ಬರು ಶಿಕ್ಷಕರ ಸಸ್ಪೆಂಡ್ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇದು ಸರ್ಕಾರದ ದ್ವೇಷಪೂರಿತ ಹಾಗೂ ಹೇಡಿತನದ ಕ್ರಮ. ಆರ್‌ಎಸ್‌ಎಸ್ ಸ್ವತಂತ್ರ ಸಂಘಟನೆಯಾಗಿದ್ದು, ಇಂತಹ ನೌಕರರ ಮೇಲಿನ ಕ್ರಮಗಳನ್ನು ಈ ಹಿಂದೆಯೂ ನ್ಯಾಯಾಲಯಗಳು ರದ್ದುಗೊಳಿಸಿವೆ. ಶಿಕ್ಷಕರ ಮೇಲಿನ ಅಮಾನತು ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ’.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

