ಮಿತಿ ಮೀರಿದರೆ ಪರಿಣಾಮ ನೆಟ್ಟಗೆ ಇರಲ್ಲ: ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ವಿಎಸ್ ಉಗ್ರಪ್ಪ ಅವರು ಸುದೀಪ್ ಬಗ್ಗೆ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ‘ನಾಯಕರ ಮಗನಾಗಿದ್ದರೆ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್’ ಎಂದು ಉಗ್ರಪ್ಪ ಹೇಳಿದ್ದರು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಎದುರಾದ ವಿರೋಧದ ಬಗ್ಗೆ ಉಗ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರು ಕಿಚ್ಚ ಸುದೀಪ್ ಬಗ್ಗೆ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ‘ನಾಯಕರ ಮಗನಾಗಿದ್ದರೆ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್’ ಎಂದು ಉಗ್ರಪ್ಪ ಅವರು ಹೇಳಿದ್ದರು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಎದುರಾದ ವಿರೋಧದ ಬಗ್ಗೆ ಉಗ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರಾದರೂ ಸೋಶಿಯಲ್ ಮೀಡಿಯಾ ಮೂಲಕ ಅಶ್ಲೀಲ ಪದ ಬಳಕೆ ಮಾಡುವುದು ಶೋಭೆ ತರಲ್ಲ. ಸುದೀಪ್ ಬೆಂಬಲಿಗರಿಗೂ ಇದನ್ನೇ ಹೇಳುತ್ತೇನೆ. ಕಾನೂನಿನ ಚೌಕಟ್ಟಿನಲ್ಲಿ ತಪ್ಪಿಗೆ ಸಿಕ್ಕಿಹಾಕಿಕೊಳ್ಳಲು ಹೋಗಬೇಡಿ. ನಾನು ಮೂಲತಃ ವಕೀಲ. ಕೇವಲ ಮಾಜಿ ಸಂಸದ ಅಲ್ಲ. ಕಾನೂನು ನನಗೆ ಗೊತ್ತು. ಮಿತಿ ಮೀರಿ ಮಾತನಾಡಿದರೆ ಪರಿಣಾಮ ನೆಟ್ಟಗೆ ಇರಲ್ಲ’ ಎಂದು ಉಗ್ರಪ್ಪ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

