AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಸಾಬರಷ್ಟೇ ಓಟ್ ಹಾಕಿದ್ದಾರಾ ಸಿದ್ದರಾಮಯ್ಯ? ಬಾಗಲಕೋಟೆಯಲ್ಲಿ ಗುಡುಗಿದ ಯತ್ನಾಳ್

ನಿಮಗೆ ಸಾಬರಷ್ಟೇ ಓಟ್ ಹಾಕಿದ್ದಾರಾ ಸಿದ್ದರಾಮಯ್ಯ? ಬಾಗಲಕೋಟೆಯಲ್ಲಿ ಗುಡುಗಿದ ಯತ್ನಾಳ್

ಗಣಪತಿ ಶರ್ಮಾ
|

Updated on:Apr 03, 2026 | 9:21 AM

Share

Karnataka By-Election 2026: ಬಾಗಲಕೋಟೆ ಉಪಚುನಾವಣೆಯ ಪ್ರಚಾರದಲ್ಲಿ ಶಾಸಕ ಯತ್ನಾಳ್ ಅಬ್ಬರಿಸಿದ್ದಾರೆ. ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಜೆಸಿಬಿ ಕ್ರಮಕ್ಕೆ ಆಗ್ರಹಿಸಿದ ಅವರು, ಸಿದ್ದರಾಮಯ್ಯ ಸರ್ಕಾರವನ್ನು ‘ಒಂದು ಸಮುದಾಯದ ಪರ’ ಎಂದು ಟೀಕಿಸಿ, ಹಿಂದೂಗಳ ಮತ ಕ್ರೂಡೀಕರಣಕ್ಕೆ ಕರೆ ನೀಡಿದರು. ಯತ್ನಾಳ್ ಬೆಂಕಿ ಭಾಷಣದ ವಿಡಿಯೋ ಇಲ್ಲಿದೆ.

ಬಾಗಲಕೋಟೆ, ಏಪ್ರಿಲ್ 3: ಬಾಗಲಕೋಟೆಯಲ್ಲಿ ಉಪಚುನಾವಣೆಯ ಕಣ ರಂಗೇರಿದ್ದು, ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಸರಿ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯನ್ನು ಪ್ರಸ್ತಾಪಿಸಿದ ಅವರು, ಹಿಂದೂಗಳೆಲ್ಲರೂ ಒಂದಾಗುವಂತೆ ಕರೆ ನೀಡಿದರು. ಶಿವಾಜಿ ಮಹಾರಾಜರು ಇಲ್ಲದಿದ್ದರೆ ಸನಾತನ ಧರ್ಮದ ರಕ್ಷಣೆ ಸಾಧ್ಯವಾಗುತ್ತಿರಲಿಲ್ಲ. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ಜೆಸಿಬಿ ಪ್ರಯೋಗ ಮಾಡಬೇಕು ಎಂದು ಗುಡುಗಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದು ಸಾಬರ ಸರ್ಕಾರ. ಒಳಗೆ ಕೂತು ಬೆಂಕಿ ಹಚ್ಚುವ ಮುಲ್ಲಾಗಳಿಗೆ ತಿಂಗಳಿಗೆ 6 ಸಾವಿರ ಕೊಡತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಒಂದು ಸಮುದಾಯದ ಪ್ರೀತ್ಯರ್ಥಕ್ಕಾಗಿ ಬಜೆಟ್‌ನಲ್ಲಿ ಸಾವಿರಾರು ಕೋಟಿ ಮೀಸಲಿಡುತ್ತಿದ್ದಾರೆ. ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು. ಏಪ್ರಿಲ್ 9 ರಂದು ನಡೆಯುವ ಮತದಾನದಲ್ಲಿ ಪ್ರತಿಯೊಬ್ಬ ಹಿಂದೂ ಮುಂಜಾನೆ 7 ಗಂಟೆಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವಂತೆ ಅವರು ವಿನಂತಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 03, 2026 09:17 AM
Follow Us