ಹೆಚ್ಚುವರಿ ಹಣ ಪಾವತಿಸಲು ಇಷ್ಟಪಡದ ನಾಲ್ವರು ಏರ್ಪೋರ್ಟ್ನಲ್ಲಿ ಕುಳಿತು 30 ಕೆಜಿ ಕಿತ್ತಳೆ ಹಣ್ಣು ತಿಂದರು! ಬಾಯಲ್ಲೆಲ್ಲ ಹುಣ್ಣು..
ತಿನ್ನುವಾಗ ಹೇಗೋ ತಿಂದು ಮುಗಿಸಿದವರಿಗೆ ಬಳಿಕ ಸಮಸ್ಯೆಯಾಗಿದೆ. ಎಲ್ಲರ ಬಾಯಲ್ಲೂ ಹುಣ್ಣು ಆಗಿ ಉರಿಯುತ್ತಿದೆ. ಇನ್ನೊಮ್ಮೆ ಯಾವತ್ತೂ ನಾವು ಕಿತ್ತಳೆ ಹಣ್ಣು ತಿನ್ನಲು ಇಷ್ಟಪಡದಂತಾಗಿದೆ ಎಂದೂ ವಾಂಗ್ ಹೇಳಿದ್ದಾರೆ.
ವಾಯುಮಾರ್ಗ ಸಾರಿಗೆಯಲ್ಲಿ ನಿಯಮಗಳು ಹೆಚ್ಚು. ಅದನ್ನು ಪ್ರಯಾಣಿಕರು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಅದರಲ್ಲೂ ಬ್ಯಾಗೇಜ್ಗಳಿಗೆ ಲಿಮಿಟ್ ಇದ್ದು, ಅದಕ್ಕೂ ಮೀರಿ ಯಾರಾದರೂ ಭಾರವನ್ನು ಹೊತ್ತು ತಂದರೆ, ಅದಕ್ಕೆ ಹೆಚ್ಚುವರಿ ಶುಲ್ಕ ನೀಡಲೇಬೇಕಾಗುತ್ತದೆ. ಇಂದು ವಿಮಾನಯಾನ ಸಂಬಂಧ ಅಂತಾರಾಷ್ಟ್ರೀಯವಾಗಿ ಇರುವ ನಿಯಮ. ಈಗ ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್ ಏರ್ಪೋರ್ಟ್ನಲ್ಲಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿತ್ತು.
ಈ ವಿಮಾನ ನಿಲ್ದಾಣಕ್ಕೆ ನಾಲ್ವರು ಪ್ರಯಾಣಿಕರು ಬಂದಿದ್ದಾರೆ. ಅವರ ಬಳಿ 30 ಕೆಜಿ ತೂಕದ ಕಿತ್ತಳೆಹಣ್ಣು ಇತ್ತು. ಆದರೆ ಏರ್ಪೋರ್ಟ್ಗೆ ಬಂದ ಅವರಿಗೆ ತಾವು ಈ ಬ್ಯಾಗೇಜ್ಗೆ 300 ಯುವಾನ್ (3384ರೂಪಾಯಿ) ಹೆಚ್ಚುವರಿಯಾಗಿ ನೀಡಬೇಕು ಎಂದು ಅವರಿಗೆ ತಿಳಿಯಿತು. ಆದರೆ ಅವರು ಹೆಚ್ಚುವರಿ ಹಣ ನೀಡಲು ಸಿದ್ಧರಿರಲಿಲ್ಲ. ಅದರ ಬದಲಿಗೆ ಅಷ್ಟೂ 30 ಕೆಜಿ ಕಿತ್ತಳೆ ಹಣ್ಣನ್ನು ನಾಲ್ವರೂ ಸೇರಿ ತಿಂದಿದ್ದಾರೆ..!
ಇದು ಖಂಡಿತ ಜೋಕ್ ಅಲ್ಲ, ನಾಲ್ಕು ಜನರಲ್ಲಿ ಒಬ್ಬನಾದ ವಾಂಗ್ ಗ್ಲೋಬಲ್ ಟೈಂಗೆ ಈ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. 300 ಯುವಾನ್ ಸಿಕ್ಕಾಪಟೆ ದುಬಾರಿ ಎನಿಸಿತು. ಹಾಗಾಗಿ ಏರ್ಪೋರ್ಟ್ನಲ್ಲಿಯೇ ಅಷ್ಟೂ ಹಣ್ಣು ತಿನ್ನಲು ನಿರ್ಧರಿಸಿದೆವು. ನಾಲ್ವರೂ ಸೇರಿ 20-30ನಿಮಿಷದಲ್ಲಿ ಹಣ್ಣುಗಳನ್ನು ಖಾಲಿ ಮಾಡಿದೆವು ಎಂದಿದ್ದಾರೆ. ತಿನ್ನುವಾಗ ಹೇಗೋ ತಿಂದು ಮುಗಿಸಿದವರಿಗೆ ಬಳಿಕ ಸಮಸ್ಯೆಯಾಗಿದೆ. ಎಲ್ಲರ ಬಾಯಲ್ಲೂ ಹುಣ್ಣು ಆಗಿ ಉರಿಯುತ್ತಿದೆ. ಇನ್ನೊಮ್ಮೆ ಯಾವತ್ತೂ ನಾವು ಕಿತ್ತಳೆ ಹಣ್ಣು ತಿನ್ನಲು ಇಷ್ಟಪಡದಂತಾಗಿದೆ ಎಂದೂ ವಾಂಗ್ ಹೇಳಿದ್ದಾರೆ.
ನಮ್ಮ ಆ್ಯಪ್ ನಿಷೇಧ ಮಾಡುವ ಮೂಲಕ ಭಾರತ WTO ನಿಯಮ ಉಲ್ಲಂಘನೆ ಮಾಡಿದೆ; ಚೀನಾ ಅಸಮಾಧಾನ