‘ಪುಟಿನ್ ಪ್ರೇಯಸಿಯನ್ನು ಹೊರಹಾಕಿ’ ಎಂಬ ಮನವಿ ಜಾಲತಾಣಗಳಲ್ಲಿ ವೈರಲ್; ಯಾರು ಪುಟಿನ್ ಗೆಳತಿ?
Vladimir Putin: ರಷ್ಯಾದ ‘ಅತ್ಯಂತ ಫ್ಲೆಕ್ಸಿಬಲ್ ಮಹಿಳೆ’ ಎಂದು ಗುರುತಿಸಿಕೊಂಡಿರುವ ಕಬೀಬಾ ಪುಟಿನ್ ಅವರ ಯುನೈಟೆಡ್ ರಷ್ಯಾ ಪಾರ್ಟಿಯ ಪ್ರತಿನಿಧಿಯಾಗಿ 6 ವರ್ಷಗಳ ಕಾಲ ಸಂಸತ್ ಸದಸ್ಯೆಯಾಗಿದ್ದರು.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 25 ದಿನ ಕಳೆದಿದೆ ಮತ್ತು ವ್ಯಾಪಕ ಅಂತರರಾಷ್ಟ್ರೀಯ ಒತ್ತಡ ಹಾಗೂ ನಿರ್ಬಂಧಗಳ ಹೊರತಾಗಿಯೂ ವ್ಲಾದಿಮಿರ್ ಪುಟಿನ್ (Vladimir Putin) ಯುದ್ಧ ನಿಲ್ಲಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ ರಷ್ಯಾ ಯುದ್ಧವನ್ನು ತೀವ್ರಗೊಳಿಸುತ್ತಿದ್ದಂತೆ, ಪುಟಿನ್ ವಿರುದ್ಧ ಒಂದು ಅಭಿಯಾನ ಶುರುವಾಗಿದೆ. change.org ಎಂಬ ವೆಬ್ ಸೈಟ್ನಲ್ಲಿ ಪುಟಿನ್ ಪ್ರೇಯಸಿ (girlfriend) ಎಂದು ಹೇಳಲಾಗಿರುವ ಮಾಜಿ ಜಿಮ್ನಾಸ್ಟ್ (gymnast) ಒಬ್ಬರ ವಿರುದ್ಧ ಒಂದು ಮನವಿಯನ್ನು ಮಾಡಲಾಗಿದೆ. ರಷ್ಯಾ, ಉಕ್ರೇನ್ ಮತ್ತು ಬೆಲಾರಸ್ ದೇಶಗಳ ಮನವಿದಾರರು; ಸ್ವಿಜರ್ ಲ್ಯಾಂಡ್ (Switzerland) ಒಂದು ಐಷಾರಾಮಿ ಬಂಗ್ಲೆಯೊಂದರಲ್ಲಿ ತನ್ನ ಮೂರು ಮಕ್ಕಳೊಂದಿಗೆ ಅಡಗಿರುವರೆಂದು ಹೇಳಲಾಗುತ್ತಿರುವ ಪುಟಿನ್ ಪ್ರೇಯಸಿಯನ್ನು ಆ ದೇಶ ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಒಲಂಪಿಕ್ಸ್ ಕ್ರಿಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ 38-ವರ್ಷ ವಯಸ್ಸಿನ ಈ ಮಾಜಿ ಜಿಮ್ನಾಸ್ಟ್ ಹೆಸರು ಅಲಿನಾ ಕಬೀವಾ. ದಿ ಗಾರ್ಡಿಯನ್ ಸೇರಿದಂತೆ ಹಲವಾರು ಪತ್ರಿಕೆಗಳು ಕಬೀವಾ ಅವರು ಪುಟಿನ್ ಪ್ರೇಯಸಿ ಎಂದು ಹೇಳಿವೆ. ಆದರೆ ಪುಟಿನ್ ಅಧಿಕೃತವಾಗಿ ಯಾವತ್ತೂ ಆಕೆಯನ್ನು ತನ್ನ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡಿಲ್ಲ ಅಥವಾ ಒಪ್ಪಿಕೊಂಡಿಲ್ಲ.
ಮನವಿಯನ್ನು ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿದ ಬಳಿಕ 50,000 ಕ್ಕಿಂತ ಹೆಚ್ಚು ಜನ ಅದನ್ನು ಬೆಂಬಲಿಸಿ ಸಹಿ ಮಾಡಿದ್ದಾರೆ. ‘ತನ್ನ ಫ್ಯೂರಾ (Führer) ಜೊತೆ ಸೇರಿಕೊಳ್ಳಲು ಇವಾ ಬ್ರೌನ್ ಗೆ ಇದು ಸಕಾಲ,’ ಎಂಬ ಕಠೋರ ಶಬ್ದಗಳನ್ನು ಮನವಿಯಲ್ಲಿ ಬಳಸಲಾಗಿದೆ.
‘ಭೀಕರ ಯುದ್ಧ ಜಾರಿಯಲ್ಲಿದ್ದರೂ ಪುಟಿನ್ ಸಾಮ್ರಾಜ್ಯದ ಒಬ್ಬ ಸಹಯೋಗಿಗೆ ಸ್ವಿಜರ್ ಲ್ಯಾಂಡ್ ಇನ್ನೂ ತನ್ನ ದೇಶದಲ್ಲಿ ಅಶ್ರಯ ನೀಡಿದೆ,’ ಅಂತಲೂ ಮನವಿಯಲ್ಲಿ ಹೇಳಲಾಗಿದೆ. ಮನವಿಯನ್ನು ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪೋಸ್ಟ್ ಮಾಡಲಾಗಿದೆ.
ಪುಟಿನ್ ಉಕ್ರೇನ್ ಮೇಲೆ ಅಕ್ರಮಣ ಆರಂಭಿಸಿದ ನಂತರ ಕಬೀವಾರನ್ನು ಸ್ವಿಜರ್ ಲ್ಯಾಂಡ್ ಗೆ ಕಳಿಸಿಲಾಗಿದೆ ಎಂಬ ವದಂತಿಗಳ ನಡುವೆ ವೆಬ್ ಸೈಟ್ ಮುಖಾಂತರ ಸದರಿ ಮನವಿಯನ್ನು ಮಾಡಲಾಗಿದೆ.
ರಷ್ಯಾದ ‘ಅತ್ಯಂತ ಫ್ಲೆಕ್ಸಿಬಲ್ ಮಹಿಳೆ’ ಎಂದು ಗುರುತಿಸಿಕೊಂಡಿರುವ ಕಬೀಬಾ ಪುಟಿನ್ ಅವರ ಯುನೈಟೆಡ್ ರಷ್ಯಾ ಪಾರ್ಟಿಯ ಪ್ರತಿನಿಧಿಯಾಗಿ 6 ವರ್ಷಗಳ ಕಾಲ ಸಂಸತ್ ಸದಸ್ಯೆಯಾಗಿದ್ದರು.
ಕಬೀವಾ ಏಳು ವರ್ಷಗಳಿಗೂ ಹೆಚ್ಚು ಸಮಯದಿಂದ ಕ್ರೆಮ್ಲಿನ್ ಪರ ಮಾಧ್ಯಮ ಸಮೂಹವಾದ ನ್ಯಾಷನಲ್ ಮೀಡಿಯಾ ಗ್ರೂಪ್‌ನಲ್ಲಿ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿ ಡೈಲಿ ಮೇಲ್ ವರದಿಯೊಂದರ ಪ್ರಕಾರ, ಅವರು ವರ್ಷಕ್ಕೆ ಸುಮಾರು 81 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ.
ಕಬೀವಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಕೊನೆಯ ಬಾರಿಗೆ ಆಕೆ ಕೆಮೆರಾವೊಂದರಲ್ಲಿ ಸೆರೆಯಾಗಿದ್ದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಸ್ಕೋದಲ್ಲಿ ನಡೆದ ಡಿವೈನ್ ಗ್ರೇಸ್ ರಿದಮಿಕ್ ಜಿಮ್ನಾಸ್ಟಿಕ್ಸ್ ಟೂರ್ನಮೆಂಟ್‌ನಲ್ಲಿ ನೃತ್ಯವನ್ನು ಮಾಡುವಾಗ.
2004 ಅಥೆನ್ಸ್ ಒಲಂಪಿಕ್ಸ್ ಜಿಮ್ನಾಸ್ಟಿಕ್ಸ್ ರಿದಮಿಕ್ ಈವೆಂಟ್ ನಲ್ಲಿ ಕಬೀವಾ ಚಿನ್ನದ ಪದಕ ಗೆದ್ದಿದ್ದರು. ಉಕ್ರೇನ್ ತೀವ್ರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ರಷ್ಯಾ, ಬೆಲಾರಸ್ ಮತ್ತು ಉಕ್ರೇನಿನ ಜನರನ್ನು ಒಂದುಗೂಡಿಸುವ ಕೆಲಸ ನಾವು ಮಾಡುತ್ತಿದ್ದೇವೆ ಮತ್ತು ಕಬೀವಾ ಅವರನ್ನು ತಮ್ಮ ದೇಶದಿಂದ ಹೊರಹಾಕುವಂತೆ ಸ್ವಿಸ್ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಮನವಿಯಲ್ಲಿ ಹೇಳಲಾಗಿದೆ.
‘ರಷ್ಯಾ ಸಂಯುಕ್ತ ಸರ್ಕಾರದ ಮೇಲೆ ಹೇರಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ರಾಜಕೀಯ ಮತ್ತು ಮೀಡಿಯಾದ ಪ್ರಭಾವೀ ವ್ಯಕ್ತಿಯಾಗಿರುವ ಜೊತೆಗೆ ಮಾಜಿ ಅಥ್ಲೀಟ್ ಕೂಡ ಆಗಿರುವ ಅಲೀನಾ ಕಬೀವಾ ನಿಮ್ಮ ದೇಶದಲ್ಲಿ ಅಡಗಿ ಕೂತಿದ್ದಾರೆ,’ ಎಂದು ಮನವಿಯಲ್ಲಿ ಹೇಳಲಾಗಿದೆ.
ಅಧುನಿಕ ಇತಿಹಾಸದಲ್ಲಿ ಸ್ವಿಜರ್ ಲ್ಯಾಂಡ್ ಮೊಟ್ಟ ಮೊದಲ ಬಾರಿಗೆ ತಟಸ್ಥ ನೀತಿಯನ್ನು ಉಲ್ಲಂಘಿಸಿದೆ ಅಂತಲೂ ಮನವಿಯಲ್ಲಿ ಉಲ್ಲೇಖಿಲಾಗದೆ.
ಇದನ್ನೂ ಓದಿ: ಮರಿಯುಪೋಲ್ನಿಂದ ರಷ್ಯಾ ಸೇನೆ ಹಿಮ್ಮೆಟ್ಟಿಸಲು ಸಹಾಯ ಮಾಡಿ; ಇಸ್ರೇಲ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮನವಿ
Published On - 8:35 am, Thu, 24 March 22