ತನ್ನ ಏಜೆಂಟ್​ಗಳನ್ನು ಎಡಿಟರ್​ಗಳಾಗಿ ನೇಮಕ ಮಾಡಿ ವಿಕಿಪೀಡಿಯಾ ಕಂಟೆಂಟ್ ಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಸೌದಿ ಅರೇಬಿಯ ಮುಂದುವರಿಸಿದೆ: ವರದಿ

ಇದಕ್ಕೂ ಮುನ್ನ, ವಿಕಿಪೀಡಿಯದ ಮಾತೃಸಂಸ್ಥೆಯಾಗಿರುವ ವಿಕಿಮೀಡಿಯ ಸೌದಿ ಅರೇಬಿಯಾದಲ್ಲಿದ್ದ ತನ್ನ ಆಡಳಿತಾಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿತ್ತು.

ತನ್ನ ಏಜೆಂಟ್​ಗಳನ್ನು ಎಡಿಟರ್​ಗಳಾಗಿ ನೇಮಕ ಮಾಡಿ ವಿಕಿಪೀಡಿಯಾ ಕಂಟೆಂಟ್ ಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಸೌದಿ ಅರೇಬಿಯ ಮುಂದುವರಿಸಿದೆ: ವರದಿ
ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2023 | 7:00 PM

ಸೌದಿ ಅರೇಬಿಯಾ ಸರ್ಕಾರವು (Saudi Arabia) ಸಂಸ್ಥೆಯ ಉನ್ನತ ಱಂಕಿನ ಅಡಳಿತಾಧಿಕಾರಿಗಳನ್ನು ನೇಮಿಸಿ ವಿಕಿಪಿಡಿಯಾದಲ್ಲಿ (Wikipedia) ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿದೆ. ವೆಬ್ ಸೈಟ್ ನಲ್ಲಿ ಲಭ್ಯವಿರುವ ಸಾರಾಂಶದ (content) ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಅದು ಹಾಗೆ ಮಾಡುತ್ತಿದೆ ಅನ್ನೋದು ವರದಿಯೊಂದರ ಮೂಲಕ ಬಯಲಾಗಿದೆ. ಸೌದಿ ಅರೇಬಿಯ ಸರ್ಕಾರವು ವಿಕಿಪಿಡಿಯಾದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಇಬ್ಬರು ಅಧಿಕಾರಿಗಳಾದ ಒಸಾಮಾ ಖಾಲಿದ್ ಮತ್ತು ಜಿಯಾದ್ ಅಲ್-ಸೊಫಿಯಾನಿರನ್ನು ಸಾರ್ವಜನಿಕ ಅಭಿಪ್ರಾಯವನ್ನು ಕಡೆಗಣಿಸಿದ ಮತ್ತು ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದ ಅರೋಪದಲ್ಲಿ ಜೈಲಿಗೆ ತಳ್ಳಿದೆ.

ಅವರಿಬ್ಬರಿಗೆ ಕ್ರಮವಾಗಿ 5 ಮತ್ತು 8 ವರ್ಷ ಸೆರೆವಾಸದ ಶಿಕ್ಷೆಯನ್ನು ವಿಧಿಸಲಾಗಿದೆ. ದೇಶದ ಕೆಲವು ರಾಜಕೀಯ ಕಾರ್ಯರ್ತರ ಬಗ್ಗೆ ಮಹತ್ತರವಾದ ಮಾಹಿತಿ ಶೇರ್ ಮಾಡಿದ ಆರೋಪದಲ್ಲಿ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ವರದಿ ಹೇಳಿದೆ. ಅವರ ಬಂಧನದ ನಂತರ ಸೌದಿ ಅರೇಬಿಯ ಸರ್ಕಾರವು ಸಂಸ್ಥೆಯ ಉನ್ನತ ಱಂಕಿನ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿಕೊಂಡು ದೇಶದ ಬಗೆಗಿನ ಮಾಹಿತಿ ಮೇಲೆ ನಿಯಂತ್ರಣ ಸಾಧಿಸಲು ವಿಕಿಪೀಡಿಯ ವೆಬ್ ಸೈಟ್ ನಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿದೆ.

ಇದನ್ನೂ ಓದಿ:  ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬೇಡ ಎಂಬ ಮನವಿಗೆ ಒಪ್ಪಿದ ಕೇಂದ್ರ ಸಚಿವ ನಿತಿನ್ ಗಡ್ಕರಿ: ಸಿಎಂ ಬೊಮ್ಮಾಯಿ

ಇದಕ್ಕೂ ಮುನ್ನ, ವಿಕಿಪೀಡಿಯದ ಮಾತೃಸಂಸ್ಥೆಯಾಗಿರುವ ವಿಕಿಮೀಡಿಯ ಸೌದಿ ಅರೇಬಿಯಾದಲ್ಲಿದ್ದ ತನ್ನ ಆಡಳಿತಾಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿತ್ತು.

‘ಸೌದಿ ಅರೇಬಿಯ ಸರ್ಕಾರವು ತಾವು ಹೇಳಿದ ಹಾಗೆ ಕೇಳದ ಸಂಪಾದಕರನ್ನು ಜೈಲಿಗೆ ಹಾಕಿ ತನ್ನ ಏಜೆಂಟ್ ಗಳನ್ನು ಸ್ವತಂತ್ರವಾದ ಸಂಪಾದಕರ ಹಾಗೆ ವರ್ತಿಸಲು ಬಿಟ್ಟು ವಿಕಿಪಿಡಿಯಾದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿ ವೆಬ್ ಸೈಟ್ ನಲ್ಲಿರುವ ವಿಷಯಗಳನ್ನು ತನಗೆ ಬೇಕಾದ ರೀತಿಯಲ್ಲಿ ತಿರುಚಿಕೊಳ್ಳುತ್ತಿದೆ. ಇದೊಂದು ಕೆಟ್ಟ ಸಂಸ್ಕೃತಿ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ತನ್ನ ಗೂಢಚಾರರನ್ನು ಬಿಟ್ಟು ತನಗೆ ಬೇಕಾದ ಹಾಗೆ ಸ್ವತಂತ್ರವಾದ ಕಂಟೆಂಟ್ ತಯಾರಿಸಿಕೊಳ್ಳುವುದನ್ನು ಸೌದಿ ಅರೇಬಿಯಾ ಸರ್ಕಾರ ಮಾಡುತ್ತಿದೆ,’ ಎಂದು ಡಾನ್ ಮಾಧ್ಯಮದ ಕಾರ್ಯನಿರ್ವಾಹಕ ನಿರ್ದೇಶಕಿ ಸಾರಾ ಲೇಹ್ ವಿಟ್ಸನ್ ಹೇಳಿದ್ದಾರೆ.

ಇದನ್ನೂ ಓದಿ: Covid Guidelines: ವಿದೇಶದಿಂದ ಬರುವವರಿಗೆ ಕೋವಿಡ್ ಮಾರ್ಗಸೂಚಿ ಪರಿಷ್ಕರಣೆ, ಇಲ್ಲಿದೆ ಮಾಹಿತಿ

ಕಂಟೆಂಟ್ ಗಳಿಗಾಗಿ ವಿಕಿಪೀಡಿಯ ವಲಂಟೀಯರ್ ಗಳ ಮೇಲೆ ಅತುಕೊಂಡಿದ್ದು, ಅವರು ಅಡ್ಮಿನಿಸ್ಟ್ರೇಟರ್ಸ್ ಮತ್ತ ಎಡಿಟರ್ ಗಳಾಗಿ ಉಚಿತ ಸೇವೆ ಒದಗಿಸುತ್ತಾರೆ. ವಿಕಿಮೀಡಿಯ ಅವರ ಸೇವೆಯನ್ನು ಅಧಿಕೃತತಗೊಳಿಸದ ನಂತರ ಅವರನ್ನು ವಿಕಿಪೀಡಿಯಾ ಯೂಸರ್ಸ್ ಅಂತ ಕರೆಯಲಾಗುತ್ತದೆ. ಈ ಯೂಸರ್ಸ್ ವಿಕಿಮಮೀಡಿಯಾದ ಉದ್ಯೋಗಿಗಳಲ್ಲ ಮತ್ತು ಆಗಲೇ ಹೇಳಿದಂತೆ ವಿಕಿಮೀಡಿಯಾ ಅವರಿಗೆ ಯಾವುದೇ ರೀತಿಯ ಸಂಭಾವನೆ, ಗೌರವ ಧನ ನೀಡುವುದಿಲ್ಲ. ಅದರೆ ಸಂಸ್ಥೆಯು ಅವರಿಗೆ ಸ್ವತಂತ್ರ ಎಡಿಟರ್ ಗಳಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸುತ್ತದೆ ಮತ್ತು ಕಂಟೆಂಟನ್ನು ಎಡಿಟ್ ಮಾಡುವ ಮತ್ತು ಹೊಸ ಕಂಟೆಂಟ್ ಸೇರಿಸುವ ಸ್ವಾತಂತ್ರ್ಯ ನೀಡುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ