ಆಫ್ಘಾನ್ನಲ್ಲಿ ಸರಣಿ ಬಾಂಬ್ ಸ್ಫೋಟ, 62 ಮಂದಿ ಬಲಿ
ಕಾಬೂಲ್: ಪೂರ್ವ ಆಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದ ಹಸ್ಕಮೆನ ಜಿಲ್ಲಾ ವ್ಯಾಪ್ತಿಯ ಮಸೀದಿಯಲ್ಲಿ ಬಾಂಬ್ ದಾಳಿ ಸಂಭವಿಸಿದ್ದು 62 ಮಂದಿ ಮೃತಪಟ್ಟಿದ್ದಾರೆ. ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಸರಣಿ ಬಾಂಬ್ ಸ್ಫೋಟಗೊಂಡಿದೆ. 62 ಜನರು ಮೃತಪಟ್ಟಿದ್ದು, ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಬಾಂಬ್ ದಾಳಿ ವೇಳೆ ಮಸೀದಿಯಲ್ಲಿ ಸುಮಾರು 350ಕ್ಕೂ ಹೆಚ್ಚು ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಬಾಂಬ್ ದಾಳಿಯನ್ನು ಆಫ್ಘಾನಿಸ್ತಾನ ಸರ್ಕಾರ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಸ್ಫೋಟದ […]
ಕಾಬೂಲ್: ಪೂರ್ವ ಆಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದ ಹಸ್ಕಮೆನ ಜಿಲ್ಲಾ ವ್ಯಾಪ್ತಿಯ ಮಸೀದಿಯಲ್ಲಿ ಬಾಂಬ್ ದಾಳಿ ಸಂಭವಿಸಿದ್ದು 62 ಮಂದಿ ಮೃತಪಟ್ಟಿದ್ದಾರೆ.
ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಸರಣಿ ಬಾಂಬ್ ಸ್ಫೋಟಗೊಂಡಿದೆ. 62 ಜನರು ಮೃತಪಟ್ಟಿದ್ದು, ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಬಾಂಬ್ ದಾಳಿ ವೇಳೆ ಮಸೀದಿಯಲ್ಲಿ ಸುಮಾರು 350ಕ್ಕೂ ಹೆಚ್ಚು ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಬಾಂಬ್ ದಾಳಿಯನ್ನು ಆಫ್ಘಾನಿಸ್ತಾನ ಸರ್ಕಾರ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.
ಸ್ಫೋಟದ ಮೂಲ ಕಾರಣ ತಿಳಿದು ಬಂದಿಲ್ಲ. ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
Published On - 8:08 am, Sat, 19 October 19