AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್​ನಲ್ಲಿ ಮೂರನೇ ಕೊರೊನಾ ಲಸಿಕೆಗೂ ಸಿಕ್ತು ಅನುಮತಿ.. ಮಾರುಕಟ್ಟೆಗೆ ಬರಲಿದೆ ಮಾಡೆರ್ನಾ

ವಿಶೇಷವೆಂದರೆ ಮಾಡೆರ್ನಾ ಸಂಸ್ಥೆಯ ಲಸಿಕೆ ಬಳಕೆಗೆ ಅರ್ಹವಾಗಿದೆ ಎಂದು ದೇಶದಲ್ಲಿ ಅನುಮೋದನೆ ಸಿಗುವ ಮೊದಲೇ ಬ್ರಿಟನ್​ 70ಲಕ್ಷ ಡೋಸ್​ ಲಸಿಕೆಯನ್ನು ಮುಂಗಡವಾಗಿ ಕಾಯ್ದಿರಿಸಿತ್ತು.

ಬ್ರಿಟನ್​ನಲ್ಲಿ ಮೂರನೇ ಕೊರೊನಾ ಲಸಿಕೆಗೂ ಸಿಕ್ತು ಅನುಮತಿ.. ಮಾರುಕಟ್ಟೆಗೆ ಬರಲಿದೆ ಮಾಡೆರ್ನಾ
ಪ್ರಾತಿನಿಧಿಕ ಚಿತ್ರ
Skanda
| Edited By: |

Updated on: Jan 08, 2021 | 7:16 PM

Share

ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಮೊದಲೇ ಕೊರೊನಾ ಲಸಿಕೆ ವಿತರಣೆ ಆರಂಭಿಸಿದ್ದ ಬ್ರಿಟನ್​ ಇಂದು (ಜ.8) ಮಾಡೆರ್ನಾ ಸಂಸ್ಥೆಯ ಕೊರೊನಾ ಲಸಿಕೆ ಬಳಕೆಗೆ ಅಸ್ತು ಎಂದಿದೆ. ಆ ಮೂಲಕ ಬ್ರಿಟನ್​ನಲ್ಲಿ ಮೂರು ಸಂಸ್ಥೆಯ ಕೊರೊನಾ ಲಸಿಕೆಗಳ ಬಳಕೆಗೆ ಅನುಮತಿ ಲಭಿಸಿದಂತಾಗಿದೆ.

ವಿಶೇಷವೆಂದರೆ ಮಾಡೆರ್ನಾ ಸಂಸ್ಥೆಯ ಲಸಿಕೆ ಬಳಕೆಗೆ ಅರ್ಹವಾಗಿದೆ ಎಂದು ದೇಶದಲ್ಲಿ ಅನುಮೋದನೆ ಸಿಗುವ ಮೊದಲೇ ಬ್ರಿಟನ್​ 70ಲಕ್ಷ ಡೋಸ್​ ಲಸಿಕೆಯನ್ನು ಮುಂಗಡವಾಗಿ ಕಾಯ್ದಿರಿಸಿತ್ತು. ಮಾಡೆರ್ನಾ ಅಭಿವೃದ್ಧಿಪಡಿಸಿದ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಎಂದು ಪರೀಕ್ಷಾ ಹಂತದ ವರದಿಗಳು ತಿಳಿಸಿದ್ದ ಕಾರಣ ಅದೇ ಆಧಾರದ ಮೇಲೆ ಬ್ರಿಟನ್​ ಅಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ತರಿಸಲು ನಿರ್ಧರಿಸಿತ್ತು ಎನ್ನುವುದು ತಜ್ಞರ ಅಭಿಪ್ರಾಯ.

ಫೈಜರ್​-ಬಯೋಎನ್​ಟೆಕ್ ಮತ್ತು ಆಕ್ಸ್​ಫರ್ಡ್​-ಆಸ್ಟ್ರಾಜೆನೆಕಾ ಸಂಸ್ಥೆಗಳ ಲಸಿಕೆ ಬಳಸಲು ಆರಂಭಿಸಿದ್ದ ಬ್ರಿಟನ್​, ಈಗಾಗಲೇ ಒಂದೂವರೆ ಲಕ್ಷ ಜನರಿಗೆ ಕನಿಷ್ಠ ಒಂದು ಡೋಸ್​ನಷ್ಟು ಲಸಿಕೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಮಾಡೆರ್ನಾ ಲಸಿಕೆ ಮಾರುಕಟ್ಟೆಗೆ ಬರುವುದು ಕೊಂಚ ತಡವಾಗಬಹುದಾದರೂ ಬಂದ ಕೂಡಲೇ ಇನ್ನಷ್ಟು ಜನರಿಗೆ ಲಸಿಕೆ ವಿತರಿಸಲು ಬ್ರಿಟನ್​ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತು ಈ ಎಲ್ಲಾ ಲಸಿಕೆಗಳನ್ನು ಒಬ್ಬ ವ್ಯಕ್ತಿಗೆ ಎರಡು ಡೋಸ್​ನಂತೆ ನೀಡಬೇಕಾಗಿದೆ.

ಅಮೆರಿಕಾ, ಬ್ರಿಟನ್​ ಲಸಿಕೆ ಮೇಲೆ ನಮಗೆ ನಂಬಿಕೆಯಿಲ್ಲ.. ಆ ಲಸಿಕೆ ಬೇಡ: ಸೆಡ್ಡು ಹೊಡೆದ ಇರಾನ್​

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್