ಚೀನಾ, ರಷ್ಯಾ ಬಿಡನ್​ಗೆ ಶುಭಾಶಯ ಕೋರಿಲ್ಲ! ಏನಿದರ ಒಳಮರ್ಮ?

ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ನೇಮಕಗೊಂಡಿರುವ ಜೋ ಬಿಡನ್ ಅವರಿಗೆ ವಿಶ್ವದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಎರಡು ಬಲಿಷ್ಠ ರಾಷ್ಟ್ರಗಳು ಮಾತ್ರ ಬಿಡನ್​ಗೆ ಈಗಲೇ ಶುಭಾಶಯ ಕೋರಲು ನಿರಾಕರಿಸಿವೆ. ಚೀನಾ-ರಷ್ಯಾ ಬಿಡನ್ ಗೆ ಶುಭಾಶಯ ಕೋರದಿರಲು ಕಾರಣವೇನು? ಅಮೆರಿಕಾ ಚುನಾವಣೆಯಲ್ಲಿ ಅಧ್ಯಕ್ಷರು ಕೇವಲ ಮತದಾನದ ಮೂಲಕ ಮಾತ್ರ ಆಯ್ಕೆಯಾಗಲ್ಲ. ಎದುರಾಗಬಹುದಾದ ಕಾನೂನು ಪ್ರಕ್ರಿಯೆಗಳು ಮತ್ತು ಸವಾಲುಗಳು ಕೊನೆಗೊಂಡ ನಂತರವಷ್ಟೇ ಅಧಿಕೃತ ಅಧ್ಯಕ್ಷರ ಘೋಷಣೆಯಾಗಲಿದೆ. ಆನಂತರವಷ್ಟೇ ತಾವು ಅಧ್ಯಕ್ಷರಾಗಿ ಹೊರಹೊಮ್ಮಿದವರಿಗೆ ಶುಭಾಶಯ ಕೋರುವುದಾಗಿ ರಷ್ಯಾ ಮತ್ತು ಚೀನಾ ತಿಳಿಸಿವೆ. […]

ಚೀನಾ, ರಷ್ಯಾ ಬಿಡನ್​ಗೆ ಶುಭಾಶಯ ಕೋರಿಲ್ಲ! ಏನಿದರ ಒಳಮರ್ಮ?
ಸಾಧು ಶ್ರೀನಾಥ್​ Edited By:

Updated on: Nov 10, 2020 | 3:17 PM

ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ನೇಮಕಗೊಂಡಿರುವ ಜೋ ಬಿಡನ್ ಅವರಿಗೆ ವಿಶ್ವದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಎರಡು ಬಲಿಷ್ಠ ರಾಷ್ಟ್ರಗಳು ಮಾತ್ರ ಬಿಡನ್​ಗೆ ಈಗಲೇ ಶುಭಾಶಯ ಕೋರಲು ನಿರಾಕರಿಸಿವೆ.

ಚೀನಾ-ರಷ್ಯಾ ಬಿಡನ್ ಗೆ ಶುಭಾಶಯ ಕೋರದಿರಲು ಕಾರಣವೇನು?
ಅಮೆರಿಕಾ ಚುನಾವಣೆಯಲ್ಲಿ ಅಧ್ಯಕ್ಷರು ಕೇವಲ ಮತದಾನದ ಮೂಲಕ ಮಾತ್ರ ಆಯ್ಕೆಯಾಗಲ್ಲ. ಎದುರಾಗಬಹುದಾದ ಕಾನೂನು ಪ್ರಕ್ರಿಯೆಗಳು ಮತ್ತು ಸವಾಲುಗಳು ಕೊನೆಗೊಂಡ ನಂತರವಷ್ಟೇ ಅಧಿಕೃತ ಅಧ್ಯಕ್ಷರ ಘೋಷಣೆಯಾಗಲಿದೆ. ಆನಂತರವಷ್ಟೇ ತಾವು ಅಧ್ಯಕ್ಷರಾಗಿ ಹೊರಹೊಮ್ಮಿದವರಿಗೆ ಶುಭಾಶಯ ಕೋರುವುದಾಗಿ ರಷ್ಯಾ ಮತ್ತು ಚೀನಾ ತಿಳಿಸಿವೆ.

ಬಿಡೆನ್ ಅವರು ಅಧಿಕೃತವಾಗಿ ಅಧ್ಯಕ್ಷರಾಗಿ ಘೋಷಣೆಯಾಗಲು ಜನಪ್ರತಿನಿಧಿಗಳ ಸಭೆಯಲ್ಲಿ ಬಹುಮತ ಪಡೆಯಬೇಕು. ಹಾಗಾಗಿ ಅವರು ಜನವರಿ 20 ರವರೆಗೆ ಕಾಯಬೇಕಿದೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚಟಾಕಿ ಹಾರಿಸಿರುವ ಅವರು ಕೊರೊನಾ ಬಗ್ಗೆ ಜಾಗ್ರತಿ ಸಾರಿ ಸಾಮಾಜಿಕ ಪ್ರಬುದ್ಧತೆಯನ್ನು ಮೆರೆದಿದ್ದಾರೆ.

“ಜನವರಿ 20 ರವರೆಗೆ ನಾನು ಅಧ್ಯಕ್ಷನಾಗಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಎಂದಷ್ಟೇ ಇಂದು ಹೇಳುವೆ” ಎಂದು ಅವರು ಬರೆದುಕೊಂಡಿದ್ದಾರೆ. ಜನವರಿ 20 ರ ನಂತರ ರಷ್ಯಾ, ಚೀನಾಗಳು ಹೇಗೆ ಪ್ರತಿಕ್ರಿಯಿಸಲಿವೆ ಎಂದು ಕಾದುನೋಡಬೇಕಿದೆ.

Published On - 3:15 pm, Tue, 10 November 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us