AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಗ ಬದಲಿಸಿ ಭಾರತಕ್ಕೆ ಧಾವಿಸಿದ ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌ಗಳು

ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌ ಭಾರತಕ್ಕೆ ಯು-ಟರ್ನ್ ಆಗಿವೆ. ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ಯು-ಟರ್ನ್ ಮಾಡಿದೆ. ಭಾರತದ ರಷ್ಯಾದಿಂದ ತೈಲದ ಆಮದುಗಳನ್ನು ದ್ವಿಗುಣಗೊಳಿಸಲು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಆ ಟ್ಯಾಂಕರ್ ಈಗ ಭಾರತಕ್ಕೆ ಆಗಮಿಸುತ್ತಿದೆ. ಹಡಗು-ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರ ಬಂದರಿನಿಂದ ಲೋಡ್ ಮಾಡಿದ ತನ್ನ ಯುರಲ್ಸ್ ಸರಕುಗಳೊಂದಿಗೆ ಅಕ್ವಾ ಟೈಟಾನ್ ಮಾರ್ಚ್ 21ರಂದು ನವ ಮಂಗಳೂರಿಗೆ ಆಗಮಿಸಲಿದೆ.

ಮಾರ್ಗ ಬದಲಿಸಿ ಭಾರತಕ್ಕೆ ಧಾವಿಸಿದ ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌ಗಳು
Russian ShipImage Credit source: Vessel finder
ಸುಷ್ಮಾ ಚಕ್ರೆ
|

Updated on: Mar 18, 2026 | 5:30 PM

Share

ನವದೆಹಲಿ, ಮಾರ್ಚ್ 18: ಚೀನಾಕ್ಕೆ ಹೋಗುತ್ತಿದ್ದ ರಷ್ಯಾದ ತೈಲ (Oil Tanker) ತುಂಬಿದ ಟ್ಯಾಂಕರ್ ದಕ್ಷಿಣ ಚೀನಾದ ಸಮುದ್ರದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿದೆ. ಆ ಹಡಗು ಯು-ಟರ್ನ್ ಹೊಡೆದು ಈಗ ಭಾರತಕ್ಕೆ ಆಗಮಿಸುತ್ತಿದೆ. ಅಮೆರಿಕ, ಇಸ್ರೇಲ್-ಇರಾನ್ ಯುದ್ಧದ ಮಧ್ಯೆ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಡಗಿನ ಟ್ರ್ಯಾಕಿಂಗ್ ಡೇಟಾ ಅಫ್ರಾಮ್ಯಾಕ್ಸ್ ಟ್ಯಾಂಕರ್ ಅಕ್ವಾ ಟೈಟಾನ್ ಮಾರ್ಚ್ 21ರಂದು ರಷ್ಯಾದ ಯುರಲ್ಸ್ ಕಚ್ಚಾ ತೈಲದ ಸರಕುಗಳನ್ನು ಹೊತ್ತು ನವಮಂಗಳೂರು ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ತೋರಿಸಿದೆ. ಜನವರಿ ಅಂತ್ಯದಲ್ಲಿ ಈ ಹಡಗು ಬಾಲ್ಟಿಕ್ ಸಮುದ್ರದ ಬಂದರಿನಿಂದ ತೈಲವನ್ನು ಲೋಡ್ ಮಾಡಿತ್ತು. ಆರಂಭದಲ್ಲಿ ಆ ಹಡಗು ಚೀನಾದ ರಿಜಾವೊ ಬಂದರಿಗೆ ಹೋಗಬೇಕೆಂದು ಸೂಚಿಸಲಾಗಿತ್ತು. ಆದರೆ, ಇದೀಗ ಆ ಹಡಗು ಯು-ಟರ್ನ್ ತೆಗೆದುಕೊಂಡು ಭಾರತಕ್ಕೆ ಆಗಮಿಸುತ್ತಿದೆ.

ಅಮೆರಿಕ ರಷ್ಯಾದ ಖರೀದಿಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಭಾರತಕ್ಕೆ ಹಸಿರು ನಿಶಾನೆ ತೋರಿಸಿತ್ತು. ಇದಾದ ನಂತರ ಭಾರತೀಯ ಸಂಸ್ಕರಣಾಗಾರರು 30 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಖರೀದಿಸಿದ್ದರು. ಇದು ಇರಾನ್‌ನಲ್ಲಿನ ಯುದ್ಧದಿಂದಾಗಿ ನಷ್ಟವಾದ ಮಧ್ಯಪ್ರಾಚ್ಯ ಪೂರೈಕೆಗಳನ್ನು ನಿಭಾಯಿಸಲು ಭಾರತಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಅಂದಿನಿಂದ, ಹೆಚ್ಚಿನ ದೇಶಗಳು ರಷ್ಯಾದಿಂದ ತೈಲ ಖರೀದಿಯನ್ನು ಪುನರಾರಂಭಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಇಂದು ಭಾರತಕ್ಕೆ ಬಂದು ಸೇರಲಿದೆ ಮತ್ತೆರಡು ತೈಲ ಹಡಗು: ಮಂಗಳೂರಿನಲ್ಲಿ 26 ಸಾವಿರ ಮೆಟ್ರಿಕ್‌ ಟನ್ LPG ಅನ್‌ಲೋಡ್‌

ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ, ರಷ್ಯಾದ ತೈಲವನ್ನು ಸಾಗಿಸುವ 7 ಟ್ಯಾಂಕರ್‌ಗಳು ಚೀನಾದ ಬದಲಾಗಿ ಭಾರತಕ್ಕೆ ಆಗಮಿಸುತ್ತಿವೆ. ತೈಲ ಟ್ಯಾಂಕರ್ ಮೊದಲು ರಷ್ಯಾದ ಕಪ್ಪು ಸಮುದ್ರದ ನೊವೊರೊಸಿಸ್ಕ್‌ನಿಂದ ಪಯಣಿಸಿತ್ತು. ಇದು ಆರಂಭದಲ್ಲಿ ಚೀನಾದ ರಿಝಾವೊ ಬಳಿಯ ನೀರಿನ ಕಡೆಗೆ ಸಾಗುತ್ತಿತ್ತು. ಇದೀಗ ಆ ಹಡಗನ್ನು ಭಾರತಕ್ಕೆ ತಿರುಗಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Follow Us
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!
ಡಿಜೆ ನಿಷೇಧಿಸುವಂತೆ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ!
ಡಿಜೆ ನಿಷೇಧಿಸುವಂತೆ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ!
ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ
ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ
ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್
ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್
ಪ್ರಜ್ವಲ್ ಪ್ರಕರಣ: ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?
ಪ್ರಜ್ವಲ್ ಪ್ರಕರಣ: ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?
ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ
ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ
ವಿಡಿಯೋ: ಆಂಬ್ಯುಲೆನ್ಸ್‌ನಲ್ಲೇ ಬಂದು SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ!
ವಿಡಿಯೋ: ಆಂಬ್ಯುಲೆನ್ಸ್‌ನಲ್ಲೇ ಬಂದು SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ!
ಯುಗಾದಿ ವರ್ಷ ಭವಿಷ್ಯ;ಗ್ರಹಗಳ ಸಂಚಾರ ಮತ್ತು ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಯುಗಾದಿ ವರ್ಷ ಭವಿಷ್ಯ;ಗ್ರಹಗಳ ಸಂಚಾರ ಮತ್ತು ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ