ಆಹಾರ ಅರಸಿ ಗ್ರಾಮಗಳಿಗೆ ನುಗ್ಗಿದ ಹಿಮಕರಡಿಗಳು
ರಷ್ಯಾದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಹವಾಮಾನ ವೈಪರಿತ್ಯದ ಪರಿಣಾಮ ಹಿಮಕರಡಿಗಳ ಗುಂಪು ಆಹಾರ ಅರಸಿ ರಷ್ಯಾದ ಗ್ರಾಮಗಳಿಗೆ ನುಗ್ಗುತ್ತಿವೆ. ಈ ರೀತಿ ಹಿಮಕರಡಿಗಳು ನುಗ್ಗುತ್ತಿರವ ದೃಶ್ಯವನ್ನ ಡ್ರೋಣ್ಗಳಿಂದ ಸೆರೆಹಿಡಿಯಲಾಗಿದ್ದು, ಜನ ಮನೆಬಿಟ್ಟು ಹೊರಗೆ ಬರಲು ಭಯಪಡುವಂತಾಗಿದೆ. 15 ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶ: ಹವಾಮಾನ ಬದಲಾವಣೆ ಬಗ್ಗೆ ಟ್ರಂಪ್ ಸರ್ಕಾರದ ನಿಲುವು ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ನಲ್ಲಿ ಯುವ ಸಮೂಹ ಟ್ರಂಪ್ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಕ್ಲೈಮೆಟ್ ಚೇಂಜ್ ಕುರಿತು ಸ್ಪಷ್ಟ ನಿಲುವು ತಾಳುವಂತೆ […]
ರಷ್ಯಾದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಹವಾಮಾನ ವೈಪರಿತ್ಯದ ಪರಿಣಾಮ ಹಿಮಕರಡಿಗಳ ಗುಂಪು ಆಹಾರ ಅರಸಿ ರಷ್ಯಾದ ಗ್ರಾಮಗಳಿಗೆ ನುಗ್ಗುತ್ತಿವೆ. ಈ ರೀತಿ ಹಿಮಕರಡಿಗಳು ನುಗ್ಗುತ್ತಿರವ ದೃಶ್ಯವನ್ನ ಡ್ರೋಣ್ಗಳಿಂದ ಸೆರೆಹಿಡಿಯಲಾಗಿದ್ದು, ಜನ ಮನೆಬಿಟ್ಟು ಹೊರಗೆ ಬರಲು ಭಯಪಡುವಂತಾಗಿದೆ.
15 ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶ: ಹವಾಮಾನ ಬದಲಾವಣೆ ಬಗ್ಗೆ ಟ್ರಂಪ್ ಸರ್ಕಾರದ ನಿಲುವು ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ನಲ್ಲಿ ಯುವ ಸಮೂಹ ಟ್ರಂಪ್ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಕ್ಲೈಮೆಟ್ ಚೇಂಜ್ ಕುರಿತು ಸ್ಪಷ್ಟ ನಿಲುವು ತಾಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಸಮುದ್ರದ ಒಳಗೆ ಹುಲ್ಲಿನ ಹಾವಳಿ..! ಸ್ಪೇನ್ನ ಸಮುದ್ರದಲ್ಲಿ ಕಳೆ ಹೆಚ್ಚಾಗಿದ್ದು, ಸ್ವಚ್ಛಗೊಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಮುದ್ರದಲ್ಲಿ ಹೀಗೆ ಬೆಳೆದಿರುವ ಹುಲ್ಲು, ನೂರಾರು ಕಿಲೋಮೀಟರ್ ದೂರಕ್ಕೆ ವ್ಯಾಪಿಸಿದ್ದು, ದಡಕ್ಕೆ ಬಂದು ಸೇರುತ್ತಿದೆ. ಇದನ್ನು ಹವಾಮಾನ ವೈಪರಿತ್ಯದ ಪರಿಣಾಮ ಅಂತಲೂ ಕೆಲ ತಜ್ಞರು ದೂರುತಿದ್ದಾರೆ.
ಸರ್ಕಾರದ ವಿರುದ್ಧ ತೀವ್ರ ಆಕ್ರೋಶ: ಚಿಲಿಯಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ಉಗ್ರರೂಪ ತಾಳಿದೆ. ಪ್ರತಿಭಟನಾಕಾರರ ಕಂಡ ಕಂಡ ಕಡೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದ್ಕಡೆ ಚಿಲಿಯ ಪೊಲೀಸ್ ವಾಹನಗಳನ್ನ ಟಾರ್ಗೆಟ್ ಮಾಡಲಾಗುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.
Published On - 1:44 pm, Sun, 8 December 19