ಕೊರೊನಾ ಅಟ್ಟಹಾಸ: ಜನವಸತಿ ಪ್ರದೇಶಗಳಲ್ಲೇ ಮೃತರ ಅಂತ್ಯಕ್ರಿಯೆ!

ಸಾಧು ಶ್ರೀನಾಥ್​

|

Updated on:May 19, 2020 | 5:55 PM

ಕೊರೊನಾ ಯಮನ್ ದೇಶದಲ್ಲೂ ಅಟ್ಟಹಾಸ ಮೆರೀತಿದೆ. ಸೋಂಕಿನಿಂದಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಮೊದಲೇ ಹಲವು ಬಿಕ್ಕಟ್ಟುಗಳಿಂದ ಕಂಗೆಟ್ಟಿದ್ದ ಯಮನ್ ದೇಶದಲ್ಲಿ ಕೊರೊನಾ ವೈರಸ್ ಮತ್ತಷ್ಟು ಪರಿಸ್ಥಿತಿ ಹದಗೆಡುವಂತೆ ಮಾಡಿದೆ. ಮೃತಪಟ್ಟವನ್ನ ಜನ ವಸತಿ ಪ್ರದೇಶಗಳಲ್ಲೇ ಇರುವ ಖಾಲಿ ಜಾಗದಲ್ಲೇ ಅಂತ್ಯಕ್ರಿಯೆ ಮಾಡಲಾಗ್ತಿದೆ. ಪುಟ್ಟ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿರೋದು ಆತಂಕ ಮೂಡಿಸಿದೆ. ಆಹಾರಕ್ಕಾಗಿ ಸರತಿ ಸಾಲು: ಕೊರೊನಾ ವೈರಸ್​ನಿಂದ ಕಂಗೆಟ್ಟಿದ್ದ ಸ್ಪೇನ್​ನಲ್ಲಿ ಲಾಕ್ಡೌನ್ ವಿಧಿಸಿದ್ದರಿಂದ ಜನ ಜೀವನ ಹಸ್ತವ್ಯಸ್ಥವಾಗಿದೆ. ಸಾಮಾನ್ಯ ಜನರು ಒಂದೊತ್ತಿನ ಊಟಕ್ಕೂ ಪರದಾಟ […]

ಕೊರೊನಾ ಅಟ್ಟಹಾಸ: ಜನವಸತಿ ಪ್ರದೇಶಗಳಲ್ಲೇ ಮೃತರ ಅಂತ್ಯಕ್ರಿಯೆ!

ಕೊರೊನಾ ಯಮನ್ ದೇಶದಲ್ಲೂ ಅಟ್ಟಹಾಸ ಮೆರೀತಿದೆ. ಸೋಂಕಿನಿಂದಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಮೊದಲೇ ಹಲವು ಬಿಕ್ಕಟ್ಟುಗಳಿಂದ ಕಂಗೆಟ್ಟಿದ್ದ ಯಮನ್ ದೇಶದಲ್ಲಿ ಕೊರೊನಾ ವೈರಸ್ ಮತ್ತಷ್ಟು ಪರಿಸ್ಥಿತಿ ಹದಗೆಡುವಂತೆ ಮಾಡಿದೆ. ಮೃತಪಟ್ಟವನ್ನ ಜನ ವಸತಿ ಪ್ರದೇಶಗಳಲ್ಲೇ ಇರುವ ಖಾಲಿ ಜಾಗದಲ್ಲೇ ಅಂತ್ಯಕ್ರಿಯೆ ಮಾಡಲಾಗ್ತಿದೆ. ಪುಟ್ಟ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿರೋದು ಆತಂಕ ಮೂಡಿಸಿದೆ.

ಆಹಾರಕ್ಕಾಗಿ ಸರತಿ ಸಾಲು: ಕೊರೊನಾ ವೈರಸ್​ನಿಂದ ಕಂಗೆಟ್ಟಿದ್ದ ಸ್ಪೇನ್​ನಲ್ಲಿ ಲಾಕ್ಡೌನ್ ವಿಧಿಸಿದ್ದರಿಂದ ಜನ ಜೀವನ ಹಸ್ತವ್ಯಸ್ಥವಾಗಿದೆ. ಸಾಮಾನ್ಯ ಜನರು ಒಂದೊತ್ತಿನ ಊಟಕ್ಕೂ ಪರದಾಟ ನಡೆಸಿದ್ರು. ಹೀಗಾಗಿ, ಸರ್ಕಾರ ಆಹಾರ ಕೇಂದ್ರಗಳನ್ನ ನಿರ್ಮಿಸಿದ್ದು, ಹಲವರು ಊಟಕ್ಕಾಗಿ ಸರತಿ ಸಾಲಿನಲಲ್ಇ ನಿಂತಿದ್ದಾರೆ. ಕೆಲಸ ಕಾರ್ಯಗಳಿಲ್ಲದೇ ಜನತೆ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರಂತೂ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗದೇ ಕಂಗಾಲ್ ಆಗಿದ್ದು, ಮನೆ ಬಾಡಿಗೆ ಕಟ್ಟಲೂ ಪರದಾಡುತ್ತಿದ್ದಾರೆ.

ಗವರ್ನರ್​ಗೆ ಕೊರೊನಾ ಟೆಸ್ಟ್: ಕೊರೊನಾ ವೈರಸ್​ ಎಲ್ಲೆಡೆ ಹರಡ್ತಿರೋದ್ರಿಂದ ಅಮೆರಿಕದಲ್ಲಿ ಟೆಸ್ಟಿಂಗ್ ಕೂಡ ಹೆಚ್ಚಾಗ್ತಿದೆ. ಕೊಲಾರಾಡೋ ಗವರ್ನರ್​ ಜರೇಡ್ ಸುದ್ದಿಗೋಷ್ಠಿಯಲ್ಲೇ ಕೊರೊನಾ ಟೆಸ್ಟ್​ಗೆ ಒಳಪಟ್ಟಿದ್ದಾರೆ. ಕೊರೊನಾ ತೀವ್ರತೆ ಮತ್ತು ಲಾಕ್​ಡೌನ್ ಸಡಿಲಿಕೆ ಮಾಡುವ ಬಗ್ಗೆ ಮಾತನಾಡ್ತಿದ್ದ ವೇಳೆಯೇ, ವೈದ್ಯಕೀಯ ಸಿಬ್ಬಂದಿ ಗಂಟಲು ದ್ರವ ಪರೀಕ್ಷೆ ಮಾಡಿದ್ದಾರೆ.

ಹೆಚ್ಚಿದ ತಾಪಮಾನ..! ಲಾಕ್​ಡೌನ್ ಹೇರಿಕೆಯಿಂದಾಗಿ ಜಗತ್ತಿನೆಲ್ಲಡೆ ತಾಪಮಾನ ಕಡಿಮೆಯಾಗಿತ್ತು. ಆದ್ರೆ, ಗ್ರೀಸ್​ನ ಅಥೆನ್ಸ್ ನಗರಿಯಲ್ಲಿ ಜನರ ಓಡಾಟ ಜೋರಾಗಿದೆ. ಇಷ್ಟು ದಿನ ಮನೆಯಲ್ಲಿ ಬಂಧಿಯಾಗಿದ್ದ ಜನರು, ಈಗ ಪ್ರೇಕ್ಷಣೀಯ ಸ್ಥಳಗಳಲ್ಲಿ ಮತ್ತು ದೇಗುಲ, ಅಂಗಡಿಗಳಲ್ಲಿ ಓಡಾಟ ನಡೆಸಿದ್ದಾರೆ. ಕಾರ್ಖಾನೆಗಳೂ ತೆರೆದಿರೋದ್ರಿಂದ ತಾಪಮಾನ ಹೆಚ್ಚಳವಾಗ್ತಿದೆ.

ಕೊರೊನಾ ‘ಹಿಂಸಾಚಾರ’: ಕೊರೊನಾ ವೈರಸ್​ನಿಂದ ಚಿಲಿದೇಶದಲ್ಲಿ ಲಾಕ್​ಡೌನ್ ಹೇರಲಾಗಿದ್ದು, ಸರ್ಕಾರ ಅನುದಾನ ಘೋಷಣೆ ಮಾಡಿದೆ. ಆದ್ರೆ, ಲಾಕ್​ಡೌನ್​ ನಿಂದಾಗಿ ಸಾಂಟಿಗೋದಲ್ಲಿ ಬಡ ಜನರ ಜೀವನ ಮೂರಾಬಟ್ಟೆಯಾಗಿದೆ. ಹಲವರನ್ನ ಕ್ವಾರಂಟೈನ್ ಮಾಡಿದ್ದು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಇದ್ರಿಂದ ಆಕ್ರೋಶ ವ್ಯಕ್ತಪಡಿಸಿದ ಬಡ ಜನರು ಸಿಮೆಂಟ್ ಇಟ್ಟಿಗೆಳನ್ನ, ಕಲ್ಲುಗಳನ್ನ ಪೊಲೀಸರತ್ತ ಎಸೆದು ಪ್ರತಿಭಟನೆ ನಡೆಸಿದ್ರು. ಪ್ರತಿಭಟಾನಾಕಾರರನ್ನ ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada