ನಮ್ಮ ಆ್ಯಪ್ ನಿಷೇಧ ಮಾಡುವ ಮೂಲಕ ಭಾರತ WTO ನಿಯಮ ಉಲ್ಲಂಘನೆ ಮಾಡಿದೆ; ಚೀನಾ ಅಸಮಾಧಾನ
ಭಾರತದಲ್ಲಿ ತುಂಬ ಬಳಕೆಯಾಗುತ್ತಿದ್ದ ಚೀನಾದ ಟಿಕ್ಟಾಕ್ ಸೇರಿ, ಹಲವು ಪ್ರಮುಖ ಆ್ಯಪ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಇದರಿಂದ ಚೀನಾಕ್ಕೆ ಹೊಡೆತ ಬಿದ್ದಿದ್ದಂತೂ ಸುಳ್ಳಲ್ಲ.
ನವದೆಹಲಿ: ಕಳೆದ ವರ್ಷ ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಸೈನಿಕರ ಆಕ್ರಮಣದಿಂದ ಭಾರತೀಯ ಸೇನೆಯ ಸುಮಾರು 20 ಸೈನಿಕರು ಮೃತಪಟ್ಟ ಬೆನ್ನಲ್ಲೇ, ಕೇಂದ್ರ ಸರ್ಕಾರ ಚೀನಾದ 59 ಆ್ಯಪ್ಗಳನ್ನು ನಿಷೇಧ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಚೀನಾ ಇದೀಗ ಮತ್ತೆ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ನಮ್ಮ 59 ಆ್ಯಪ್ಗಳನ್ನು ನಿಷೇಧ ಮಾಡುವ ಮೂಲಕ ಭಾರತ ವಿಶ್ವ ವ್ಯಾಪಾರ ಸಂಸ್ಥೆ (World Trade Organization WTO)ಯ ವ್ಯವಹಾರದ ನಿಯಮಗಳನ್ನು ಉಲ್ಲಂಘಿಸಿದೆ. ಇದು ಚೈನೀಸ್ ಕಂಪನಿಗಳಿಗೆ ನೋವುಂಟು ಮಾಡಿದೆ ಎಂದೂ ಚೀನಾ ಇಂದು ಹೇಳಿದೆ.
ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿದ್ದ ಚೀನಾದ ಟಿಕ್ಟಾಕ್ ಸೇರಿ, ಹಲವು ಪ್ರಮುಖ ಆ್ಯಪ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಇದರಿಂದ ಚೀನಾಕ್ಕೆ ಹೊಡೆತ ಬಿದ್ದಿದ್ದಂತೂ ಸುಳ್ಳಲ್ಲ. ಹಾಗಾಗಿ ಭಾರತ ಈ ನಿಷೇಧದ ಬಗ್ಗೆ ಇನ್ನೊಮ್ಮೆ ಯೋಚಿಸಬೇಕು. ತನ್ನ ತಾರತಮ್ಯ ನೀತಿಯನ್ನು ಸರಿಪಡಿಸಿಕೊಂಡು, ದ್ವಿಪಕ್ಷೀಯ ಸಂಬಂಧಕ್ಕೆ ಮತ್ತಷ್ಟು ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ.ರೊಂಗ್ ತಿಳಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಪ್ರೇಕ್ಷಕರಿಗೆ ಅವಕಾಶ ನೀಡಲು ಕೇಂದ್ರದ ಸಮ್ಮತಿ