AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿಯನ್ನು ಪುಟಿನ್​ ಎಂದು ಕರೆದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ವಯಸ್ಸಿನ ಕಾರಣದಿಂದ ಮಾತನಾಡುವಾಗ ಒಂದಲ್ಲಾ ಒಂದು ತಪ್ಪು ಮಾಡುತ್ತಲೇ ಇದ್ದಾರೆ. ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಪುಟಿನ್ ಎಂದು ಕರೆದು ನಗೆಪಾಟಲಿಗೆ ಗುರಿಯಾಗಿದ್ದಾರೆ.

ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿಯನ್ನು ಪುಟಿನ್​ ಎಂದು ಕರೆದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಜೋ ಬೈಡನ್
ನಯನಾ ರಾಜೀವ್
|

Updated on: Jul 12, 2024 | 11:38 AM

Share

ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಮರೆವಿನ ಕಾಯಿಲೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದು ವಯೋಸಹಜ ಸಮಸ್ಯೆಯಾಗಿದ್ದು ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲವಷ್ಟೆ. ನ್ಯಾಟೋ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿಯನ್ನು ಪುಟಿನ್​ ಎಂದು ಪರಿಚಯಿಸಿದ್ದರು. ಅಷ್ಟೇ ಅಲ್ಲ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ರನ್ನು ಟ್ರಂಪ್​ ಎಂದು ಕರೆದಿದ್ದರು.

81 ವರ್ಷದ ಡೊನಾಲ್ಡ್​ ಟ್ರಂಪ್​ಗೆ ಮರೆವಿನ ಕಾಯಿಲೆ ಶುರುವಾಗಿದ್ದು, ಹೀಗಿರುವಾಗ ಚುನಾವಣಾ ಪ್ರಚಾರದಿಂದ ಹಿಂದೆ ಸರಿಯುವಂತೆ ಮತ್ತೊಮ್ಮೆ ಒತ್ತಡ ಕೇಳಿಬರುತ್ತಿದೆ. ನವೆಂಬರ್ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸುವ ಮೊದಲು ಡೆಮಾಕ್ರಟಿಕ್ ಅಭ್ಯರ್ಥಿ ಬೈಡನ್ ಅವರು ಮಾನಸಿಕ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ.

ಅವರ ವಯಸ್ಸಿನಿಂದ ಕೆಲವೊಮ್ಮೆ ಹೆಸರನ್ನೇ ಮರೆತುಬಿಡುವುದು, ಕೆಲವೊಮ್ಮೆ ಮಾತನಾಡುವಾಗ ತೊದಲುವುದು, ಹಲವು ವಿಷಯಗಳನ್ನು ಒಟ್ಟಿಗೆ ಬೆರೆಸುವುದು ಈ ರೀತಿಯ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ.

ಮತ್ತಷ್ಟು ಓದಿ: ಸಂಜೆ 4 ಗಂಟೆ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಏನಾಗುತ್ತೆ, ಏನಾದರೂ ಕಾಯಿಲೆ ಇದೆಯೇ?

ಬೈಡನ್ ವಿರೋಧಿಗಳು ಅವರಿಗೆ ವಯಸ್ಸಾಗುತ್ತಿದ್ದು ದೇಶವನ್ನು ಮುನ್ನಡೆಸಲು ಯೋಗ್ಯರಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಘಟನೆ ಏನು? ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ನಡುವೆ ಭದ್ರತಾ ಒಪ್ಪಂದಕ್ಕೆ ಸಹಿ ಹಾಕುವಾಗ ನ್ಯಾಟೋ ವೇದಿಕೆಯಲ್ಲಿ ಝೆಲೆನ್ಸ್ಕಿಯನ್ನು ಅಧ್ಯಕ್ಷ ಪುಟಿನ್ ಎಂದು ತಪ್ಪಾಗಿ ಕರೆದಿದ್ದಾರೆ.

ತಕ್ಷಣವೇ ಬೈಡನ್ ತಕ್ಷಣವೇ ತನ್ನ ತಪ್ಪು ಅರಿತು ಸರಿಪಡಿಸಿಕೊಂಡಿದ್ದಾರೆ. ಎರಡು ವಾರಗಳ ಹಿಂದೆ ನಡೆದ ಅಧ್ಯಕ್ಷೀಯ ಚರ್ಚೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಅದಾದ ಬಳಿಕ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ