Kazakhstan Blast: ಕಾಬೂಲ್ ಬೆನ್ನಲ್ಲೇ ಕಜಕಿಸ್ತಾನದ ಸೇನಾ ನೆಲೆ ಬಳಿಯೂ ಭಾರೀ ಸ್ಫೋಟ
Kabul Blast: ಇಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಕಜಕಿಸ್ತಾನದ ಸೇನಾ ನೆಲೆ ಬಳಿ ಭೀಕರ ಸ್ಫೋಟ ಉಂಟಾಗಿದೆ. ಬೈಜಾಕ್ ಜಿಲ್ಲೆಯಲ್ಲಿರುವ ಜಂಬಿಲ್ ವಲಯದ ಸೇನಾ ನೆಲೆಯ ಬಳಿ ಈ ಘಟನೆ ಸಂಭವಿಸಿದೆ.
ನೂರ್-ಸುಲ್ತಾನ್: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸರಣಿ ಸ್ಫೋಟ ಸಂಭವಿಸಿದ್ದು, ಈಗಾಗಲೇ 13 ಜನರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಕಜಕಿಸ್ತಾನದ ಸೇನಾ ನೆಲೆಯ ಬಳಿ ಭಾರೀ ಸ್ಫೋಟ ಸಂಭವಿಸಿದೆ. ಕಜಕಿಸ್ತಾನದ ತಾರಾಜ್ನ ಸೇನಾ ನೆಲೆಯ ಬಳಿ ಸ್ಫೋಟ ಉಂಟಾಗಿ, ಬೆಂಕಿ ಹೊತ್ತಿಕೊಂಡಿದೆ ಎಂದು ಕಜಕಿಸ್ತಾನದ ರಕ್ಷಣಾ ಸಚಿವರು ಖಚಿತಪಡಿಸಿದ್ದಾರೆ.
ಇಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಕಜಕಿಸ್ತಾನದ ಸೇನಾ ನೆಲೆ ಬಳಿ ಭೀಕರ ಸ್ಫೋಟ ಉಂಟಾಗಿದೆ. ಬೈಜಾಕ್ ಜಿಲ್ಲೆಯಲ್ಲಿರುವ ಜಂಬಿಲ್ ವಲಯದ ಸೇನಾ ನೆಲೆಯ ಬಳಿ ಈ ಘಟನೆ ಸಂಭವಿಸಿದೆ. ಸ್ಫೋಟಕಗಳನ್ನು ಎಸೆದು ಬೆಂಕಿ ಹಚ್ಚಲಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಕಜಕಿಸ್ತಾನದ ರಕ್ಷಣಾ ಸಚಿವರು ತಿಳಿಸಿದ್ದಾರೆ.
ಕಜಕಿಸ್ತಾನದ ಸೇನಾ ನೆಲೆ ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸಲು ಫೈರ್ ಬ್ರಿಗೇಡ್ಗಳು ಪ್ರಯತ್ನಿಸುತ್ತಿವೆ. ದುರಂತ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸೇನಾಧಿಕಾರಿಗಳು ದೌಡಾಯಿಸಿದ್ದಾರೆ. ಕಜಕಿಸ್ತಾನದ ಸೇನಾ ನೆಲೆಯ ಬಳಿ ಉಂಟಾದ ಸ್ಫೋಟದಿಂದ ಬೆಂಕಿಯುಂಡೆಗಳು ಆಕಾಶದಲ್ಲಿ ಕಾಣಿಸಿಕೊಂಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
The explosion in #Kazakhstan‘s southern city of Taraz resulted from a fire at a warehouse of a military unit ? pic.twitter.com/Nx8mHYXU8o
— Mete Sohtaoğlu (@metesohtaoglu) August 26, 2021
ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣಕ್ಕೆ ಉಗ್ರರ ಬೆದರಿಕೆಯಿದ್ದು, ತನ್ನ ದೇಶದ ಪ್ರಜೆಗಳು ತಮ್ಮ ಸ್ಥಳದಲ್ಲೇ ಇರಬೇಕು, ಯಾವುದೇ ಕಾರಣಕ್ಕೂ ಕಾಬೂಲ್ ವಿಮಾನ ನಿಲ್ದಾಣದತ್ತ ಹೋಗಬಾರದು ಎಂದು ಅಮೆರಿಕ ಹಾಗೂ ಬ್ರಿಟನ್ ಅಫ್ಘಾನ್ನಲ್ಲಿರುವ ತನ್ನ ದೇಶದ ಪ್ರಜೆಗಳಿಗೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಇಂದು ಸಂಜೆ ಕಾಬೂಲ್ ವಿಮಾನ ನಿಲ್ದಾಣದ ಬಳಿ ಎರಡು ಸ್ಫೋಟಗಳು ಸಂಭವಿಸಿವೆ. ಈ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.
ಕೇವಲ 30 ನಿಮಿಷಗಳ ಅಂತರದಲ್ಲಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನದ ಪಕ್ಕದಲ್ಲೇ ಎರಡು ಬಾಂಬ್ ಸ್ಫೋಟಗಳು ನಡೆದಿವೆ. ನಿಲ್ದಾಣದ ಗೇಟ್ ಬಳಿ ಒಂದು ಸ್ಫೋಟ ಸಂಭವಿಸಿದ್ದರೆ ಮತ್ತೊಂದು ಸ್ಫೋಟ ವಿಮಾನ ನಿಲ್ದಾಣದ ಹೊರಗೆ ಹೋಟೆಲ್ ಬಳಿ ನಡೆದಿದೆ. ಅಮೆರಿಕಾ, ಬ್ರಿಟನ್ ದೇಶದ ಯೋಧರಿದ್ದ ಹೋಟೆಲ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎನ್ನಲಾಗಿದೆ. ಇದರ ಹಿಂದೆ ಐಸಿಸ್ ಉಗ್ರರ ಕೈವಾಡವಿದೆ ಎನ್ನಲಾಗುತ್ತಿದೆ.
ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ಪೋರ್ಟ್ ಗೇಟ್ನಿಂದ ತಕ್ಷಣ ಎಲ್ಲರೂ ತೆರಳಿ ಗೇಟ್ ಬಳಿಯಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ISIS vs Taliban: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸ್ಫೋಟ, ಐಸಿಸ್ ಕೃತ್ಯದ ಶಂಕೆ
Kabul Blast: ಕಾಬೂಲ್ ವಿಮಾನ ನಿಲ್ದಾಣದ ಬಳಿ ಪ್ರಬಲ ಬಾಂಬ್ ಸ್ಫೋಟ
(kazakhstan blast: Large explosion hits military Units warehouse in Kazakhstan after Kabul Airport Blast)
Published On - 9:26 pm, Thu, 26 August 21