17 ಹೊಸ ಗ್ರಹಗಳನ್ನ ಪತ್ತೆಹಚ್ಚಿದ ನಾಸಾ: ಭೂಮಿಯನ್ನೇ ಹೋಲುತ್ತಿದೆಯಂತೆ ಈ ಗ್ರಹ!
ನಾಸಾದ ಕೆಪ್ಲರ್ ಟೆಲಿಸ್ಕೋಪ್ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಕೆಪ್ಲರ್ ಟೆಲಿಸ್ಕೋಪ್ ಸೆರೆಹಿಡಿದಿರುವ ಒಟ್ಟು 17 ಹೊಸ ಗ್ರಹಗಳ ಮಾಹಿತಿಯನ್ನ ನಾಸಾ ರಿವೀಲ್ ಮಾಡಿದೆ. ಈ 17 ಗ್ರಹಗಳ ಪೈಕಿ, ಭೂಮಿಯಂತೆಯೇ ಇರುವ ಹಲವು ಗ್ರಹಗಳಿದ್ದು, ಇದರಲ್ಲಿ ‘ಕೆಐಸಿ-7340288 ಬಿ’ ಗ್ರಹ ಭೂಮಿಯನ್ನೇ ಹೋಲುತ್ತಿದೆಯಂತೆ. ತೈಲ ರಾಷ್ಟ್ರದಲ್ಲೂ ಕೊರೊನಾ ಅಟ್ಟಹಾಸ: ಇರಾನ್‌ನಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 34ಕ್ಕೆ ಏರಿಕೆ ಕಂಡಿದೆ. 388 ಜನರ ತಪಾಸಣೆ ನಡೆಸಿದ್ದು, ರೋಗ ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. […]
ನಾಸಾದ ಕೆಪ್ಲರ್ ಟೆಲಿಸ್ಕೋಪ್ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಕೆಪ್ಲರ್ ಟೆಲಿಸ್ಕೋಪ್ ಸೆರೆಹಿಡಿದಿರುವ ಒಟ್ಟು 17 ಹೊಸ ಗ್ರಹಗಳ ಮಾಹಿತಿಯನ್ನ ನಾಸಾ ರಿವೀಲ್ ಮಾಡಿದೆ. ಈ 17 ಗ್ರಹಗಳ ಪೈಕಿ, ಭೂಮಿಯಂತೆಯೇ ಇರುವ ಹಲವು ಗ್ರಹಗಳಿದ್ದು, ಇದರಲ್ಲಿ ‘ಕೆಐಸಿ-7340288 ಬಿ’ ಗ್ರಹ ಭೂಮಿಯನ್ನೇ ಹೋಲುತ್ತಿದೆಯಂತೆ.
ತೈಲ ರಾಷ್ಟ್ರದಲ್ಲೂ ಕೊರೊನಾ ಅಟ್ಟಹಾಸ: ಇರಾನ್‌ನಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 34ಕ್ಕೆ ಏರಿಕೆ ಕಂಡಿದೆ. 388 ಜನರ ತಪಾಸಣೆ ನಡೆಸಿದ್ದು, ರೋಗ ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಔಷಧ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಇರಾನ್ಗೆ, ಕೊರೊನಾ ವೈರಸ್ ಗಾಯದ ಮೇಲೆ ಬರೆ ಎಳೆದಿದೆ.
ಟರ್ಕಿ ಸೇನೆ ಮೇಲೆ ಡೆಡ್ಲಿ ಅಟ್ಯಾಕ್..! ಸಿರಿಯಾದ ಇಡ್ಲಿಬ್ ಪ್ರದೇಶದ ಮೇಲೆ ದಾಳಿ ಮಾಡಿರುವ ಟರ್ಕಿ ಸೇನೆ ಮೇಲೆ, ಸಿರಿಯಾ ಪಡೆಗಳು ಮಾರಣಾಂತಿಕ ಪ್ರತಿಕ್ರಿಯೆ ನೀಡಿವೆ. ಸಿರಿಯಾ ನಡೆಸಿದ ವಾಯುದಾಳಿಯಲ್ಲಿ 33 ಟರ್ಕಿ ಸೈನಿಕರು ಪ್ರಾಣಬಿಟ್ಟಿದ್ದು, ದಾಳಿ ವಿಡಿಯೋ ರಿಲೀಸ್ ಮಾಡಲಾಗಿದೆ. ಇದರಿಂದ ಸಿರಿಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮಗೊಂಡಿದೆ.
ನೀರಿನ ಪೈಪ್ ಒಡೆದು ಪ್ರವಾಹ..! ಅಮೆರಿಕದ ಹ್ಯೂಸ್ಟನ್ನಲ್ಲಿ ನಡೆದ ಸಣ್ಣ ಅವಘಡದಿಂದ ಇಡೀ ನಗರವೇ ನೀರಿನಿಂದ ತುಂಬಿ ಹೋಗಿದೆ. ಹ್ಯೂಸ್ಟನ್ನ ನೀರಿನ ಗೇಟ್ ಒಡೆದು, ಪೂರ್ವ ಹ್ಯೂಸ್ಟನ್ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಹೆದ್ದಾರಿಯನ್ನೇ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಸುಮಾರು 8 ಅಡಿ ಎತ್ತರದ ಗೇಟ್ ಮುರಿದಿದ್ದು, ರಿಪೇರಿ ಕಾರ್ಯ ನಡೆಯುತ್ತಿದೆ.