ಆರೋಗ್ಯ ಸಚಿವರಿಗೂ ತಗುಲಿತು ಡೆಡ್ಲಿ ಕೊರೊನಾ ವೈರಸ್!

ಆರೋಗ್ಯ ಸಚಿವರಿಗೂ ತಗುಲಿತು ಡೆಡ್ಲಿ ಕೊರೊನಾ ವೈರಸ್!

ಭೀಕರ ಕೊರೊನಾ ವೈರಸ್ ಇಡೀ ಜಗತ್ತನ್ನು ಬೆಚ್ಚಿಬೀಳಿಸಿರುವ ಬೆನ್ನಲ್ಲೇ, ಅಮೆರಿಕದ ಬದ್ಧ ವೈರಿ ಇರಾನ್​ನಲ್ಲೂ ತನ್ನ ಹಾವಳಿ ಶುರುಮಾಡಿದೆ. ಇರಾನ್ ಆರೋಗ್ಯ ಸಚಿವರಿಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಹೀಗಾಗಿ ಸೋಂಕು ಪೀಡಿತ ಸಚಿವನಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಇರಾನ್ ತುಂಬಾ ಹೈಅಲರ್ಟ್ ಘೋಷಿಸಲಾಗಿದೆ. ‘ಕೊರೊನಾ’ ಸ್ಯಾಂಪಲ್ ಸಂಗ್ರಹ..! ಒಂದ್ಕಡೆ ಕೊರೊನಾ ಭೀಕರ ರೂಪ ತಾಳುತ್ತಿದ್ರೆ, ಈ ಬಗ್ಗೆ ಅಧ್ಯಯನ ನಡೆಸಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ಟೀಂ ಚೀನಾಗೆ ತೆರಳಿದೆ. ಕೊರೊನಾ ವೈರಾಣು ಚೀನಾದ ಬಯೋ ವೆಪನ್ ಅಂತಾ ಹೇಳಲಾಗುತ್ತಿರುವ […]

sadhu srinath

|

Feb 26, 2020 | 8:35 AM

ಭೀಕರ ಕೊರೊನಾ ವೈರಸ್ ಇಡೀ ಜಗತ್ತನ್ನು ಬೆಚ್ಚಿಬೀಳಿಸಿರುವ ಬೆನ್ನಲ್ಲೇ, ಅಮೆರಿಕದ ಬದ್ಧ ವೈರಿ ಇರಾನ್​ನಲ್ಲೂ ತನ್ನ ಹಾವಳಿ ಶುರುಮಾಡಿದೆ. ಇರಾನ್ ಆರೋಗ್ಯ ಸಚಿವರಿಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಹೀಗಾಗಿ ಸೋಂಕು ಪೀಡಿತ ಸಚಿವನಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಇರಾನ್ ತುಂಬಾ ಹೈಅಲರ್ಟ್ ಘೋಷಿಸಲಾಗಿದೆ.

‘ಕೊರೊನಾ’ ಸ್ಯಾಂಪಲ್ ಸಂಗ್ರಹ..! ಒಂದ್ಕಡೆ ಕೊರೊನಾ ಭೀಕರ ರೂಪ ತಾಳುತ್ತಿದ್ರೆ, ಈ ಬಗ್ಗೆ ಅಧ್ಯಯನ ನಡೆಸಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ಟೀಂ ಚೀನಾಗೆ ತೆರಳಿದೆ. ಕೊರೊನಾ ವೈರಾಣು ಚೀನಾದ ಬಯೋ ವೆಪನ್ ಅಂತಾ ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ, ಇದ್ರ ಸ್ಯಾಂಪಲ್ ಪಡೆಯಲು ಮುಂದಾಗಿದೆ. ವುಹಾನ್​ನ ಸ್ಥಳೀಯ ಪ್ರದೇಶಗಳಲ್ಲಿ ವೈರಸ್ ಸ್ಯಾಂಪಲ್ ಪಡೆಯಲಾಗುತ್ತಿದೆ.

ನೆಲಕ್ಕುರುಳಿತು ಗಗನಚುಂಬಿ ಕಟ್ಟಡ..! ಅಮೆರಿಕದ ಡಲ್ಲಾಸ್​ನ ಗಗನಚುಂಬಿ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. 11 ಅಂತಸ್ತಿನ ಈ ಕಟ್ಟಡ ಕುಸಿತ ಕಂಡಿದ್ದ ಹಿನ್ನೆಲೆಯಲ್ಲಿ, ಅಪಾಯದ ಮುನ್ಸೂಚನೆ ಅರಿತ ಸ್ಥಳೀಯ ಆಡಳಿತ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಬೃಹತ್ ಕ್ರೇನ್​ಗಳನ್ನ ಬಳಸಿ ತೆರವು ಮಾಡಲಾಗುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada