ನಾಸಾಗೂ ಸಿಗದ ವಿಕ್ರಮ್ ಲ್ಯಾಂಡರ್ ಸುಳಿವು

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡರ್​ ‘ವಿಕ್ರಮ್’ ಇಳಿಯಬೇಕಾಗಿದ್ದ ಸ್ಥಳದ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಆದ್ರೆ, ನಾಸಾ ಬಿಡುಗಡೆ ಮಾಡಿದ ಚಿತ್ರಗಳಲ್ಲೂ ಸಹ​ ‘ವಿಕ್ರಮ್’ ಲ್ಯಾಂಡರ್ ಪತ್ತೆಯಾಗಿಲ್ಲ. ‘ವಿಕ್ರಮ್’ ಕಠಿಣ ಲ್ಯಾಂಡಿಂಗ್​ನಿಂದ ಸಮಸ್ಯೆಯಾಗಿತ್ತು. ಹೀಗಾಗಿ ವಿಕ್ರಮ್ ಪತ್ತೆಗೆ ಇಸ್ರೋ ಜೊತೆಗೆ ನಾಸಾ ಸಹ ಕೈಜೋಡಿಸಿದೆ.  ಚಂದ್ರನ ಮೇಲೆ ಸುತ್ತುತ್ತಿರುವ ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್​ಆರ್​ಒ) ಸೆ.17ರಂದು ವಿಕ್ರಮ್ ಲ್ಯಾಂಡ್ ಆಗಬೇಕಿದ್ದ ಸ್ಥಳದ ಫೋಟೋಗಳನ್ನು ಸೆರೆಹಿಡಿದಿತ್ತು. ಅಂದು ದಕ್ಷಿಣ ಧ್ರುವದಲ್ಲಿ ನೆರಳಿದ್ದ ಕಾರಣ ಎಲ್​ಆರ್​ಒ ಕ್ಯಾಮರಾಗೂ ‘ವಿಕ್ರಮ್’ […]

ನಾಸಾಗೂ ಸಿಗದ ವಿಕ್ರಮ್ ಲ್ಯಾಂಡರ್ ಸುಳಿವು
Follow us
ಸಾಧು ಶ್ರೀನಾಥ್​
|

Updated on:Oct 15, 2019 | 1:11 PM

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡರ್​ ‘ವಿಕ್ರಮ್’ ಇಳಿಯಬೇಕಾಗಿದ್ದ ಸ್ಥಳದ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಆದ್ರೆ, ನಾಸಾ ಬಿಡುಗಡೆ ಮಾಡಿದ ಚಿತ್ರಗಳಲ್ಲೂ ಸಹ​ ‘ವಿಕ್ರಮ್’ ಲ್ಯಾಂಡರ್ ಪತ್ತೆಯಾಗಿಲ್ಲ.

‘ವಿಕ್ರಮ್’ ಕಠಿಣ ಲ್ಯಾಂಡಿಂಗ್​ನಿಂದ ಸಮಸ್ಯೆಯಾಗಿತ್ತು. ಹೀಗಾಗಿ ವಿಕ್ರಮ್ ಪತ್ತೆಗೆ ಇಸ್ರೋ ಜೊತೆಗೆ ನಾಸಾ ಸಹ ಕೈಜೋಡಿಸಿದೆ.  ಚಂದ್ರನ ಮೇಲೆ ಸುತ್ತುತ್ತಿರುವ ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್​ಆರ್​ಒ) ಸೆ.17ರಂದು ವಿಕ್ರಮ್ ಲ್ಯಾಂಡ್ ಆಗಬೇಕಿದ್ದ ಸ್ಥಳದ ಫೋಟೋಗಳನ್ನು ಸೆರೆಹಿಡಿದಿತ್ತು. ಅಂದು ದಕ್ಷಿಣ ಧ್ರುವದಲ್ಲಿ ನೆರಳಿದ್ದ ಕಾರಣ ಎಲ್​ಆರ್​ಒ ಕ್ಯಾಮರಾಗೂ ‘ವಿಕ್ರಮ್’ ಸಿಗಲಿಲ್ಲ. ಹೀಗಾಗಿ, ಅಕ್ಟೋಬರ್​ ತಿಂಗಳಲ್ಲಿ ಮತ್ತೆ ದಕ್ಷಿಣ ಧ್ರುವದ ಮೇಲೆ ನಾಸಾದ ಆರ್ಬಿಟರ್ ಹಾದು ಹೋಗಲಿದೆ. ಆಗ ದಕ್ಷಿಣ ಧ್ರುವದಲ್ಲಿ ಬೆಳಕಿದ್ದರೆ, ಲೂನಾರ್ ರೆಕನೈಸನ್ಸ್​ ಆರ್ಬಿಟರ್​ ಕ್ಯಾಮರಾಗೆ ‘ವಿಕ್ರಮ್’ ಸಿಗುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.

ಸೆ.7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ಚಂದ್ರಯಾನ-2ರ ‘ವಿಕ್ರಮ್’ ಲ್ಯಾಂಡರ್​ ಕೊನೆ ಕ್ಷಣದಲ್ಲಿ ಇಸ್ರೋ ವಿಜ್ಞಾನಿಗಳ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಅಂದಿನಿಂದ ‘ವಿಕ್ರಮ್’ ಲ್ಯಾಂಡರ್ ಪತ್ತೆಗೆ ವಿಜ್ಞಾನಿಗಳಿಂದ ಪ್ರಯತ್ನ ಮುಂದುವರಿದಿದೆ.

Published On - 2:39 pm, Fri, 27 September 19

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ