ಸೌರಮಂಡಲದಲ್ಲಿ ಗ್ರಹಗಳಿಗೆ ಹೆಸರಿಟ್ಟವರು ಯಾರು? ಚಿಕ್ಕ ಗ್ರಹಗಳಿಗೂ ಇದೆ ಭಾರತೀಯರ ಹೆಸರು
ನಮ್ಮ ಸೌರವ್ಯೂಹದ ಗ್ರಹಗಳಿಗೆ ಪ್ರಾಚೀನ ಕಾಲದಲ್ಲಿ ರೋಮನ್ ದೇವರು ಮತ್ತು ದೇವತೆಗಳ ಹೆಸರನ್ನು ಇಡಲಾಗಿದೆ. ಆದಾಗ್ಯೂ, ಆಧುನಿಕ ಖಗೋಳಶಾಸ್ತ್ರದಲ್ಲಿ, ಕ್ಷುದ್ರಗ್ರಹಗಳು ಮತ್ತು ಉಪಗ್ರಹಗಳು ಸೇರಿದಂತೆ ಕೆಲವು ಆಕಾಶಕಾಯಗಳನ್ನು ವಿವಿಧ ಸಂಸ್ಕೃತಿಗಳ ಗಮನಾರ್ಹ ವ್ಯಕ್ತಿಗಳ ಹೆಸರನ್ನು ಇಡಲಾಗಿದೆ. ಹೀಗೆ ಗ್ರಹಗಳಿಗೆ ಹೆಸರಿಡುವವರು ಯಾರು? ಹೇಗೆ ಹೆಸರಿಡಲಾಗುತ್ತದೆ? ಇಲ್ಲಿದೆ ಮಾಹಿತಿ.

ಇಸವಿ 1781. ಬ್ರಿಟಿಷ್ ಖಗೋಳಶಾಸ್ತ್ರಜ್ಞ ವಿಲಿಯಂ ಹರ್ಷಲ್ ಒಂದು ರಾತ್ರಿ ಆಕಾಶಕ್ಕೆ ದೃಷ್ಟಿ ನೆಟ್ಟು ನಕ್ಷತ್ರಗಳನ್ನು ವೀಕ್ಷಿಸುತ್ತಿದ್ದಾಗ ಅಲ್ಲೊಂದು ಪ್ರಕಾಶಮಾನಾವಾಗಿ ಬೆಳಗುವ ಬೆಳಕೊಂದು ಅವರಿಗೆ ಕಾಣಿಸಿತು. ಅದು ನಕ್ಷತ್ರವಲ್ಲ, ಗ್ರಹ! ಹರ್ಷಲ್ ಅಂದು ಪತ್ತೆ ಹಚ್ಚಿದ ಗ್ರಹವೇ ಯುರೇನಸ್. ಅಂದ ಹಾಗೆ ಹರ್ಷಲ್ ಅವರು ಈ ಗ್ರಹಕ್ಕೆ ಜಾರ್ಜಿಯಂ ಸಿಡಸ್ ಎಂದು ಹೆಸರಿಡಲು ಬಯಸಿದ್ದರು. ಆದರೆ ಜರ್ಮನ್ ಖಗೋಳ ಶಾಸ್ತ್ರಜ್ಞ ಜೋಹಾನ್ ಬೋಡೆ ಯುರೇನಸ್ ಎಂಬ ಹೆಸರು ಸೂಚಿಸಿದರು. ಯುರೇನಸ್ ಎಂಬ ಹೆಸರನ್ನೇ ಯಾಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆ ಉದಿಸುವುದು ಸಹಜ. ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದರೆ ಅಲ್ಲಿಯವರೆಗೆ ಗ್ರಹಗಳಿಗೆ ಹೇಗೆ ಹೆಸರಿಡಲಾಯಿತು? ಹೆಸರಿನ ಆಯ್ಕೆ ಹೇಗೆ ಎಂಬುದನ್ನು ನೋಡಬೇಕಾಗುತ್ತದೆ. ಸೌರ ಮಂಡಲದಲ್ಲಿ ಗ್ರಹಗಳಿಗೆ ಹೆಸರಿಡಲು ಯಾವ ಮಾನದಂಡಗಳನ್ನು ಪಾಲಿಸಲಾಗುತ್ತದೆ? ಪ್ರತಿಯೊಂದು ಹೆಸರಿನ ಅರ್ಥವೇನು? ಇಲ್ಲಿದೆ ವಿವರಣೆ ಬುಧ (Venus) ಬುಧ ಬುಧ ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹ, ಸೂರ್ಯನ ಸಾಮೀಪ್ಯದಿಂದಾಗಿ ಬುಧವನ್ನು ಬರಿಗಣ್ಣಿನಿಂದ ವೀಕ್ಷಿಸಲು ತುಂಬಾ ಕಷ್ಟ, ಆದರೆ ಚಲನೆಯ ಸಮಯದಲ್ಲಿ ಅದನ್ನು ಪರೋಕ್ಷವಾಗಿ ವೀಕ್ಷಿಸಬಹುದು. ಸೂರ್ಯ ಮತ್ತು ಇನ್ನೊಂದು ಗ್ರಹದ ನಡುವೆ ಹಾದುಹೋಗುವಾಗ ಇದು ಸೂರ್ಯನ ಮೇಲ್ಮೈಯಲ್ಲಿ ಕಪ್ಪು ಚುಕ್ಕೆಯಂತೆ ಕಾಣುತ್ತದೆ. ಚಂದ್ರನ ಜೊತೆಗೆ, ಬುಧವು ಆಕಾಶದಲ್ಲಿ ಹೊಳೆಯುವ ಐದು ಪ್ರಕಾಶಮಾನವಾದ ಗ್ರಹಗಳಲ್ಲಿ ಒಂದಾಗಿದೆ . ಇದು ರೋಮ್ ಜನರ ಗಮನಕ್ಕೆ ಬಂದಿತು. ಈ ಗ್ರಹ ಸೂರ್ಯನನ್ನು ಸೆಕೆಂಡಿಗೆ 50 ಕಿಮೀ ವೇಗದಲ್ಲಿ ಸುತ್ತುವುದರಿಂದ ರೋಮನ್ನರು ತಮ್ಮ ವೇಗದ ದೇವರು, ಪ್ರಯಾಣ ಮತ್ತು ವಾಣಿಜ್ಯದ ದೇವರು ಮರ್ಕ್ಯುರಿ ಎಂದು...