ಪಾಕಿಸ್ತಾನ: ಬಸ್​ ಕಂದಕಕ್ಕೆ ಉರುಳಿ 29 ಪ್ರಯಾಣಿಕರು ಸಾವು

ಬಸ್​ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 29 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಪರ್ವತ ಪ್ರದೇಶದಲ್ಲಿ ಸಂಭವಿಸಿದ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ವರದಿ ತಿಳಿಸಿದೆ.ಸ್ಥಳೀಯರು ಬಸ್‌ನಿಂದ ಮೃತದೇಹಗಳನ್ನು ಹೊರತರುತ್ತಿದ್ದು, ಪೊಲೀಸರು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತೆರಳುತ್ತಿವೆ. ಕಹುತಾ ರಾವಲ್ಪಿಂಡಿ ಜಿಲ್ಲೆಯಲ್ಲಿರುವ ತಹಸಿಲ್ ಆಗಿದೆ ಮತ್ತು ನಗರದಿಂದ ಒಂದು ಗಂಟೆ ದೂರದಲ್ಲಿದೆ.

ಪಾಕಿಸ್ತಾನ: ಬಸ್​ ಕಂದಕಕ್ಕೆ ಉರುಳಿ 29 ಪ್ರಯಾಣಿಕರು ಸಾವು
ಅಪಘಾತImage Credit source: India TV
Follow us
|

Updated on: Aug 25, 2024 | 2:10 PM

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾನುವಾರ ಪ್ರಯಾಣಿಕರ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ಕನಿಷ್ಠ 29 ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಸ್ ಹವೇಲಿ ಕಹುಟಾದಿಂದ ರಾವಲ್ಪಿಂಡಿಗೆ 30 ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿತ್ತು, ಪಾನಾ ಸೇತುವೆ ಬಳಿ ಅಪಘಾತ ಸಂಭವಿಸಿದೆ.

ಪರ್ವತ ಪ್ರದೇಶದಲ್ಲಿ ಸಂಭವಿಸಿದ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ವರದಿ ತಿಳಿಸಿದೆ. ಸ್ಥಳೀಯರು ಬಸ್‌ನಿಂದ ಮೃತದೇಹಗಳನ್ನು ಹೊರತರುತ್ತಿದ್ದು, ಪೊಲೀಸರು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತೆರಳುತ್ತಿವೆ. ಕಹುತಾ ರಾವಲ್ಪಿಂಡಿ ಜಿಲ್ಲೆಯಲ್ಲಿರುವ ತಹಸಿಲ್ ಆಗಿದೆ ಮತ್ತು ನಗರದಿಂದ ಒಂದು ಗಂಟೆ ದೂರದಲ್ಲಿದೆ.

ಪಾಕಿಸ್ತಾನದಲ್ಲಿ ಒಂದು ದಿನದ ಹಿಂದಷ್ಟೇ ದೊಡ್ಡ ಅಪಘಾತ ಸಂಭವಿಸಿತ್ತು ಇರಾಕ್‌ನಿಂದ ಇರಾನ್ ಮೂಲಕ ಹಿಂದಿರುಗುತ್ತಿದ್ದ ಶಿಯಾ ಮುಸ್ಲಿಂ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಹೆದ್ದಾರಿಯಿಂದ ನೈಋತ್ಯ ಪಾಕಿಸ್ತಾನದ ಕಂದರಕ್ಕೆ ಬಿದ್ದು ಕನಿಷ್ಠ 35 ಜನರು ಸಾವನ್ನಪ್ಪಿದ್ದರು.

ಮತ್ತಷ್ಟು ಓದಿ: ಇರಾನ್​ನಲ್ಲಿ ಬಸ್​ ಪಲ್ಟಿಯಾಗಿ 35 ಪಾಕಿಸ್ತಾನಿ ಪ್ರಯಾಣಿಕರು ಸಾವು

ಬಲೂಚಿಸ್ತಾನ್ ಪ್ರಾಂತ್ಯದ ಲಾಸ್ಬೆಲಾ ಜಿಲ್ಲೆಯ ಮೂಲಕ ಹಾದುಹೋಗುವಾಗ ಬಸ್ ಬ್ರೇಕ್ ಫೇಲ್​ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಮಕ್ರಾನ್ ಕರಾವಳಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು. ಶವಗಳನ್ನು ಶನಿವಾರ ಪಾಕಿಸ್ತಾನದ ಮಿಲಿಟರಿ ವಿಮಾನದಲ್ಲಿ ಮನೆಗೆ ತರಲಾಯಿತು ಮತ್ತು ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಸಮಾಧಿ ಮಾಡಲಾಯಿತು. ಭಾನುವಾರ ಕಂದಕಕ್ಕೆ ಬಿದ್ದ ಬಸ್ ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯಕ್ಕೆ ಹೋಗುತ್ತಿತ್ತು ಎಂದು ಸಬೀರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ