Pakistan Airstrike: ಪಾಕಿಸ್ತಾನದಿಂದ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ, 15 ಮಂದಿ ಸಾವು
ಅಫ್ಘಾನಿಸ್ತಾನದ ಬರ್ಮಾಲ್ ಜಿಲ್ಲೆಯ ಮೇಲೆ ಪಾಕಿಸ್ತಾನ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದೆ. ಮಕ್ಕಳು ಸೇರಿದಂತೆ ಕನಿಷ್ಠ 15 ಜನರ ಸಾವಿಗೆ ಕಾರಣವಾಗಿದ್ದು, ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಡಿಸೆಂಬರ್ 24 ರ ರಾತ್ರಿ ನಡೆದ ದಾಳಿಗಳು ಲಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿಯಾಗಿದೆ, ಅಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ತಾಲಿಬಾನ್‌ನ ರಕ್ಷಣಾ ಸಚಿವಾಲಯವು ಬರ್ಮಾಲ್, ವೈಮಾನಿಕ ದಾಳಿಯ ನಂತರ ಪ್ರತೀಕಾರ ತೀರಿಸಲು ಪ್ರತಿಜ್ಞೆ ಮಾಡಿದೆ.
ಪಾಕಿಸ್ತಾನ(Pakistan)ವು ತನ್ನ ನೆರೆಯ ರಾಷ್ಟ್ರವಾದ ಅಫ್ಘಾನಿಸ್ತಾನ(Afghanistan)ದ ಮೇಲೆ ಮಂಗಳವಾರ ರಾತ್ರಿ ವೈಮಾನಿಕ ದಾಳಿ ನಡೆದಿದೆ. ಇದರ ಪರಿಣಾಮ 15 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಭಾವಿಸಲಾಗಿದೆ. ಡಿಸೆಂಬರ್ 24 ರ ರಾತ್ರಿ ನಡೆದ ಈ ವೈಮಾನಿಕ ದಾಳಿಯಲ್ಲಿ ಲಾಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಲಾಯಿತು. ಅಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ, ಪಾಕಿಸ್ತಾನದ ಫೈಟರ್ ಜೆಟ್‌ಗಳು ಈ ಬಾಂಬ್ ದಾಳಿ ನಡೆಸಿವೆ.
ಈ ದಾಳಿಯಲ್ಲಿ ತಾಲಿಬಾನ್ ತರಬೇತಿ ಶಿಬಿರವನ್ನು ಧ್ವಂಸಗೊಳಿಸಲಾಗಿದೆ ಮತ್ತು ಅನೇಕ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬರ್ಮಾಲ್‌ನ ಮುರ್ಗ್ ಬಜಾರ್ ಗ್ರಾಮವು ಸಂಪೂರ್ಣವಾಗಿ ನಾಶವಾಗಿದೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಅಫ್ಘಾನ್ ಮಾಧ್ಯಮಗಳ ಪ್ರಕಾರ, ಈ ವೈಮಾನಿಕ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರಿ ವಿನಾಶ ಸಂಭವಿಸಿದೆ. ಪಾಕಿಸ್ತಾನದ ವೈಮಾನಿಕ ದಾಳಿಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಎಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಓದಿ:ಈ ವರ್ಷ ಭಾರತ, ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಹೇಗಿರುತ್ತೆ?; ವಿಶ್ವಬ್ಯಾಂಕ್ನಿಂದ ಹೋಲಿಕೆ
ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಅಫ್ಘಾನ್ ರಕ್ಷಣಾ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಇದರೊಂದಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರನ್ನು ಬಾಂಬ್ ದಾಳಿಗೆ ಗುರಿಪಡಿಸಲಾಗಿದೆ ಎಂದು ಹೇಳಲಾಗಿದೆ. ಅಫ್ಘಾನಿಸ್ತಾನವು ತನ್ನ ಭೂಮಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ಸಂಪೂರ್ಣ ಹಕ್ಕನ್ನು ಹೊಂದಿದೆ ಎಂದು ತಾಲಿಬಾನ್ ಹೇಳಿಕೆಯಲ್ಲಿ ತಿಳಿಸಿದೆ.
ಈಗ ಪಾಕಿಸ್ತಾನದಲ್ಲಿ ತೆಹ್ರೀಕ್-ಎ-ತಾಲಿಬಾನ್ ಭಯ ಹೆಚ್ಚಾಗುತ್ತಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿತ್ತು. ಮಾರ್ಚ್ ನಂತರ ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನದ ಎರಡನೇ ದಾಳಿ ಇದಾಗಿದೆ. ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಮತ್ತು ಕ್ರೂರ ಕೃತ್ಯ ಎಂದು ತಾಲಿಬಾನ್ ಸ್ಪಷ್ಟವಾಗಿ ಹೇಳಿದೆ.
ಮೃತರಲ್ಲಿ ಹೆಚ್ಚಿನವರು ವಜಿರಿಸ್ತಾನ್ ಪ್ರದೇಶದ ನಿರಾಶ್ರಿತರು ಎಂದು ವರದಿಯಾಗಿದೆ. ಈ ದಾಳಿಯ ಪರಿಣಾಮವನ್ನು ಪಾಕಿಸ್ತಾನ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ಬೆದರಿಕೆ ಹಾಕಿದೆ. ಅಫ್ಘಾನಿಸ್ತಾನವನ್ನು 2021 ರಲ್ಲಿ ತಾಲಿಬಾನ್ ವಶಪಡಿಸಿಕೊಂಡಿದೆ.ಕಾಬೂಲ್‌ನಲ್ಲಿ ಅಫ್ಘಾನಿಸ್ತಾನ ಸರ್ಕಾರವು ತಿಂಗಳ ಕಾಲ ಆಯೋಜಿಸಿದ್ದ ಮಾತುಕತೆ ವಿಫಲವಾದ ನಂತರ ಪಾಕಿಸ್ತಾನವು ಏಕಪಕ್ಷೀಯವಾಗಿ ಆಫ್ಘನ್ ಸರ್ಕಾರದೊಂದಿಗಿನ ಕದನ ವಿರಾಮವನ್ನು ಕೊನೆಗೊಳಿಸಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ