Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ನಾವು ರಾಜಕೀಯದಿಂದ ದೂರ: ಪಾಕ್ ಸೇನೆ

ಪಾಕಿಸ್ತಾನ ಸೇನೆಯು "ರಾಜಕೀಯದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ" ಮತ್ತು ಸಂಸ್ಥೆಯು ಭವಿಷ್ಯದಲ್ಲಿಯೂ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದೆ ಎಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಫ್ತಿಕರ್ ಹೇಳಿದ್ದಾರೆ.

ರಾಜಕೀಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ನಾವು ರಾಜಕೀಯದಿಂದ ದೂರ: ಪಾಕ್ ಸೇನೆ
ಬಾಬರ್ ಇಫ್ತಿಕರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 14, 2022 | 10:24 PM

ಪಾಕಿಸ್ತಾನದ ಸೇನೆಯು (Pakistan Army) ತನ್ನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿಕೆಟ್ಟ ಪ್ರಚಾರದಿಂದ ಸ್ಪಷ್ಟವಾಗಿ ಅಸಮಾಧಾನಗೊಂಡಿದ್ದು, “ರಾಜಕೀಯದೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ” ಮತ್ತು ನಾವು “ರಾಜಕೀಯದಿಂದ ದೂರವೇ ಇರುತ್ತೇವೆ” ಎಂದು ಗುರುವಾರ ಹೇಳಿದೆ. ಸೇನೆಯ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಡೈರೆಕ್ಟರ್ ಜನರಲ್ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಅವರು ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ (Army chief Gen Qamar Javed Bajwa) ಅವರು ವಿಸ್ತರಣೆಯನ್ನು ಬಯಸುತ್ತಿಲ್ಲ ಮತ್ತು ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದ ಉಳಿವು ಕೇವಲ ಪ್ರಜಾಪ್ರಭುತ್ವದ ಮೇಲೆ ಅಡಗಿದೆ ಮತ್ತು ಅದರ ಶಕ್ತಿಯು ಸಂಸತ್ತು, ಸುಪ್ರೀಂಕೋರ್ಟ್ ಅಥವಾ ಸಶಸ್ತ್ರ ಪಡೆಗಳಲ್ಲಿದೆ ಎಂದು ಮೇಜರ್ ಜನರಲ್ ಇಫ್ತಿಕರ್ ಹೇಳಿದ್ದಾರೆ. ಪಾಕಿಸ್ತಾನ ಸೇನೆಯು “ರಾಜಕೀಯದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ” ಮತ್ತು ಸಂಸ್ಥೆಯು ಭವಿಷ್ಯದಲ್ಲಿಯೂ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದೆ ಎಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಫ್ತಿಕರ್ ಹೇಳಿದ್ದಾರೆ. ಪಾಕ್ ಪ್ರಧಾನಿಯಾಗಿ ಶಹಬಾಜ್ ಷರೀಫ್ ಅಧಿಕಾರ ವಹಿಸಿಕೊಂಡ ದಿನದಂದು ಜನರಲ್ ಬಾಜ್ವಾ ಅವರಿಗೆ ಆರಾಮ ಇರಲಿಲ್ಲ. ಹಾಗಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು ಎಂದು ಹೇಳಿದ್ದಾರೆ.

ಸೇನೆಯು ತಟಸ್ಥವಾಗಿದೆ ಎಂದು ಹೇಳುವ ಬದಲು ‘ಸಾಂವಿಧಾನಿಕ ಅಗತ್ಯತೆ ಮತ್ತು ವಿವಿಧ ರಾಜಕೀಯ ಪಕ್ಷಗಳು ವರ್ಷಗಳಿಂದ ಮಾಡಿದ ಬೇಡಿಕೆಗಳ ಪ್ರಕಾರ ಇದು ರಾಜಕೀಯದಿಂದ ದೂರವಿದೆ ಎಂದು ಹೇಳುವುದು ಹೆಚ್ಚು ಸೂಕ್ತವಾಗಿದೆ ಎಂದಿದ್ದಾರೆ ಇಫ್ತಿಕರ್.

“ನಮಗೆ ಅನೇಕ ಭದ್ರತಾ ಸವಾಲುಗಳಿವೆ ಮತ್ತು ನಾವು ಬೇರೆ ಯಾವುದೇ ವಿಷಯದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ನಾವು ಭದ್ರತಾ ಸವಾಲುಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾದರೆ, ಅದು ಉತ್ತಮವಾಗಿರುತ್ತದೆ, ”ಎಂದು ಅವರು ಹೇಳಿದರು. ಜನರಲ್ ಬಾಜ್ವಾ ಅವರು ವಿಸ್ತರಣೆಯನ್ನು ಬಯಸುವುದಿಲ್ಲ ಅಥವಾ ಅವರು ವಿಸ್ತರಣೆಯನ್ನು ಸ್ವೀಕರಿಸುವುದಿಲ್ಲ. ಏನೇ ಇರಲಿ, ಅವರು ನವೆಂಬರ್ 29, 2022 ರಂದು ನಿವೃತ್ತರಾಗುತ್ತಾರೆ ಎಂದು ವಕ್ತಾರರು ಹೇಳಿದರು.

ಇತ್ತೀಚಿನ ರಾಜಕೀಯ ಪ್ರಕ್ಷುಬ್ಧತೆಯ ಉತ್ತುಂಗದಲ್ಲಿ ಮಾರ್ಷಲ್ ಲಾ ಬೆದರಿಕೆಯ ಬಗ್ಗೆ ವದಂತಿಗಳನ್ನು ಅವರು ತಳ್ಳಿಹಾಕಿದರು. “ಪಾಕಿಸ್ತಾನದಲ್ಲಿ ಎಂದಿಗೂ ಮಾರ್ಷಲ್ ಲಾ ಇರುವುದಿಲ್ಲ.” ಅವಿಶ್ವಾಸ ಮತದ ಕದನ ನಡೆಯುತ್ತಿರುವಾಗ ಮಧ್ಯರಾತ್ರಿ ನ್ಯಾಯಾಲಯಗಳನ್ನು ತೆರೆಯುವ ಕುರಿತು ಕೇಳಿದ ಪ್ರಶ್ನೆಗೆ, ಇದು ನ್ಯಾಯಾಲಯಗಳ ನಿರ್ಧಾರ ಮತ್ತು ಸೇನೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಅಧಿಕೃತ ನಿವಾಸವನ್ನು ತೊರೆಯುವ ನಿರ್ಧಾರಕ್ಕೂ ಮುನ್ನ ಸೇನಾ ಮುಖ್ಯಸ್ಥರು ಮತ್ತು ಐಎಸ್‌ಐ ಮುಖ್ಯಸ್ಥರು ಪಿಎಂ ಭವನಕ್ಕೆ ಭೇಟಿ ನೀಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಅವರು ತಿರಸ್ಕರಿಸಿದರು. “ಸಂಪೂರ್ಣವಾಗಿ ಸುಳ್ಳು. ಅಲ್ಲಿಗೆ ಯಾರೂ ಹೋಗಲಿಲ್ಲ. ಇಡೀ ಪ್ರಕ್ರಿಯೆಯಲ್ಲಿ ಸೇನೆಯಿಂದ ಯಾವುದೇ ಹಸ್ತಕ್ಷೇಪ ನಡೆದಿಲ್ಲ. ಈ ವಿಷಯವನ್ನು ಇಲ್ಲಿಗೇ ಬಿಡಿ ಎಂದು ಅವರು ಹೇಳಿದರು. ಅವಿಶ್ವಾಸ ಮತದ ಹಿಂದಿನ ದಿನಗಳಲ್ಲಿ ಸೇನಾ ಮುಖ್ಯಸ್ಥರು ಪಾಕಿಸ್ತಾನದಲ್ಲಿ ಅಥವಾ ಪಾಕಿಸ್ತಾನದ ಹೊರಗಿನ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ ಎಂಬುದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಮೇಜರ್ ಜನರಲ್ ಇಫ್ತಿಕರ್ ಹೇಳಿದ್ದಾರೆ.

ಇದನ್ನೂ ಓದಿ: Petrol- Diesel Price In Pakistan: ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಲೀಟರ್​ಗೆ 200 ರೂಪಾಯಿ ದಾಟಲಿದೆ ಡೀಸೆಲ್

Published On - 10:21 pm, Thu, 14 April 22