ಪಾಕ್ ಪ್ರಧಾನಿಗೆ ಮುಜುಗರ; ಕಿವಿಗೆ ಇಯರ್ಫೋನ್ ಹಾಕಲು ಪರದಾಡಿದ ಷರೀಫ್; ರಷ್ಯಾ ಅಧ್ಯಕ್ಷರಿಗೆ ನಗೆ
Embarrassment for Pak PM Shehbaz Sharif during meeting with Putin: ಎಸ್ಸಿಒ ಶೃಂಗಸಭೆಯ ವೇಳೆ ಪಾಕಿಸ್ತಾನ ಮತ್ತು ರಷ್ಯಾ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ವ್ಲಾದಿಮಿರ್ ಪುಟಿನ್ ಜೊತೆಗಿನ ಸಭೆ ಆರಂಭಕ್ಕೂ ಮುನ್ನ ಪಾಕ್ ಪ್ರಧಾನಿ ಷರೀಫ್ ಮುಜುಗರಕ್ಕೊಳಗಾದರು. ಹೆಡ್ಸೆಟ್ ಹಾಕಲು ಗೊತ್ತಾಗದೆ ಕೆಲವೊತ್ತು ಅವರು ಪರದಾಡಿದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಬೀಜಿಂಗ್, ಸೆಪ್ಟೆಂಬರ್ 3: ಚೀನಾದಲ್ಲಿ ಪಾಕಿಸ್ತಾನ (Pakistan) ಹಾಗೂ ಅದರ ಪ್ರಧಾನಿ ಶಾಹಬಾಜ್ ಷರೀಫ್ ಅವರಿಗೆ ಮುಜುಗರ ಆಗುವಂತಹ ಕೆಲ ಘಟನೆಗಳು ಸಾಲು ಸಾಲಾಗಿ ನಡೆದಿವೆ. ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗೆಂದು ಮಾಡಿದ ಭೇಟಿಯ ವೇಳೆ ಷರೀಫ್ ಅವರು ಕಿವಿಗೆ ಹೆಡ್ಸೆಟ್ ಹಾಕಿಕೊಳ್ಳಲು ಪರದಾಡಿದ ಘಟನೆ ನಡೆಯಿತು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನ ಪ್ರಧಾನಿ ಶಾಹಬಾಜ್ ಷರೀಫ್ ಅವರು ಇಯರ್ಫೋನ್ ಹಾಕಲು ಪರದಾಡುತ್ತಿರುವಾಗ ಪುಟಿನ್ ಅವರ ಮೊಗದಲ್ಲಿ ಸಣ್ಣ ನಗು ಮೂಡಿತ್ತು. ತಮ್ಮ ಹೆಡ್ಫೋನ್ ಅನ್ನು ಕೈಯಲ್ಲಿಡಿದು, ಹೇಗೆ ಹಾಕಿಕೊಳ್ಳಬೇಕು ಎಂದು ಷರೀಫ್ಗೆ ತಿಳಿಸುವ ಪ್ರಯತ್ನವನ್ನೂ ಪುಟಿನ್ ಮಾಡಿದರು. ಕೆಲ ಹೊತ್ತಿನ ಬಳಿಕ ಷರೀಫ್ ತಮ್ಮ ಹೆಡ್ಫೋನ್ ಅನ್ನು ಸರಿಯಾಗಿ ಧರಿಸಲು ಯಶಸ್ವಿಯಾದರು.
ಇದನ್ನೂ ಓದಿ: ಕಿಮ್, ಪುಟಿನ್ ಜೊತೆ ಜಿನ್ಪಿಂಗ್; ಚೀನಾದಲ್ಲಿ ಬೃಹತ್ ಮಿಲಿಟರಿ ಪೆರೇಡ್; ಪಾಶ್ಚಿಮಾತ್ಯ ಶಕ್ತಿಗೆ ಖಡಕ್ ಸಂದೇಶ
2022ರಲ್ಲಿ ವ್ಲಾದಿಮಿರ್ ಪುಟಿನ್ ಭೇಟಿ ವೇಳೆಯೇ ಇಂಥದ್ದೇ ರೀತಿಯ ಮುಜುಗರದ ಘಟನೆಯನ್ನು ಶಾಹಬಾಜ್ ಷರೀಫ್ ಅನುಭವಿಸಿದ್ದರು. ಆಗಲೂ ಕೂಡ ಇಯರ್ಫೋನ್ ಧರಿಸಲು ಷರೀಫ್ ಒದ್ದಾಡಿದ್ದರು. ಮತ್ತೆ ಅದೇ ಘಟನೆ ಪುನಾವರ್ತನೆ ಆಗಿದೆ.
ಘಟನೆಯ ವಿಡಿಯೋ ತೋರಿಸುವ ಎಕ್ಸ್ ಪೋಸ್ಟ್
Pakistan PM Shehbaz Sharif faces an awkward moment as he tries to plug in his earphone during a meeting with Russian President Vladimir Putin on the sidelines of the #SCOSummit2022 in Samarkand.
“Can somebody help me,” Sharif asks. (Source: Ria Novosti) pic.twitter.com/tdz7YKXEhy
— Dhairya Maheshwari (@dhairyam14) September 15, 2022
ಪುಟಿನ್ ಕೈಕುಲಕಲು ಓಡೋಡಿ ಬಂದಿದ್ದ ಷರೀಫ್…
ಎಸ್ಸಿಒ ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶಾಹಬ್ಬಾಜ್ ಷರೀಫ್ ರಷ್ಯಾ ಅಧ್ಯಕ್ಷರ ಗಮನ ಸೆಳೆಯಲು ಮತ್ತು ಮೆಚ್ಚಿಸಲು ಹತಾಶೆಯ ಪ್ರಯತ್ನ ಮಾಡಿದ್ದು ಕಂಡು ಬಂದಿತು. ಪುಟಿನ್ ಅವರ ಕೈ ಕುಲುಕಲು ಷರೀಫ್ ಓಡೋಡಿ ಹೋಗಿದ್ದರು. ಆ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ಒಳಗಾಗಿತ್ತು.
ಇದನ್ನೂ ಓದಿ: ಭಾರತ-ರಷ್ಯಾ ಬಾಂಧವ್ಯಕ್ಕೆ ನಮ್ಮ ತಕರಾರಿಲ್ಲ, ನಾವು ಕೂಡ ಫ್ರೆಂಡ್ಸ್ ಆಗಿರೋಣ; ಪುಟಿನ್ಗೆ ಪಾಕ್ ಪ್ರಧಾನಿ ಮನವಿ
ಇದೇ ಎಸ್ಸಿಒ ಸಮಿಟ್ನಲ್ಲಿ ಷಿ ಜಿನ್ಪಿಂಗ್, ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ ಸಾವಕಾಶವಾಗಿ ಮಾತನಾಡುತ್ತಾ ಹೋಗುತ್ತಿದ್ದಾಗ, ಪಾಕಿಸ್ತಾನ ಪ್ರಧಾನಿ ಶಾಹಬಾಜ್ ಷರೀಫ್ ಹಿನ್ನೆಲೆಯಲ್ಲಿ ಮುಜುಗರದಿಂದ ನಿಂತಿದ್ದ ದೃಶ್ಯವೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Wed, 3 September 25




