Thank You India: ಮಾನವೀಯ ನೆರವಿಗಾಗಿ ಭಾರತಕ್ಕೆ ಧನ್ಯವಾದ ತಿಳಿಸಿದ ಉಕ್ರೇನ್‌ ಅಧ್ಯಕ್ಷ

Volodymyr Zelenskyy: ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಅವರು ಭಾರತವನ್ನು ಹಾಡಿ ಹೊಗಳಿದರು ಭಾರತವು ಯುಎನ್​ನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಪ್ರಧಾನ ಮಂತ್ರಿಯೊಂದಿಗಿನ ಸಂಭಾಷಣೆಯಲ್ಲಿ ಮಾನವೀಯ ಪರಿಹಾರವನ್ನು ನೀಡುವುದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Thank You India: ಮಾನವೀಯ ನೆರವಿಗಾಗಿ ಭಾರತಕ್ಕೆ ಧನ್ಯವಾದ ತಿಳಿಸಿದ ಉಕ್ರೇನ್‌ ಅಧ್ಯಕ್ಷ
Modi And zelenskiyImage Credit source: newsonai
Follow us
TV9 Web
| Updated By: Digi Tech Desk

Updated on:Dec 27, 2022 | 11:46 AM

ದೆಹಲಿ: ಉಕ್ರೇನ್ (ukraine) ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ (Volodymyr Zelensky) ಅವರು ಭಾರತವನ್ನು ಹಾಡಿ ಹೊಗಳಿದ್ದಾರೆ.  ಭಾರತವು ಯುಎನ್​ನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಪ್ರಧಾನ ಮಂತ್ರಿಯೊಂದಿಗಿನ ಸಂಭಾಷಣೆಯಲ್ಲಿ ಮಾನವೀಯ ಪರಿಹಾರವನ್ನು ನೀಡುವುದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ (Modi) ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. G20 ಅಧ್ಯಕ್ಷ ಸ್ಥಾನ ಪಡೆದಿರುವ ಭಾರತಕ್ಕೆ ಝೆಲೆನ್ಸ್ಕಿ ಶುಭಾ ಹಾರೈಸಿದರು. ರಷ್ಯಾ, ಜೊತೆ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆಯು, ಭಾರತವು ಉಕ್ರೇನ್ ಮತ್ತು ಅದರ ನೆರೆಯ ರಾಷ್ಟ್ರಗಳಿಗೆ ಮಾನವೀಯ ಸಹಾಯವನ್ನು ಪೂರೈಸುತ್ತಿದೆ.

ನಾನು ಭಾರತದ ಪ್ರಧಾನಿ ನರೇಂದ್ರ ಅವರೊಂದಿಗೆ ದೂರವಾಣಿ ಕರೆ ಮಾಡಿದ್ದೇನೆ, ಮೋದಿ ಅವರು G20 ಅಧ್ಯಕ್ಷ ಸ್ಥಾನವನ್ನು ಅಲಂಕಾರಿಸಿದಕ್ಕೆ ಶುಭಾಶಯಗಳನ್ನು ತಿಳಿಸಿದ್ದೇನೆ. ಈ ವೇದಿಕೆಯಲ್ಲಿಯೇ ನಾನು ಶಾಂತಿ ಸೂತ್ರವನ್ನು ಘೋಷಿಸಿದ್ದೇನೆ ಮತ್ತು ಈಗ ಅದರ ಅನುಷ್ಠಾನದಲ್ಲಿ ಭಾರತದ ಭಾಗವಹಿಸುವಿಕೆಯನ್ನು ನಾನು ಎದುರು ನೋಡುತ್ತಿದ್ದೇನೆ. ಯುಎನ್‌ನಲ್ಲಿ ಮಾನವೀಯ ನೆರವು ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದು ಉಕ್ರೇನಿಯನ್ ಅಧ್ಯಕ್ಷರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ಜಿ20 ಶೃಂಗಸಭೆಯಲ್ಲಿ ಒಮ್ಮತ ರೂಪಿಸುವಲ್ಲಿ ಮೋದಿ ಪ್ರಧಾನ ಪಾತ್ರ ವಹಿಸಿದ್ದರು: ಯುಎಸ್ ಅಧಿಕಾರಿ

ಫೆಬ್ರವರಿ 24 ರಲ್ಲಿ ಉಕ್ರೇನ್ ಮತ್ತು ರಷ್ಯಾದ ನಡುವೆ ನಡೆದ ಯುದ್ಧ ಬಗ್ಗೆ ಪ್ರಧಾನಿ ಮೋದಿ ಇಬ್ಬರೂ ಅಧ್ಯಕ್ಷರ ಜೊತೆಯೂ ಮಾತನಾಡಿದ್ದರು. ಇಂದಿನ ಯುಗ ಯುದ್ಧವಲ್ಲ ಎಂದು ಪ್ರಧಾನಿ ಮೋದಿ ಅವರು ಇತ್ತೀಚೆಗೆ ಈ ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಮುಖಾಮುಖಿ ಭೇಟಿಯ ಸಂದರ್ಭದಲ್ಲಿ ಹೇಳಿದರು. ತಿಂಗಳುಗಳ ಕಾಲ ನಡೆದ ಸಂಘರ್ಷವನ್ನು ಕೊನೆಗೊಳಿಸಲು ಎರಡೂ ರಾಷ್ಟ್ರಗಳಿಗೆ ಶಾಂತಿಯುತ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿಎಂ ಮೋದಿಯವರ ಈ ವರ್ಷದ ಆರಂಭದಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಮತ್ತೆ ಈ ಬಗ್ಗೆ ಪ್ರತಿಧ್ವನಿಸಿದ್ದರು. ಅಕ್ಟೋಬರ್ 4 ರಂದು, ಪ್ರಧಾನಿ ಮೋದಿ ಅವರು ಝೆಲೆನ್ಸ್ಕಿ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ ಮತ್ತು ಯಾವುದೇ ಮಿಲಿಟರಿ ಪರಿಹಾರ ಸಾಧ್ಯವಿಲ್ಲ ಮತ್ತು ಭಾರತ ಶಾಂತಿ ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು.

ಸೆಪ್ಟೆಂಬರ್ 16 ರಂದು, ಉಜ್ಬೇಕಿಸ್ತಾನ್‌ನಲ್ಲಿ ತಮ್ಮ ಖಾಸಗಿ ಸಭೆಯಲ್ಲಿ, ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಯುದ್ಧವನ್ನು ಕೊನೆಗೊಳಿಸುವಂತೆ ಮನವಿ ಮಾಡಿದರು ಇಂದಿನ ಯುಗವು ಯುದ್ಧವಲ್ಲ ಎಂದು ಹೇಳಿದರು. ಕ್ರಿಸ್‌ಮಸ್‌ ಹಬ್ಬದಂದು, ಹಲವಾರು ಉಕ್ರೇನಿಯನ್ ಪಟ್ಟಣಗಳು ​​ರಷ್ಯಾದ ಕ್ಷಿಪಣಿಗಳಿಂದ ಗುಂಡಿನ ದಾಳಿಗೆ ಒಳಗಾದವು, ವ್ಲಾಡಿಮಿರ್ ಪುಟಿನ್ ಅವರು ಝೆಲೆನ್ಸ್ಕಿ ನೇತೃತ್ವದ ರಾಷ್ಟ್ರದೊಂದಿಗೆ ಮಾತುಕತೆಗಳನ್ನು ಕೈಗೊಳ್ಳಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:40 am, Tue, 27 December 22