AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ದೂರ ಉಳಿಯುತ್ತಾರಾ ಜೋ ಬೈಡನ್?

ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಮೆರಿಕದಲ್ಲಿ ನವೆಂಬರ್​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ದೂರ ಉಳಿಯುತ್ತಾರಾ ಜೋ ಬೈಡನ್?
ಜೋ ಬೈಡನ್Image Credit source: El pais english
ನಯನಾ ರಾಜೀವ್
|

Updated on:Jul 19, 2024 | 9:16 AM

Share

ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಸಿದ್ಧರಾಗಿದ್ದಾರೆ ಆದರೆ ಅವರ ಆರೋಗ್ಯ ಹದಗೆಡುತ್ತಿದೆ. ಜತೆಗೆ ಟ್ರಂಪ್​ನಿಂದ ಎದುರಿಸುತ್ತಿರುವ ಕಠಿಣ ಸವಾಲಿನಿಂದಾಗಿ ಅನೇಕ ಡೆಮಾಕ್ರೆಟಿಕ್ ನಾಯಕರು ಅವರನ್ನು ಚುನಾವಣಾ ಕಣದಿಂದ ಹೊರಗಿಡುವಂತೆ ಸೂಚಿಸಿದ್ದಾರೆ.

ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮೇಲಿನ ಹಲ್ಲೆ ನಂತರ ಬೈಡನ್ ಆಡಳಿತದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಲಿದೆ. ಟ್ರಂಪ್​ಗೆ ದೇಶದ ಬೆಂಬಲ ಹಾಗೂ ಸಹಾನುಭೂತಿ ಸಿಗುತ್ತಿದೆ. ವರದಿಗಳ ಪ್ರಕಾರ, ನವೆಂಬರ್​ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಬೈಡನ್ ಭಾವಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಪಕ್ಷದ ಅನೇಕರ ಒತ್ತಡಕ್ಕೆ ಮಣಿದು ರೇಸ್​ನಿಂದ ಹೊರಗುಳಿಯಬೇಕಾಗಬಹುದು. 81 ವರ್ಷದ ಜೋ ಬೈಡನ್​ಗೆ ಮರೆವಿನ ಕಾಯಿಲೆ ಇದ್ದು ಈಗ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಚಕ್ ಶುಮರ್ ಸೇರಿದಂತೆ ಡೆಮಾಕ್ರಟಿಕ್ ಪಕ್ಷದ ಉನ್ನತ ನಾಯಕರು ಬೈಡನ್​ ಅವರನ್ನು ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದ ಅಧ್ಯಕ್ಷ ಜೋ ಬೈಡನ್​ಗೆ ಕೊರೊನಾ ಸೋಂಕು

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಬಿಡೆನ್ ಅವರ ಗೆಲುವಿನ ಹಾದಿ ತುಂಬಾ ಕಷ್ಟಕರವಾಗಿದೆ ಎಂದು ತಮ್ಮ ಸ್ನೇಹಿತರಿಗೆ ಹೇಳಿದ್ದಾರೆ. ಬೈಡನ್​ ಗೆಲ್ಲುವ ಸಾಧ್ಯತೆ ಬಹಳ ಕಡಿಮೆ ಎಂದು ಒಬಾಮಾ ಸ್ಪಷ್ಟವಾಗಿ ಹೇಳಿದ್ದಾರೆ.

ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ನಂತರ ಮರುಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಬೈಡನ್ ಅವರ ಘೋಷಣೆಯನ್ನು ಮಾಡಬಹುದೆಂದು ಬಹುತೇಕ ಮಾಧ್ಯಮ ವರದಿಗಳು ಹೇಳುತ್ತವೆ.

ಇತ್ತೀಚೆಗೆ ನಡೆದ ಶೃಂಗಸಭೆಯೊಂದರಲ್ಲಿ ಉಕ್ರೇನ್​ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಅವರನ್ನು ಪುಟಿನ್ ಎಂದು ಕರೆದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:16 am, Fri, 19 July 24