AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವೀಪರಾಷ್ಟ್ರದಲ್ಲಿ ಶಾಂತಿ ಪರ್ವ: ಇನ್ನು ಸಹೋದರರದ್ದೇ ದರ್ಬಾರ್

ಕೊಲಂಬೊ: ಇತ್ತೀಚೆಗೆ ಭಯೋತ್ಪಾದಕರ ದಾಳಿಯಿಂದ ಬಸವಳಿದಿದ್ದ ಶ್ರೀಲಂಕಾ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಮೊನ್ನೆಯಷ್ಟೇ ಲಂಕಾ ಅಧ್ಯಕ್ಷರಾಗಿ ಗೊಟಬಯಾ ರಾಜಪಕ್ಸೆ ಆಯ್ಕೆಯಾಗಿದ್ದಾರೆ. ಮತ್ತಿಬ್ಬರು ಸದೋದರರ ಪೈಕಿ ಮಹಿಂದಾ ರಾಜಪಕ್ಸೆ ಪ್ರಧಾನ ಮಂತ್ರಿಯಾಗಿದ್ದರೆ. ಅವರದೇ ಸಂಪುಟದಲ್ಲಿ ಮತ್ತೊಬ್ಬ ಸಹೋದರ ಚಮಲ್ ರಾಜಪಕ್ಸೆಗೂ ಹಲವಾರು ಖಾತೆಗಳನ್ನು ಹಂಚಲಾಗಿದೆ. ಸಂಪುಟದಲ್ಲಿ ಸಹೋದರರಿಗೆ ಸ್ಥಾನ: ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಇಬ್ಬರು ಸಹೋದರರಾದ ಮಹಿಂದಾ ರಾಜಪಕ್ಸೆ ಮತ್ತು ಚಮಲ್ ರಾಜಪಕ್ಸೆಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಸಂಪುಟದಲ್ಲಿರುವ 16 ಮಂದಿಯೂ ಇಂದು ಪ್ರಮಾಣ […]

ದ್ವೀಪರಾಷ್ಟ್ರದಲ್ಲಿ ಶಾಂತಿ ಪರ್ವ: ಇನ್ನು ಸಹೋದರರದ್ದೇ ದರ್ಬಾರ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 22, 2019 | 3:28 PM

Share

ಕೊಲಂಬೊ: ಇತ್ತೀಚೆಗೆ ಭಯೋತ್ಪಾದಕರ ದಾಳಿಯಿಂದ ಬಸವಳಿದಿದ್ದ ಶ್ರೀಲಂಕಾ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಮೊನ್ನೆಯಷ್ಟೇ ಲಂಕಾ ಅಧ್ಯಕ್ಷರಾಗಿ ಗೊಟಬಯಾ ರಾಜಪಕ್ಸೆ ಆಯ್ಕೆಯಾಗಿದ್ದಾರೆ. ಮತ್ತಿಬ್ಬರು ಸದೋದರರ ಪೈಕಿ ಮಹಿಂದಾ ರಾಜಪಕ್ಸೆ ಪ್ರಧಾನ ಮಂತ್ರಿಯಾಗಿದ್ದರೆ. ಅವರದೇ ಸಂಪುಟದಲ್ಲಿ ಮತ್ತೊಬ್ಬ ಸಹೋದರ ಚಮಲ್ ರಾಜಪಕ್ಸೆಗೂ ಹಲವಾರು ಖಾತೆಗಳನ್ನು ಹಂಚಲಾಗಿದೆ.

ಸಂಪುಟದಲ್ಲಿ ಸಹೋದರರಿಗೆ ಸ್ಥಾನ: ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಇಬ್ಬರು ಸಹೋದರರಾದ ಮಹಿಂದಾ ರಾಜಪಕ್ಸೆ ಮತ್ತು ಚಮಲ್ ರಾಜಪಕ್ಸೆಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಸಂಪುಟದಲ್ಲಿರುವ 16 ಮಂದಿಯೂ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯು ಮಾರ್ಚ್​ 2020ರ ವೇಳೆಗೆ ನಡೆಯಲಿದೆ.

ನಿನ್ನೆಯಷ್ಟೇ ಲಂಕಾ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸೆ ಪ್ರಮಾಣ ವಚನ ಸ್ವೀಕರಿಸಿದ್ದರು.  ಹಣಕಾಸು ಖಾತೆ, ಗ್ರಾಮೀಣಾಭಿವೃದ್ಧಿ, ಆರ್ಥಿಕ ವ್ಯವಹಾರ ಸೇರಿದಂತೆ ಹಲವಾರು ಖಾತೆಗಳನ್ನು ಮಹಿಂದಾ ಹೊಂದಿದ್ದಾರೆ. ಮತ್ತೊಬ್ಬ ಸಹೋದರ ಚಮಲ್ ರಾಜಪಕ್ಸೆಗೆ ಕೃಷಿ, ನೀರಾವರಿ, ಆಂತರಿಕ ವ್ಯಾಪಾರ ಸೇರಿ ಹಲವು ಖಾತೆಗಳನ್ನು ನೀಡಲಾಗಿದೆ.

ರಾನಿಲ್ ವಿಕ್ರಮ ಸಿಂಘೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸುತ್ತಿದ್ದಂತೆ ಮಹಿಂದಾ ರಾಜಪಕ್ಸೆಯನ್ನು ಪ್ರಧಾನಿ ಹುದ್ದೆಗೆ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಶಿಫಾರಸು ಮಾಡಿದ್ದರು. 2005ರಿಂದ 2015ರವರೆಗೆ ಮಹಿಂದಾ ರಾಜಪಕ್ಸೆ ಲಂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಎಲ್ಲರಿಗೂ ಅಭಿನಂದನೆ ತಿಳಿಸಿ ಟ್ವೀಟ್: ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಮಧ್ಯಂತರ ಸಂಪುಟವನ್ನ ರಚಿಸಲಾಗಿದೆ. ಸಚಿವ ಸಂಪುಟದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿ ಪ್ರಧಾನಿ ಮಹಿಂದಾ ರಾಜಪಕ್ಸೆ ಟ್ವೀಟ್ ಮಾಡಿದ್ದಾರೆ.

Published On - 3:23 pm, Fri, 22 November 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು