ಸ್ವಿಜರ್ಲೆಂಡ್‌ನಲ್ಲಿ ಹೊಸ ಕಾನೂನು ಜಾರಿ; ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದು ನಿಷೇಧ
ಸ್ವಿಜರ್ಲೆಂಡ್‌ನಲ್ಲಿ ಹೊಸ ವರ್ಷದಿಂದ ಹೊಸ ಕಾನೂನು ಜಾರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ಸ್ವಿಜರ್ಲೆಂಡ್ ಸರ್ಕಾರ ನಿಷೇಧಿಸಿದೆ. ಲೂಸರ್ನ್ ವಿಶ್ವವಿದ್ಯಾನಿಲಯದ 2021ರ ಸಂಶೋಧನೆಯ ಪ್ರಕಾರ, ಸ್ವಿಜರ್ಲೆಂಡ್‌ನಲ್ಲಿ ಬುರ್ಖಾ ಅಥವಾ ನಿಖಾಬ್ ಧರಿಸುವ ಮಹಿಳೆಯರು ಕಡಿಮೆ. ಕೆಲವೇ ಕೆಲವು ಮಹಿಳೆಯರು ಮಾತ್ರ ಬುರ್ಖಾ ಧರಿಸುತ್ತಾರೆ. ಸ್ವಿಜರ್ಲೆಂಡ್‌ನ 86 ಲಕ್ಷ ಜನಸಂಖ್ಯೆಯಲ್ಲಿ ಕೇವಲ ಶೇ. 5ರಷ್ಟು ಮಾತ್ರ ಮುಸ್ಲಿಮರಿದ್ದಾರೆ. ಅವರಲ್ಲಿ ಹೆಚ್ಚಿನವರು ಟರ್ಕಿಶ್, ಬೋಸ್ನಿಯಾ ಮೂಲದವರು.
ನವದೆಹಲಿ: ಸ್ವಿಜರ್ಲೆಂಡ್‌ನಲ್ಲಿ ಹೊಸ ವರ್ಷದಿಂದ ಹೊಸ ಕಾನೂನು ಜಾರಿಯಾಗಿದೆ. ಸ್ವಿಜರ್ಲೆಂಡ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದನ್ನು ನಿಷೇಧ ಮಾಡಲಾಗಿದೆ. ನಿನ್ನೆಯಿಂದಲೇ ಬುರ್ಖಾ ಹಾಕಿಕೊಂಡು, ಮುಖ ಮುಚ್ಚಿಕೊಂಡು ಓಡಾಡುವಂತಿಲ್ಲ. ಈ ಕಾನೂನು ಉಲ್ಲಂಘಿಸಿದವರಿಗೆ 1000 ಸ್ವಿಸ್ ಫ್ರಾಂಕ್‌ಗಳ ದಂಡ ವಿಧಿಸಲಾಗುವುದು. ಸ್ವಿಜರ್ಲೆಂಡ್‌ನಲ್ಲಿ ಬುರ್ಖಾ ನಿಷೇಧದ ಕುರಿತಂತೆ 2021ರಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಮುಖಕ್ಕೆ ಮುಸುಕು ಧರಿಸುವುದನ್ನು ನಿಷೇಧಿಸುವ ಬಗ್ಗೆ ಮತದಾನ ನಡೆದಿತ್ತು. ಬುರ್ಖಾ ನಿಷೇಧದ ಪರವಾಗಿ ಶೇ.51.21ರಷ್ಟು ನಾಗರಿಕರು ಮತ ಹಾಕಿದ್ದರು. ಬುರ್ಖಾ ನಿಷೇಧದ ವಿರುದ್ಧ ಶೇ. 48.8ರಷ್ಟು ಜನರು ಮತ ಚಲಾಯಿಸಿದ್ದರು.
ಸ್ವಿಜರ್ಲೆಂಡ್ ಸರ್ಕಾರದ ಹೊಸ ಕಾನೂನಿನಲ್ಲಿ ಇರುವ ವಿವರಗಳ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಮೂಗು, ಬಾಯಿ, ಕಣ್ಣು ಮುಚ್ಚುವುದನ್ನು ನಿಷೇಧ ಮಾಡಲಾಗಿದೆ. ಸಾರ್ವಜನಿಕರು ಹೋಗಬಹುದಾದ ಖಾಸಗಿ ಸ್ಥಳಗಳಿಗೂ ಈ ನಿಯಮ ಅನ್ವಯವಾಗಲಿದೆ. ವಿಮಾನ, ರಾಜತಾಂತ್ರಿಕ ಪ್ರದೇಶಗಳಿಗೆ ಬುರ್ಖಾ ನಿಷೇಧ ಅನ್ವಯಿಸುವುದಿಲ್ಲ. ಪೂಜಾ ಸ್ಥಳ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಳ್ಳಬಹುದು. ಆರೋಗ್ಯ, ಸುರಕ್ಷತಾ ಕಾರಣಗಳಿಂದ ಮುಖ ಮುಚ್ಚಿಕೊಳ್ಳಲು ವಿನಾಯಿತಿ ನೀಡಲಾಗಿದೆ. ಸೋಂಕು, ಕಾಯಿಲೆಯಿದ್ದರೆ ರೋಗಿಗಳು ಮಾಸ್ಕ್ ಹಾಕಿಕೊಳ್ಳಬಹುದು. ಪೊಲೀಸರು ಮತ್ತು ಸೈನಿಕರಿಗೆ ಗ್ಯಾಸ್ ಮಾಸ್ಕ್ ಧರಿಸಲು ವಿನಾಯಿತಿ ಇರುತ್ತದೆ.
ಇದನ್ನೂ ಓದಿ: Viral Video: ಕಳ್ಳನೊಬ್ಬ ಬುರ್ಖಾ ಧರಿಸಿ ಜ್ಯುವೆಲ್ಲರಿ ಶಾಪ್ನಲ್ಲಿ ದರೋಡೆಗೆ ಯತ್ನ; ಸಿಸಿಟಿವಿ ವಿಡಿಯೋ ವೈರಲ್
ಸ್ವಿಜರ್ಲೆಂಡ್‌ನಲ್ಲಿ ಹೊಸ ವರ್ಷದಿಂದ ಹೊಸ ಕಾನೂನು ಜಾರಿಯಾಗಿದೆ. ಸ್ವಿಜರ್ಲೆಂಡ್‌ನಲ್ಲಿ ಬಹುತೇಕ ಯಾರೂ ಬುರ್ಖಾವನ್ನು ಧರಿಸುವುದಿಲ್ಲ. ಆದರೆ, ಸುಮಾರು ಶೇ. 30ರಷ್ಟು ಮಹಿಳೆಯರು ಮಾತ್ರ ನಿಖಾಬ್ ಧರಿಸುತ್ತಾರೆ ಎಂದು ಜರ್ಮನಿಯ ಲುಸರ್ನ್ ವಿಶ್ವವಿದ್ಯಾಲಯದ ಸಂಶೋಧನೆ ಹೇಳಿದೆ. ಸ್ವಿಜರ್ಲೆಂಡ್‌ನ 8.6 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು ಶೇ. 5ರಷ್ಟು ಮುಸ್ಲಿಮರಿದ್ದಾರೆ. 2021ರಲ್ಲಿ ಸ್ವಿಸ್ ಜನರು ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಮತ್ತು ನಿಖಾಬ್ ಸೇರಿದಂತೆ ಸಾರ್ವಜನಿಕವಾಗಿ ಮುಖದ ಮೇಲೆ ಪರದೆಯನ್ನು ನಿಷೇಧಿಸುವುದರ ಪರವಾಗಿ ಮತ ಚಲಾಯಿಸಿದರು. ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಳತೆಯು ಶೇ. 51.2ರಿಂದ ಶೇ. 48.8ರಷ್ಟು ಉತ್ತೀರ್ಣವಾಗಿದೆ ಎಂದು ಫಲಿತಾಂಶಗಳು ತೋರಿಸಿವೆ.
ಇದನ್ನೂ ಓದಿ: Video: ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದ ಆಸಾಮಿ; ಮಕ್ಕಳ ಕಳ್ಳನೆಂದು ಭಾವಿಸಿ ಧರ್ಮದೇಟು ನೀಡಿದ ಜನ
ಲೂಸರ್ನ್ ವಿಶ್ವವಿದ್ಯಾನಿಲಯದ 2021ರ ಸಂಶೋಧನೆಯ ಪ್ರಕಾರ, ಸ್ವಿಜರ್ಲೆಂಡ್‌ನಲ್ಲಿ ಬುರ್ಖಾ ಅಥವಾ ನಿಖಾಬ್ ಧರಿಸುವ ಮಹಿಳೆಯರು ಕಡಿಮೆ. ಕೆಲವೇ ಕೆಲವು ಮಹಿಳೆಯರು ಮಾತ್ರ ಬುರ್ಖಾ ಧರಿಸುತ್ತಾರೆ. ಸ್ವಿಜರ್ಲೆಂಡ್‌ನ 86 ಲಕ್ಷ ಜನಸಂಖ್ಯೆಯಲ್ಲಿ ಕೇವಲ ಶೇ. 5ರಷ್ಟು ಮಾತ್ರ ಮುಸ್ಲಿಮರಿದ್ದಾರೆ. ಅವರಲ್ಲಿ ಹೆಚ್ಚಿನವರು ಟರ್ಕಿಶ್, ಬೋಸ್ನಿಯಾ ಮೂಲದವರು.
ಮುಸ್ಲಿಂ ಸಮುದಾಯ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನಂತಹ ಮಾನವ ಹಕ್ಕುಗಳ ಸಂಘಟನೆಗಳು ಬುರ್ಖಾ ನಿಷೇಧದ ಅಂಗೀಕಾರವನ್ನು ಟೀಕಿಸಿವೆ. ಇದು ಅಭಿವ್ಯಕ್ತಿ ಮತ್ತು ಧರ್ಮದ ಸ್ವಾತಂತ್ರ್ಯ ಸೇರಿದಂತೆ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುವ ಅಪಾಯಕಾರಿ ನೀತಿ ಎಂದು ಕರೆದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ