ತನ್ನ ಪತಿಯ ಜತೆ ಸಂಬಂಧ ಹೊಂದಿರುವ ತನ್ನ ಪ್ರಾಣ ಸ್ನೇಹಿತೆಗೆ ಬ್ಯಾನರ್ ಹಾಕಿ ಧನ್ಯವಾದ ತಿಳಿಸಿದ ಪತ್ನಿ
ಸಾಮಾನ್ಯವಾಗಿ ತನ್ನ ಪತಿಗೆ ಬೇರೊಬ್ಬ ಮಹಿಳೆ ಜತೆ ಅಕ್ರಮ ಸಂಬಂಧವಿದೆ ಎಂದು ತಿಳಿಯುತ್ತಿದ್ದಂತೆ ಮನೆಯೇ ನರಕವೆನಿಸಿ ಗಂಡನ ಜತೆ ಜಗಳವಾಡುವುದು ಸಾಮಾನ್ಯ. ಇಲ್ಲೊಬ್ಬ ಮಹಿಳೆಯ ಪತಿ ತನ್ನ ಪ್ರಾಣ ಸ್ನೇಹಿತೆ ಜತೆಗೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದಾನೆ ಎಂದು ತಿಳಿದು ಆಕೆಯ ಪರಿಸ್ಥಿತಿ ಹೇಗಾಗಿರಬೇಡ.

ಬೀಜಿಂಗ್, ಆಗಸ್ಟ್ 31: ಸಾಮಾನ್ಯವಾಗಿ ತನ್ನ ಪತಿ(Husband)ಗೆ ಬೇರೊಬ್ಬ ಮಹಿಳೆ ಜತೆ ಅಕ್ರಮ ಸಂಬಂಧವಿದೆ ಎಂದು ತಿಳಿಯುತ್ತಿದ್ದಂತೆ ಮನೆಯೇ ನರಕವೆನಿಸಿ ಗಂಡನ ಜತೆ ಜಗಳವಾಡುವುದು ಸಾಮಾನ್ಯ. ಇಲ್ಲೊಬ್ಬ ಮಹಿಳೆಯ ಪತಿ ತನ್ನ ಪ್ರಾಣ ಸ್ನೇಹಿತೆ ಜತೆಗೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದಾನೆ ಎಂದು ತಿಳಿದು ಆಕೆಯ ಪರಿಸ್ಥಿತಿ ಹೇಗಾಗಿರಬೇಡ.
ಆದರೆ ಆಕೆ ದೃತಿಗೆಡದೆ ಕೂಲ್ ಆಗಿ ನಡೆದುಕೊಂಡಿದ್ದಾರೆ. ತನ್ನ ಅಪಾರ್ಟ್ಮೆಂಟ್ ಮುಂಭಾಗ ತನ್ನ ಗಂಡನ ಜತೆ ಸಂಬಂಧ ಹೊಂದಿದ್ದಕ್ಕಾಗಿ ತನ್ನ ಪ್ರಾಣ ಸ್ನೇಹಿತೆಗೆ ಧನ್ಯವಾದ ತಿಳಿಸುವ ಕೆಂಪು ಬ್ಯಾನರ್ ಹಾಕಿದ್ದಾರೆ. ಬ್ಯಾನರ್ ಜತೆಗೆ ಕೆಂಪು ನಾಣ್ಯವನ್ನು ಕೂಡ ನೇತು ಹಾಕಿದ್ದಾರೆ.
ತನ್ನ ಪತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ತನ್ನ ಸ್ನೇಹಿತೆಗೆ ವ್ಯಂಗ್ಯವಾಗಿ ಧನ್ಯವಾದ ಹೇಳಲು ಚೀನಾದ ಮಹಿಳೆ ಬ್ಯಾನರ್‌ಗಳನ್ನು ನೇತುಹಾಕಿದ್ದರು. ಚೀನಾದಲ್ಲಿ ನಿಮಗೆ ಏನಾದರೂ ಸಹಾಯ ಮಾಡಿದ ಜನರಿಗೆ ಸಾಂಪ್ರದಾಯಿಕವಾಗಿ ಕೃತಜ್ಞತೆ ಸಲ್ಲಿಸಲು ಸೂಚಕವಾಗಿ ಕೆಂಪು ನಾಣ್ಯಗಳನ್ನು ಕಳುಹಿಸಲಾಗುತ್ತದೆ.
ಮತ್ತಷ್ಟು ಓದಿ:
ಅನೈತಿಕ ಸಂಬಂಧ: ಅಕ್ಕನ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವನನ್ನು ತಮ್ಮ ಮಾಡಿದ್ದೇನು ಗೊತ್ತಾ?
ಷಿ ತನ್ನ ಪತಿಯೊಂದಿಗೆ ಅರ್ಧ ದಶಕದಿಂದ ಸಂಬಂಧ ಹೊಂದಿದ್ದಾಳೆ ಎಂದು ಹೆಸರು ಮಹಿಳೆ ಆರೋಪಿಸಿದ್ದಾರೆ. ಆಕೆ 12 ವರ್ಷಗಳಿಂದ ನನ್ನ ಪ್ರಾಣ ಸ್ನೇಹಿತೆಯಾಗಿದ್ದಳು, ಐದು ವರ್ಷಗಳಿಂದ ನನ್ನ ಪತಿಗೆ ಲೈಂಗಿಕ ಸೇವೆಗಳನ್ನು ಒದಗಿಸುತ್ತಿದ್ದಾಳೆ ಆಕೆಗೆ ಧನ್ಯವಾದ ಎಂದು ಬ್ಯಾನರ್ನಲ್ಲಿ ಬರೆಯಾಗಿದೆ. ನನ್ನ ಸ್ನೇಹಿತೆ ಹಾಗೂ ನನ್ನ ಪತಿ ಒಂದೇ ಹೋಟೆಲ್ನಲ್ಲಿ ಉಳಿದುಕೊಡಿದ್ದಾರೆ.

ಷಿ ತನ್ನ ಆತ್ಮೀಯ ಸ್ನೇಹಿತೆ ನನ್ನ ಪತಿಯೊಂದಿಗೆ ಕಚೇರಿ ಸಮಯದಲ್ಲಿ ಹೋಟೆಲ್‌ಗಳಿಗೆ ಹೋಗಿದ್ದಳು. ಷಿ ಹಾಂಗ್‌ಶಾನ್ ಸಮುದಾಯದ ಪ್ರವಾಸೋದ್ಯಮ ನಿರ್ವಹಣಾ ಕಚೇರಿಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಬ್ಯಾನರ್ ಬಹಿರಂಗಪಡಿಸಿವೆ.ಬ್ಯಾನರ್‌ಗಳನ್ನು ನೇತುಹಾಕಿದ್ದ ಸಂಕೀರ್ಣದಲ್ಲಿ ಷಿ ವಾಸಿಸುತ್ತಿದ್ದಾಳೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




