AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್‌ನ ಸೇತುವೆ, ಪವರ್ ಪ್ಲಾಂಟ್‌ಗಳನ್ನು ಉಡಾಯಿಸುತ್ತೇವೆ, ದಾಳಿಗೆ ಗಡುವು ನೀಡಲು ನಿರಾಕರಿಸಿದ ಅಮೆರಿಕ

ಅಮೆರಿಕ-ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಅಧ್ಯಕ್ಷ ಟ್ರಂಪ್ ಇರಾನ್‌ನ ಸೇತುವೆ, ವಿದ್ಯುತ್ ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ದಾಳಿಗೆ ಗಡುವು ನಿಗದಿಪಡಿಸಲು ನಿರಾಕರಿಸಿದ್ದಾರೆ. ಈ ಉದ್ವಿಗ್ನತೆ ಹಾರ್ಮುಜ್ ಜಲಸಂಧಿ ನಿಯಂತ್ರಣ ಮತ್ತು ಚಬಹಾರ್ ಬಂದರು ಯೋಜನೆ ಮೂಲಕ ಭಾರತದ ಆರ್ಥಿಕ ಹಿತಾಸಕ್ತಿಗಳ ಮೇಲೆ ಭಾರಿ ಪರಿಣಾಮ ಬೀರಲಿದೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕವಿದೆ.

ಇರಾನ್‌ನ ಸೇತುವೆ, ಪವರ್ ಪ್ಲಾಂಟ್‌ಗಳನ್ನು ಉಡಾಯಿಸುತ್ತೇವೆ, ದಾಳಿಗೆ ಗಡುವು ನೀಡಲು ನಿರಾಕರಿಸಿದ ಅಮೆರಿಕ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Jul 16, 2026 | 7:29 AM

Share

ವಾಷಿಂಗ್ಟನ್, ಜುಲೈ 16: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್(Iran) ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ಹಾಗೂ ಕ್ಷಿಪಣಿ ದಾಳಿಗಳು ಮುಂದುವರೆದಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದ್ದಾರೆ. ಇರಾನ್‌ನ ಪ್ರಮುಖ ಸೇತುವೆಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸಲು ಮಿಲಿಟರಿಗೆ ಆದೇಶಿಸುವ ಮುನ್ನ ತಾವು ಯಾವುದೇ ಗಡುವು ನೀಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಪೆನ್ಸಿಲ್ವೇನಿಯಾ ರಕ್ಷಣಾ ಮತ್ತು ನಾವೀನ್ಯತೆ ಶೃಂಗಸಭೆಗೆ ಆಗಮಿಸಿದ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ನನಗೆ ಗಡುವುಗಳನ್ನು ನಿಗದಿಪಡಿಸುವುದು ಇಷ್ಟವಿಲ್ಲ. ಆದರೆ ಇರಾನ್‌ಗೆ ಮುಂದೆ ಏನಾಗಲಿದೆ ಎಂಬುದು ಚೆನ್ನಾಗಿ ತಿಳಿದಿದೆ. ಅವರು ಇನ್ಮುಂದೆಯಾದರೂ ಬುದ್ಧಿ ಕಲಿತು ಉತ್ತಮವಾಗಿ ವರ್ತಿಸಬೇಕು” ಎಂದು ಟೆಹ್ರಾನ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಮಾತುಕತೆಗೆ ಬರದಿದ್ದರೆ ಇರಾನ್‌ನಲ್ಲಿ ಯಾರೂ ಉಳಿಯುವುದಿಲ್ಲ

ಇದಕ್ಕೂ ಮುನ್ನ ಫಾಕ್ಸ್ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಧ್ಯಕ್ಷ ಟ್ರಂಪ್, ಇರಾನ್ ವಿರುದ್ಧ ತಾವೇ ಖುದ್ದಾಗಿ ಸಿದ್ಧಪಡಿಸಿರುವ ವಿನಾಶಕಾರಿ ಮಿಲಿಟರಿ ಸ್ಕೆಚ್ ಅನ್ನು ಬಿಚ್ಚಿಟ್ಟಿದ್ದರು.

ಸರಣಿ ಬಾಂಬ್ ದಾಳಿ: ಇರಾನ್ ತಕ್ಷಣವೇ ಅಮೆರಿಕದ ಷರತ್ತುಗಳಿಗೆ ಒಪ್ಪಿ ಮಾತುಕತೆಗೆ ಬರದಿದ್ದರೆ, ಅಮೆರಿಕದ ವಾಯುಪಡೆಗಳು ಇರಾನ್​​ನ ವಿದ್ಯುತ್ ಸ್ಥಾವರಗಳು ಹಾಗೂ ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಿವೆ ಎಂದು ಎಚ್ಚರಿಕೆ ನೀಡಿದೆ.

“ನಾವು ಇಂದು ರಾತ್ರಿಯೂ ಇರಾನ್ ಮೇಲೆ ಕಠಿಣ ದಾಳಿ ನಡೆಸಲಿದ್ದೇವೆ, ನಾಳೆಯೂ ನಡೆಸಲಿದ್ದೇವೆ. ಮುಂದಿನ ವಾರ ಇರಾನ್ ಪರಿಸ್ಥಿತಿ ತೀರಾ ಕೆಟ್ಟದಾಗಲಿದೆ. ಅವರ ಎಲ್ಲಾ ಕನೆಕ್ಟಿವಿಟಿ ಸೇತುವೆಗಳನ್ನು ನಾವು ಧ್ವಂಸಗೊಳಿಸುತ್ತೇವೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್‌ನಲ್ಲಿ ಯಾರೂ ಉಳಿಯುವುದಿಲ್ಲ” ಎಂದು ಟ್ರಂಪ್ ಘರ್ಜಿಸಿದ್ದಾರೆ. ಆದರೆ, ಈ ದಾಳಿಗಳ ನಡುವೆಯೂ ಅಮಾಯಕ ನಾಗರಿಕರ ಸಾವುನೋವುಗಳನ್ನು ಕಡಿಮೆ ಮಾಡಲು ಅಮೆರಿಕದ ಮಿಲಿಟರಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: ಹಡಗುಗಳ ಮೇಲಿನ ಇರಾನ್ ದಾಳಿಯಿಂದ ಪಾರಾದ ಮಂಗಳೂರಿನ ಯುವಕ: ಜೀವ ಉಳಿಸಿಕೊಳ್ಳಲು ಮಾಡಿದ್ದೇನು ನೋಡಿ

ಕದನ ಕಣದಲ್ಲಿ ಏನಾಗುತ್ತಿದೆ?

ಹಾರ್ಮುಜ್ ಜಲಸಂಧಿಯ ನಿಯಂತ್ರಣದ ವಿಚಾರವಾಗಿ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಹಳೆಯ ಶಾಂತಿ ಒಪ್ಪಂದ (MoU) ಸಂಪೂರ್ಣವಾಗಿ ಮುರಿದುಬಿದ್ದ ಬೆನ್ನಲ್ಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿಎನ್‌ಎನ್ ವರದಿಗಳ ಪ್ರಕಾರ, ತೆರೆಮರೆಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಸಂಪರ್ಕದಲ್ಲಿದ್ದಾರೆ. ಆದರೆ, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ಹಡಗುಗಳ ಸಂಚಾರವನ್ನು ಇರಾನ್ ಬಲವಂತವಾಗಿ ನಿರ್ಬಂಧಿಸುತ್ತಿರುವವರೆಗೆ ಯಾವುದೇ ಅಧಿಕೃತ ಮಾತುಕತೆ ಸಾಧ್ಯವಿಲ್ಲ ಎಂದು ಟ್ರಂಪ್ ಆಡಳಿತ ಪಟ್ಟು ಹಿಡಿದಿದೆ.

ಇರಾನ್ ಒಳಗೆ ಅಮೆರಿಕದ ಗ್ರೌಂಡ್ ಟ್ರೂಪ್​ಗಳನ್ನು ನುಗ್ಗಿಸುವ ಸಾಧ್ಯತೆಯನ್ನು ಟ್ರಂಪ್ ತಳ್ಳಿಹಾಕಿಲ್ಲ. “ಕೆಲವೊಮ್ಮೆ ನೇರ ಮಿಲಿಟರಿ ಆಪರೇಷನ್‌ಗೆ ನೆಲದ ಪಡೆಗಳು ಬೇಕಾಗುತ್ತವೆ. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಮ್ಮ ಪರವಾಗಿ ನೆಲದ ಯುದ್ಧವನ್ನು ಮಾಡಲು ಸಿದ್ಧವಿರುವ ಬೇರೆ ಮಿತ್ರದೇಶಗಳ ಪಡೆಗಳು ನಮಗಿವೆ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಸ್ರೇಲ್ ಅಥವಾ ಗಲ್ಫ್ ಮಿತ್ರರಾಷ್ಟ್ರಗಳ ನೆರವನ್ನು ಬಳಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

ಭಾರತದ ಮೇಲಾಗುವ ರಾಜತಾಂತ್ರಿಕ ಪರಿಣಾಮ

ಅಮೆರಿಕ ಮತ್ತು ಇರಾನ್ ನಡುವಿನ ಈ ಮುಕ್ತ ಯುದ್ಧದ ಜ್ವಾಲೆಯು ಕೇವಲ ಮಧ್ಯಪ್ರಾಚ್ಯಕ್ಕೆ ಸೀಮಿತವಾಗಿಲ್ಲ. ಇದು ಭಾರತದ ರಾಜತಾಂತ್ರಿಕತೆ ಮತ್ತು ಆರ್ಥಿಕತೆಯ ಮೇಲೂ ಭಾರಿ ಪರಿಣಾಮ ಬೀರಲಿದೆ.

ಓಮನ್ ಸಂಧಾನದ ವೈಫಲ್ಯ: 2026ರ ಆರಂಭದಿಂದಲೇ  ಓಮನ್ ದೇಶವು ಅಮೆರಿಕ ಮತ್ತು ಇರಾನ್ ನಡುವೆ ಗುಪ್ತವಾಗಿ ಪರೋಕ್ಷ ಸಂಧಾನ ಮಾತುಕತೆಗಳನ್ನು ಆಯೋಜಿಸುತ್ತಾ ಬಂದಿತ್ತು. ಆದರೆ ಇರಾನ್ ಒಮಾನ್‌ನ ಗಡಿಯೊಳಗಿನ ಕಡಲ ಜಲಮಾರ್ಗದ ಮೇಲೂ ತನ್ನ ಸಾರ್ವಭೌಮತ್ವ ಘೋಷಿಸಿ ಹಡಗುಗಳ ಮೇಲೆ ದಾಳಿ ಮಾಡಿರುವುದರಿಂದ ಒಮಾನ್ ನಡೆಸುತ್ತಿದ್ದ ಶಾಂತಿ ಪ್ರಯತ್ನಗಳು ಸಂಪೂರ್ಣ ಹಳಿತಪ್ಪಿವೆ.

ಚಬಹಾರ್ ಬಂದರಿನ ಆತಂಕ: ಭಾರತವು ಇರಾನ್‌ನಲ್ಲಿ ಬಿಲಿಯನ್ ಗಟ್ಟಲೆ ಹೂಡಿಕೆ ಮಾಡಿ ಅಭಿವೃದ್ಧಿಪಡಿಸುತ್ತಿರುವ ‘ಚಬಹಾರ್ ಬಂದರು’ ಯೋಜನೆಗೆ ಈ ಯುದ್ಧವು ದೊಡ್ಡ ಕಂಟಕ ತಂದಿದೆ. ಒಂದು ವೇಳೆ ಅಮೆರಿಕ ಇರಾನ್‌ನ ವಿದ್ಯುತ್ ಮತ್ತು ಸಾರಿಗೆ ಜಾಲವನ್ನು ಧ್ವಂಸಗೊಳಿಸಿದರೆ, ಮಧ್ಯ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುವ ಭಾರತದ ಈ ಮಹತ್ವದ ವ್ಯಾಪಾರ ಮಾರ್ಗವು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಭಾರತದ ಹೂಡಿಕೆಗೆ ಭಾರಿ ಹಿನ್ನಡೆಯಾಗುವ ಆತಂಕ ಎದುರಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ