ಉಕ್ರೇನ್‌ನಲ್ಲಿ ಅಮೆರಿಕದ ಪತ್ರಕರ್ತ ಬ್ರೆಂಟ್ ರೆನಾಡ್ ರಷ್ಯಾ ಪಡೆಯ ಗುಂಡೇಟಿಗೆ ಬಲಿ
Brent Renaud ರೆನಾಡ್ ಅವರು ಎನ್ಬಿಸಿ ಮತ್ತು ಎಚ್ಬಿಒ ಸೇರಿದಂತೆ ಹಲವಾರು ಇತರ ಯುನೈಟೆಡ್ ಸ್ಟೇಟ್ಸ್-ಆಧಾರಿತ ಸುದ್ದಿ ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದರು.
ಕೀವ್: 51ರ ಹರೆಯದ ಅಮೆರಿಕದ ವರದಿಗಾರ ಬ್ರೆಂಟ್ ರೆನಾಡ್ (Brent Renaud) ಭಾನುವಾರ ಉಕ್ರೇನ್‌ನಲ್ಲಿ(Ukraine) ರಷ್ಯಾದ (Russia) ಪಡೆಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಕೀವ್ ಪ್ರದೇಶದ ಪೊಲೀಸ್ ಮುಖ್ಯಸ್ಥ ಆಂಡ್ರಿ ನೆಬಿಟೋವ್ ಇರ್ಪಿನ್‌ನಲ್ಲಿ ರಷ್ಯಾದ ಪಡೆಗಳಿಂದ ರೆನಾಡ್ ಹತ್ಯೆಯಾಗಿದ್ದು ಇನ್ನೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. “ಉಕ್ರೇನ್‌ನಲ್ಲಿ ರಷ್ಯಾದ ಸೈನಿಕರ ದೌರ್ಜನ್ಯದ ಬಗ್ಗೆ ಸತ್ಯವನ್ನು ತೋರಿಸಲು ಪ್ರಯತ್ನಿಸುವ ಅಂತರರಾಷ್ಟ್ರೀಯ ಮಾಧ್ಯಮದ ಪತ್ರಕರ್ತರನ್ನು ಆಕ್ರಮಣಕಾರರು ಸಿನಿಕತನದಿಂದ ಕೊಲ್ಲುತ್ತಾರೆ” ಎಂದು ನೆಬಿಟೋವ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಆರಂಭಿಕ ವರದಿಗಳ ಪ್ರಕಾರ ರೆನಾಡ್ ನ್ಯೂಯಾರ್ಕ್ ಟೈಮ್ಸ್ ವರದಿಗಾರಿಕೆಗೆ ಅಲ್ಲಿದ್ದರು ಎಂದು ಹೇಳಿದರೆ, ಪ್ರಸ್ತುತ ಪ್ರಕಟಣೆಯು ಅದು ನಿಜವಲ್ಲ ಎಂದು ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಹೇಳಿಕೆಯಲ್ಲಿ ನ್ಯೂಯಾರ್ಕ್ ಟೈಮ್ಸ್ ಉಪ ವ್ಯವಸ್ಥಾಪಕ ಸಂಪಾದಕ ಕ್ಲಿಫ್ ಲೆವಿ, ತಾನು ತೀವ್ರ ದುಃಖಿತನಾಗಿದ್ದು ರೆನಾಡ್ “ಪ್ರತಿಭಾನ್ವಿತ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕ” ಎಂದು ಹೇಳಿದ್ದಾರೆ. ಹಲವು ವರ್ಷಗಳ ಹಿಂದೆ ನಿಯೋಜನೆಗಾಗಿ ನೀಡಲಾಗಿದ್ದ ಟೈಮ್ಸ್ ಪ್ರೆಸ್ ಬ್ಯಾಡ್ಜ್ ಅನ್ನು ಧರಿಸಿದ್ದರಿಂದ ಅವರು ಟೈಮ್ಸ್‌ಗಾಗಿ ಕೆಲಸ ಮಾಡಿದ್ದಾರೆ ಎಂಬ ಆರಂಭಿಕ ವರದಿಗಳು ಪ್ರಸಾರವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
.@nytimes is deeply saddened to learn of the death of an American journalist in Ukraine, Brent Renaud. Brent was a talented photographer and filmmaker, but he was not on assignment for @nytimes in Ukraine. Full statement is here. pic.twitter.com/bRcrnNDacQ
— Cliff Levy (@cliffordlevy) March 13, 2022
ಏತನ್ಮಧ್ಯೆ, ಉಕ್ರೇನ್‌ನ ಪಶ್ಚಿಮ ಸೇನಾ ನೆಲೆಯ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ 35 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‌ನ ಲಿವೀವ್ ಪ್ರದೇಶದ ಗವರ್ನರ್ ಮ್ಯಾಕ್ಸಿಮ್ ಕೊಜಿಟ್ಸ್ಕಿ ಶನಿವಾರ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ರೆನಾಡ್ ಅವರು ಎನ್ಬಿಸಿ ಮತ್ತು ಎಚ್ಬಿಒ ಸೇರಿದಂತೆ ಹಲವಾರು ಇತರ ಯುನೈಟೆಡ್ ಸ್ಟೇಟ್ಸ್-ಆಧಾರಿತ ಸುದ್ದಿ ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದರು.
ರೆನಾಡ್ ತನ್ನ ಸಹೋದರ ಕ್ರೇಗ್ ಜೊತೆಗೆ ಇರಾಕ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಹಲವಾರು ಸಂಘರ್ಷ ವಲಯಗಳಿಂದ ವರದಿ ಮಾಡಿದ್ದಾರೆ. ತೀವ್ರ ಭಾವನಾತ್ಮಕ ಯಾತನೆ ಹೊಂದಿರುವ ವಿದ್ಯಾರ್ಥಿಗಳಿಗಾಗಿರುವ ಚಿಕಾಗೋ ಶಾಲೆಯ ಕುರಿತು ಸಾಕ್ಷ್ಯಚಿತ್ರಕ್ಕಾಗಿ ಅವರು ಪೀಬಾಡಿ ಪ್ರಶಸ್ತಿಯನ್ನು (ವಿದ್ಯುನ್ಮಾನ ಮಾಧ್ಯಮದಲ್ಲಿನ ಸಾಧನೆಗಾಗಿ) ಗೆದ್ದಿದ್ದಾರೆ. ಸಾಕ್ಷ್ಯಚಿತ್ರವನ್ನು ವೈಸ್ ನ್ಯೂಸ್ ಪ್ರಸಾರ ಮಾಡಿತ್ತು.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ನಿಮನ್ ಫೌಂಡೇಶನ್ ಫಾರ್ ಜರ್ನಲಿಸಂನ ಕ್ಯುರೇಟರ್ ಆನ್ ಮೇರಿ ಲಿಪಿಂಕ್ಸಿ, ರೆನಾಡ್ “ಪ್ರತಿಭಾನ್ವಿತ ಮತ್ತು ದಯಾಳು” ಎಂದು ಹೇಳಿದ್ದು ಅವರ ಕೆಲಸವು ಮಾನವೀಯತೆಯಿಂದ ತುಂಬಿದೆ ಎಂದಿದ್ದಾರೆ.
Our Nieman Fellow Brent Renaud was gifted and kind, and his work was infused with humanity. He was killed today outside Kiev, and the world and journalism are lesser for it. We are heartsick. https://t.co/ZbQWAtiGp4
— Ann Marie Lipinski (@AMLwhere) March 13, 2022
2019 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮಕ್ಕಾಗಿ ನಿಮನ್ ಫೌಂಡೇಶನ್‌ನ ಫೆಲೋಗಳಲ್ಲಿ ರೆನಾಡ್ ಕೂಡ ಒಬ್ಬರಾಗಿದ್ದರು.
ಇದನ್ನೂ ಓದಿ: ಉಕ್ರೇನ್‌ನ ಪಶ್ಚಿಮ ಭಾಗಗಳಲ್ಲಿ ರಷ್ಯಾ ದಾಳಿ ನಂತರ ಭಾರತ ರಾಯಭಾರ ಕಚೇರಿ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರ