Kamala Harris: ಬಾಸ್ಕೆಟ್‌ಬಾಲ್ ತಂಡದ ಜತೆ ಫೋಟೊ ತೆಗೆಯುವಾಗ ಮಂಡಿಯೂರಿ ಕುಳಿತ ಜೋ ಬೈಡನ್, ನಾ ಹಾಗೆ ಕೂರಲ್ಲ ಎಂದ ಕಮಲಾ ಹ್ಯಾರಿಸ್
ಬಾಸ್ಕೆಟ್‌ಬಾಲ್ ತಂಡದ ತರಬೇತುದಾರರು No ಎಂದು ಹೇಳುವುದು ಕೇಳಿಸುತ್ತದೆ. ಆದರೆ ಬೈಡನ್ ಮುಗುಳ್ನಕ್ಕು ಮಂಡಿಯೂರಿ ಕುಳಿತು ಫೋಟೊಗೆ ಪೋಸ್ ನೀಡಿದರು.
ಅಮೆರಿಕದ ಪ್ರಮುಖ ಬಾಸ್ಕೆಟ್‌ಬಾಲ್ (basketball) ತಂಡವನ್ನು ಗೌರವಿಸಲು ಶ್ವೇತಭವನವು (White House) ಈ ವಾರ ಸಮಾರಂಭವೊಂದನ್ನ ಆಯೋಜಿಸಿತ್ತು. ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ಗೋಲ್ಡನ್ ಸ್ಟಾರ್ ವಾರಿಯರ್ಸ್ ತಂಡದೊಂದಿಗೆ ಫೋಟೊ ತೆಗೆದುಕೊಳ್ಳುವಾಗ ಮಂಡಿಯೂರಿ ಕುಳಿತುಕೊಂಡರು. ಆದರೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ನಾನು ಹಾಗೆ ಮಂಡಿಯೂರಲ್ಲ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೈಡನ್ ಮತ್ತು ಕಮಲಾ ಹ್ಯಾರಿಸ್ ಹೇಗೆ ಫೋಟೊ ತೆಗೆದುಕೊಳ್ಳುವುದು ಎಂಬುದರ ಬಗ್ಗೆ ಮೊದಲು ಮಾತನಾಡಿದರು. ಅಧ್ಯಕ್ಷರು ಮಂಡಿಯೂರಿ ಕುಳಿತುಕೊಂಡರೆ, ಕಮಲಾ ನಾನು ಹಾಗೆ ಕೂರಲ್ಲ ಎಂದು ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಮಂಗಳವಾರ ನಡೆದ ಘಟನೆಯ ವಿಡಿಯೊ ಈಗ ವೈರಲ್ ಆಗಿದ್ದು, ” I’m not doing that ಎಂದು ಅಮೆರಿಕದ ಉಪಾಧ್ಯಕ್ಷೆ ನಗುತ್ತಾ ಹೇಳುತ್ತಿರುವುದು ಕಾಣುತ್ತದೆ.
Kamala Harris refuses to drop to her knees in front of an entire NBA team.
Kamala shouts “I’m not doing that!”
Joe Biden in turn gets on his knees before the Golden State Warriors.
White House crowd awkwardly gasps.pic.twitter.com/fVwcDSCaKP
— Patriot Alerts (@alerts___) January 17, 2023
ಬಾಸ್ಕೆಟ್‌ಬಾಲ್ ತಂಡದ ತರಬೇತುದಾರರು No ಎಂದು ಹೇಳುವುದು ಕೇಳಿಸುತ್ತದೆ. ಆದರೆ ಬೈಡನ್ ಮುಗುಳ್ನಕ್ಕು ಮಂಡಿಯೂರಿ ಕುಳಿತು ಫೋಟೊಗೆ ಪೋಸ್ ನೀಡಿದರು. ವಾರಿಯರ್ಸ್ ಸೂಪರ್‌ಸ್ಟಾರ್ ಸ್ಟೆಫ್ ಕರಿ ಮತ್ತು ಹಿರಿಯ ಆಟಗಾರ ಆಂಡ್ರೆ ಇಗುಡಾಲಾ ನಡುವೆ ನಿಂತು ಕಮಲಾ ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಫೋಟೊ ಕ್ಲಿಕ್ ಮಾಡಿದ ನಂತರ ಬೈಡನ್ ಎದ್ದು ನಿಂತು ತಮಾಷೆಯಾಗಿ ಒಂದು ಪೋಸ್ ಕೊಟ್ಟಾಗ. ಬಾಸ್ಕೆಟ್ ಬಾಲ್ ತಂಡದವರು ನಗುತ್ತಿರುವುದು ವಿಡಿಯೊದಲ್ಲಿದೆ.
ಇದನ್ನೂ ಓದಿ:Tibet Avalanche: ಟಿಬೆಟ್ ಹಿಮಪಾತದಲ್ಲಿ 8 ಜನ ಸಾವು; ರಕ್ಷಣಾ ತಂಡವನ್ನು ಕಳುಹಿಸಿದ ಚೀನಾ
ತನ್ನ ಭಾಷಣದ ಸಮಯದಲ್ಲಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ಉಚ್ಚರಿಸುವಾಗ ಬೈಡನ್ ತಪ್ಪು ಮಾಡಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. “ದೇಶವು ಉತ್ತಮ ವ್ಯಕ್ತಿಯ ಕೈಯಲ್ಲಿದೆ” ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. “ನಮ್ಮ ಜೀವಿತಾವಧಿಯ ಕೆಟ್ಟ ಆಡಳಿತವನ್ನು ಭೇಟಿಯಾಗಲು ವಾರಿಯರ್ಸ್ ಸಂತೋಷಪಡುತ್ತಾರೆ. ಆದರೆ ಟ್ರಂಪ್ ಅಧಿಕಾರದಲ್ಲಿದ್ದಾಗ ಭೇಟಿ ನೀಡಿಲ್ಲ.ಕ್ರೀಡೆಯಲ್ಲಿ ದುರ್ಬಲ ತಂಡ” ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟಿಸಿದ್ದಾರೆ.
2017 ಮತ್ತು 2018 ರಲ್ಲಿ ಟ್ರಂಪ್ ಅವರ ಅವಧಿಯಲ್ಲಿ ಈ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಕೈ ಬಿಟ್ಟ ನಂತರ ವಾರಿಯರ್ಸ್ NBA ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಇತ್ತೀಚಿನ ಗೆಲುವನ್ನು ಆಚರಿಸಲು ಶ್ವೇತಭವನಕ್ಕೆ ಭೇಟಿ ನೀಡಿದ್ದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Thu, 19 January 23