ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಕೊವಿಡ್ 19 ಲಸಿಕೆ ಬೂಸ್ಟರ್​ ಡೋಸ್​ ಅಗತ್ಯ?-ಡಿ.7ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಭೆ

ಕೊರೊನಾ ಲಸಿಕೆ ಅಭಿಯಾನ ಜಾಗತಿಕವಾಗಿದೆ. ಕೆಲವು ದೇಶಗಳಲ್ಲಿ ಒಂದೇ ಡೋಸ್​ನ ಲಸಿಕೆ ನೀಡಲಾಗುತ್ತಿದ್ದರೆ, ಭಾರತ ಸೇರಿ ಒಂದಷ್ಟು ರಾಷ್ಟ್ರಗಳಲ್ಲಿ ಎರಡು ಡೋಸ್​ಗಳ ಲಸಿಕೆ ಕೊಡಲಾಗುತ್ತಿದೆ.

ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಕೊವಿಡ್ 19 ಲಸಿಕೆ ಬೂಸ್ಟರ್​ ಡೋಸ್​ ಅಗತ್ಯ?-ಡಿ.7ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಭೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Dec 04, 2021 | 12:57 PM

ವಿಶ್ವಕ್ಕೀಗ ಒಮ್ರಿಕಾನ್ (Omicron variant)​ ಭೀತಿ ಆವರಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ವೈರಸ್​ ಇದೀಗ 38ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಈ ಮಧ್ಯೆ ಈಗಾಗಲೇ ಕೊಡುತ್ತಿರುವ ಕೊರೊನಾ ಲಸಿಕೆಯ ಡೋಸ್​ ಪ್ರಮಾಣ ಒಮಿಕ್ರಾನ್​ ವಿರುದ್ಧ ಹೋರಾಡಬಲ್ಲದಾ? ಅಥವಾ ಬೂಸ್ಟರ್​ ಡೋಸ್ ಬೇಕಾಗುತ್ತದೆಯಾ ಎಂಬುದು ಬಹುವಾಗಿ ಚರ್ಚೆಯಾಗುತ್ತಿರುವ ವಿಚಾರ. ಇನ್ನೂ ಈ ಬಗ್ಗೆ ಆರೋಗ್ಯ ತಜ್ಞರೂ ಕೂಡ ನಿಖರವಾಗಿ ಏನನ್ನೂ ಹೇಳುತ್ತಿಲ್ಲ.  ಹೀಗಾಗಿ ಒಮ್ರಿಕಾನ್​ ವಿರುದ್ಧ ರಕ್ಷಣೆಗೆ ಕೊವಿಡ್​ 19 ಲಸಿಕೆಗಳ ಬೂಸ್ಟರ್​ ಡೋಸ್​​ಗಳ ಅಗತ್ಯ ಮತ್ತು ಅದರ ಶಿಫಾರಸ್ಸುಗಳ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (World Health Organisation)ಯ ಕಾರ್ಯತಂತ್ರದ ಸಲಹೆಗಾರರ ಗುಂಪು (SAGE) ಡಿಸೆಂಬರ್​ 7ರಂದು ಸಭೆ ನಡೆಸಲಿದೆ. 

ಈಗ ಕೊರೊನಾ ಲಸಿಕೆ ಅಭಿಯಾನ ಜಾಗತಿಕವಾಗಿದೆ. ಕೆಲವು ದೇಶಗಳಲ್ಲಿ ಒಂದೇ ಡೋಸ್​ನ ಲಸಿಕೆ ನೀಡಲಾಗುತ್ತಿದ್ದರೆ, ಭಾರತ ಸೇರಿ ಒಂದಷ್ಟು ರಾಷ್ಟ್ರಗಳಲ್ಲಿ ಎರಡು ಡೋಸ್​ಗಳ ಲಸಿಕೆ ಕೊಡಲಾಗುತ್ತಿದೆ. ಸದ್ಯಕ್ಕಂತೂ ಬೂಸ್ಟರ್​ ಡೋಸ್​​ಗಳ ಅಗತ್ಯವಿದೆ ಎಂಬುದಕ್ಕೆ ಯಾವುದೇ ಪುರಾವೆಗಳೂ ಸಿಗುತ್ತಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದರು. ಹಾಗೇ, ಡಬ್ಲ್ಯೂಎಚ್​ಒಗೂ ಕೂಡ ಅನಿರ್ದಷ್ಟತೆಯೇ ಇತ್ತು. ಆದರೆ ಈಗ ಹರಡುತ್ತಿರುವ ಹೊಸ ಸೋಂಕು ಒಮಿಕ್ರಾನ್​ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೂಸ್ಟರ್ ಡೋಸ್​ಗಳು ಬೇಕಾಗುತ್ತವಾ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.  ಅದರ ಬೆನ್ನಲ್ಲೇ ಡಬ್ಲ್ಯೂಎಚ್​ಒ ಡಿ.7ಕ್ಕೆ ಸಭೆ ನಡೆಸಲಿದ್ದು, ನಂತರವಷ್ಟೇ ಬೂಸ್ಟರ್​ ಡೋಸ್​ಗಳ ಬಗ್ಗೆ ಒಂದು ನಿಖರತೆ ಸಿಗಲಿದೆ.

ಭಾರತದಲ್ಲೂ ಕೂಡ ಕೊರೊನಾ ಲಸಿಕೆ ಬೂಸ್ಟರ್​ ಡೋಸ್​ಗಳ ನೀಡಿಕೆ ಬಗ್ಗೆ ಚರ್ಚೆ ನೀಡುತ್ತಿದೆ. ಆದರೆ ಇದುವರೆಗೆ ಬೂಸ್ಟರ್​ ಡೋಸ್​ ನೀಡಿಕೆಯ ಅಗತ್ಯ ಕಂಡುಬಂದಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಸೇರಿ ವಿವಿಧ ಪ್ರಮುಖ ಆರೋಗ್ಯ ತಜ್ಞರು ಹೇಳಿದ್ದರು. ಆದರೆ ದೇಶದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಕೊವಿಡ್​ 19 ಲಸಿಕೆ ಬೂಸ್ಟರ್ ಡೋಸ್​ ನೀಡುವ ಬಗ್ಗೆ ಪರಿಗಣಿಸಬೇಕು ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (ಜಿನೋಮ್​ ಸಿಕ್ವೆನ್ಸಿಂಗ್​​ನ್ನು ಕೈಗೊಳ್ಳುವ ಪ್ರಯೋಗಾಲಯಗಳ ಒಕ್ಕೂಟ-ಐಎನ್​​ಎಸ್​ಎಸಿಒಜಿ) ಹೇಳಿದೆ.  ಹಾಗೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯ ಬಳಿಕ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಅಥವಾ ಮೂರನೇ ಡೋಸ್​ ಲಸಿಕೆ ಪಡೆಯಬೇಕು ಎಂದು ಹೇಳಿದರೆ, ನಮ್ಮ ದೇಶದಲ್ಲೂ ಕೂಡ ಸರ್ಕಾರಗಳು ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿವೆ.

ಇದನ್ನೂ ಓದಿ:  ನಾಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾ ಪ್ರಯಾಣಿಕರನ್ನು ಪತ್ತೆ ಮಾಡಿದ ಬಿಬಿಎಂಪಿ

ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ