ಫ್ರೀ ಬಸ್ ಪಾಸ್ ಬೆನ್ನಲ್ಲೇ ರಿಯಾಯಿತಿಯಲ್ಲಿ ಮೆಟ್ರೋ ಪಾಸ್ ನೀಡುವಂತೆ ಬೆಂಗಳೂರು ವಿದ್ಯಾರ್ಥಿಗಳ ಮನವಿ
ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಹಂತದವರೆಗಿನ ಪುರುಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳನ್ನು ನೀಡಲು ಘೋಷಣೆ ಮಾಡಿದೆ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಈ ಮೊದಲ ಘೋಷಣೆ ಮಾಡಿದ್ದಾರೆ. ಆದರೆ, ಇತ್ತ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ತಿಂಗಳ ಅಥವಾ ಇಯರ್ಲಿ ಪಾಸ್ ನೀಡುವಂತೆ ವಿದ್ಯಾರ್ಥಿಗಳು ಸಿಎಂಗೆ ಮನವಿ ಮಾಡಿದ್ದಾರೆ.
- Kiran Surya
- Updated on: Jun 9, 2026
- 10:38 pm
ಮೆಟ್ರೋ ಪ್ರಯಾಣಿಕರಿಗೆ ಸಹಿ ಸುದ್ದಿ: ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆಗೆ ಮುಹೂರ್ತ ಬಹುತೇಕ ಫಿಕ್ಸ್
Namma Metro Pink Line Launch Date: ನಮ್ಮ ಮೆಟ್ರೋದ ಪಿಂಕ್ ಲೈನ್ ಮಾರ್ಗದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎಲಿವೇಟೆಡ್ ಟ್ರ್ಯಾಕ್ನಲ್ಲಿ ಆಗಸ್ಟ್ 15 ರಂದು ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಈಗಾಗಲೇ ಆರ್‌ಡಿಎಸ್‌ಒ ಸಂಸ್ಥೆಯಿಂದ 90 ಕಿ.ಮೀ ವೇಗದ ಪ್ರಮಾಣ ಪತ್ರ ದೊರೆತಿದ್ದು, ಬಿಎಂಆರ್‌ಸಿಎಲ್ ಅಂತಿಮ ಹಂತದ ಸಿದ್ಧತೆಯಲ್ಲಿದೆ.
- Kiran Surya
- Updated on: Jun 9, 2026
- 8:56 am
ನಮ್ಮ ಮೆಟ್ರೋದಿಂದ ಪರಿಸರಸ್ನೇಹಿ ಹೆಜ್ಜೆ: ಬೆಂಗಳೂರಿನಲ್ಲಿ 2 ಲಕ್ಷ ಗಿಡ ನೆಡಲು ಮುಂದಾದ ಬಿಎಂಆರ್‌ಸಿಎಲ್
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಬ್ರೇಕ್ ಹಾಕಲು ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆ ಇಟ್ಟಿದೆ. ನಮ್ಮ ಮೆಟ್ರೋ ಹಳದಿ ಮತ್ತು ಹಸಿರು ಮಾರ್ಗಗಳ ಪ್ರಮುಖ ನಿಲ್ದಾಣಗಳ ಸುತ್ತಮುತ್ತ ಪರಿಸರಸ್ನೇಹಿ ಯೋಜನೆ ಅಡಿಯಲ್ಲಿ 2 ಲಕ್ಷ ಗಿಡಗಳನ್ನು ನೆಡಲು ಮುಂದಾಗಿದೆ. ಈ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
- Kiran Surya
- Updated on: Jun 6, 2026
- 8:01 am
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಮೆಟ್ರೋ ಮಾದರಿಯಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೆ ಪ್ಲ್ಯಾನ್
ಬಿಎಂಟಿಸಿ ಪ್ರಯಾಣಿಕರಿಗಾಗಿ ಮೆಟ್ರೋ ಮಾದರಿಯ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೆ ತರುತ್ತಿದೆ. ಆ ಮೂಲಕ ಪ್ರಯಾಣಿಕರು QR ಕೋಡ್ ಟಿಕೆಟ್‌ಗಳನ್ನು ಖರೀದಿಸಬಹುದು. ಇದು ಟಿಕೆಟ್ ಖರೀದಿಯ ತೊಂದರೆ, ನಿರ್ವಾಹಕರ ದುರುಪಯೋಗ ತಡೆಯಲು ಸಹಾಯ ಮಾಡುತ್ತದೆ. ನಗದು ರಹಿತ ಮತ್ತು ಟಿಕೆಟ್ ರಹಿತ ಪ್ರಯಾಣವನ್ನು ಉತ್ತೇಜಿಸುತ್ತದೆ.
- Kiran Surya
- Updated on: Jun 5, 2026
- 9:15 pm
ನಮ್ಮ ಮೆಟ್ರೋ ಹಳದಿ ಮಾರ್ಗದಿಂದ ಪ್ರಯಾಣಿಕರ ಆರೋಗ್ಯ ಸುಧಾರಣೆ! ಐಐಎಸ್ಸಿ ಅಧ್ಯಯನದಲ್ಲಿ ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ
ನಮ್ಮ ಮೆಟ್ರೋದ ‘ಯೆಲ್ಲೋ ಲೈನ್’ ಮಾರ್ಗದಿಂದಾಗಿ ಸಾರ್ವಜನಿಕರ ಮಾನಸಿಕ ಒತ್ತಡ ಕಡಿಮೆಯಾಗಿದ್ದು, ಪ್ರಯಾಣಿಕರಿಗೆ ವಾರಕ್ಕೆ 50-75 ನಿಮಿಷಗಳ ಹೆಚ್ಚುವರಿ ದೈಹಿಕ ಚಟುವಟಿಕೆ ಲಭ್ಯವಾಗುತ್ತಿದೆ. ಇದರ ಪರಿಣಾಮ ಜನರ ಆರೋಗ್ಯ ಸುಧಾರಿಸಿದೆ ಎಂದು ಐಐಎಸ್ಸಿ (IISc) ಇತ್ತೀಚೆಗೆ ನಡೆಸಿದ ವಿಶೇಷ ಅಧ್ಯಯನ ವರದಿ ತಿಳಿಸಿದೆ.
- Kiran Surya
- Updated on: Jun 5, 2026
- 6:57 am
ವಾಹನ ಸವಾರರಿಗೆ ಗುಡ್‌ನ್ಯೂಸ್: ಟ್ರಾಫಿಕ್ ಫೈನ್ ಪಾವತಿಗೆ ಮತ್ತೆ ಶೇ 50 ವಿನಾಯಿತಿ
ಕರ್ನಾಟಕದಲ್ಲಿ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಸಂಚಾರ ಮತ್ತು ಸಾರಿಗೆ ಇಲಾಖೆಗಳಲ್ಲಿ ಬಾಕಿ ಇರುವ ವಾಹನ ದಂಡಗಳ ಮೇಲೆ ಶೇಕಡಾ 50 ರಷ್ಟು ವಿನಾಯಿತಿ ನೀಡಿದೆ. ದಂಡ ಪಾವತಿಸಲು ಜೂನ್ 21ರಿಂದ ಜುಲೈ 10ರವರೆಗೆ ಅಂದರೆ 20 ದಿನಗಳ ಕಾಲ ಅವಕಾಶವಿದೆ.
- Kiran Surya
- Updated on: Jun 4, 2026
- 10:39 pm
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು
ಇದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ. ಕೆಂಪೇಗೌಡ ಏರ್ಪೋರ್ಟ್ ಮಾರ್ಗಕ್ಕೆ ಮೊದಲ ಬ್ಲೂ ಲೈನ್ ಮೆಟ್ರೋ ರೈಲು ಆಗಮಿಸಿದೆ. ಈ ಟ್ರೈನ್ ಸೆಟ್ ಬೆಂಗಳೂರಿನ ಬೈಯಪ್ಪನಹಳ್ಳಿ ಡಿಪೋ ತಲುಪಿದೆ. ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರು ಏರ್ಪೋರ್ಟ್ವರೆಗಿನ 58.19 ಕಿ.ಮೀ ಉದ್ದದ ಮಾರ್ಗ ಇದಾಗಿದೆ.
- Kiran Surya
- Updated on: Jun 4, 2026
- 3:59 pm
ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ
Student Free Bus Pass Rules: ನೂತನ ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ್ದು, ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವ ನಿಯಮಗಳು ಮೊದಲಿನಂತೆಯೇ ಇರಲಿವೆ. ಅರ್ಜಿ ಸಲ್ಲಿಸುವುದು ಹೇಗೆ? ಏನೇನು ದಾಖಲೆಗಳು ಬೇಕು ಎಂಬ ಮಾಹಿತಿ ಇಲ್ಲಿದೆ.
- Kiran Surya
- Updated on: Jun 4, 2026
- 11:11 am
ಇಂದಿನಿಂದ ಡಿಕೆ ಶಿವಕುಮಾರ್ ಸಿಎಂ: ಬೆಂಗಳೂರು ಟನಲ್ ರೋಡ್ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್? ಹೆಚ್ಚಿದ ಕುತೂಹಲ
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಕನಸಿನ 17,698 ಕೋಟಿ ರೂ. ವೆಚ್ಚದ ಬೆಂಗಳೂರು ಟನಲ್ ರೋಡ್ ಯೋಜನೆಗೆ ಮೊದಲ ಕ್ಯಾಬಿನೆಟ್‌ನಲ್ಲೇ ಹಸಿರು ನಿಶಾನೆ ಸಿಗಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಹೆಚ್ಚುವರಿ ವೆಚ್ಚ ಹಾಗೂ ಅದಾನಿ ಗ್ರೂಪ್ ಬಿಡ್ ಮಾಡಿರುವ ಕಾರಣಕ್ಕೆ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು.
- Kiran Surya
- Updated on: Jun 3, 2026
- 8:10 am
ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಊಟ-ತಿಂಡಿ, ಕಾಫಿ-ಚಹಾ ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರ ಸಿದ್ಧತೆ
ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಊಟ, ತಿಂಡಿ ಮತ್ತು ಕಾಫಿ-ಟೀ ದರಗಳನ್ನು 5 ರೂ.ನಿಂದ 20 ರೂ. ವರೆಗೆ ಹೆಚ್ಚಿಸಲಾಗುತ್ತಿದೆ. ಇನ್ನು ಕೆಲವೆಡೆ ಇನ್ನಷ್ಟು ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರು ಮುಂದಾಗಿರುವುದು ಗ್ರಾಹಕರ ಜೇಬಿಗೆ ಬರೆಯಾಗುತ್ತಿದೆ.
- Kiran Surya
- Updated on: Jun 3, 2026
- 7:41 am
ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್, ಬುಧವಾರದಿಂದ 2 ಹೆಚ್ಚುವರಿ ರೈಲು ಸೇರ್ಪಡೆ
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಜಂಗುಳಿ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಟ್ರಾಫಿಕ್ ಜಾಮ್‌ಗಳಿಗೆ ಕಾರಣವಾಗುತ್ತಿದೆ. ಟ್ರಾಫಿಕ್ ದಟ್ಟಣೆಯಿಂದ ಪಾರಾಗಲು ಬಹುತೇಕರು ಮೆಟ್ರೋ ಸೇವೆ ಬಳಕೆ ಮಾಡುತ್ತಿದ್ದಾರೆ. ಇಂತಹ ಜನರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಹೌದು..ಯೆಲ್ಲೋ ಲೈನ್ ನಲ್ಲಿ ಹೆಚ್ಚುವರಿ ರೈಲು ಸೇರ್ಪಡೆಯಾಗುತ್ತಿವೆ. ಹೀಗಾಗಿ ರೈಲುಗಳ ನಡುವಿನ ಸಮಯ ಇಳಿಕೆಯಾಗಲಿದೆ.
- Kiran Surya
- Updated on: Jun 2, 2026
- 9:57 pm
ಬೆಂಗಳೂರು: ಗಾಂಧಿ ಬಜಾರ್ ಹೈಟೆಕ್ ಪಾರ್ಕಿಂಗ್ ಲಾಟ್ ಕಾರು ಶೋರೂಂಗೆ ಬಾಡಿಗೆಗೆ! ವಾಹನ ಸವಾರರ ತೀವ್ರ ಆಕ್ರೋಶ
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಅಡಿಯಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಗಾಂಧಿ ಬಜಾರ್ ಪಾರ್ಕಿಂಗ್ ಲಾಟ್ ಅನ್ನು ಸಾರ್ವಜನಿಕರಿಗೆ ನೀಡದೆ, ಗುತ್ತಿಗೆದಾರನು ಐಷಾರಾಮಿ ಬೆಂಜ್ ಕಾರ್ ಶೋರೂಂಗೆ ಅಕ್ರಮವಾಗಿ ಬಾಡಿಗೆ ನೀಡಿದ್ದಾನೆ ಎಂದು ಆರೋಪಿಸಿ ಬಸವನಗುಡಿ ನಿವಾಸಿಗಳು ಮತ್ತು ವಾಹನ ಸವಾರರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Kiran Surya
- Updated on: Jun 1, 2026
- 12:11 pm