AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಹಳದಿ ಮಾರ್ಗದಿಂದ ಪ್ರಯಾಣಿಕರ ಆರೋಗ್ಯ ಸುಧಾರಣೆ! ಐಐಎಸ್ಸಿ ಅಧ್ಯಯನದಲ್ಲಿ ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ

ನಮ್ಮ ಮೆಟ್ರೋದ ‘ಯೆಲ್ಲೋ ಲೈನ್’ ಮಾರ್ಗದಿಂದಾಗಿ ಸಾರ್ವಜನಿಕರ ಮಾನಸಿಕ ಒತ್ತಡ ಕಡಿಮೆಯಾಗಿದ್ದು, ಪ್ರಯಾಣಿಕರಿಗೆ ವಾರಕ್ಕೆ 50-75 ನಿಮಿಷಗಳ ಹೆಚ್ಚುವರಿ ದೈಹಿಕ ಚಟುವಟಿಕೆ ಲಭ್ಯವಾಗುತ್ತಿದೆ. ಇದರ ಪರಿಣಾಮ ಜನರ ಆರೋಗ್ಯ ಸುಧಾರಿಸಿದೆ ಎಂದು ಐಐಎಸ್ಸಿ (IISc) ಇತ್ತೀಚೆಗೆ ನಡೆಸಿದ ವಿಶೇಷ ಅಧ್ಯಯನ ವರದಿ ತಿಳಿಸಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗದಿಂದ ಪ್ರಯಾಣಿಕರ ಆರೋಗ್ಯ ಸುಧಾರಣೆ! ಐಐಎಸ್ಸಿ ಅಧ್ಯಯನದಲ್ಲಿ ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ
ನಮ್ಮ ಮೆಟ್ರೋ ಹಳದಿ ಮಾರ್ಗImage Credit source: tv9
ಕಿರಣ್​ ಸೂರ್ಯ
| Edited By: |

Updated on: Jun 05, 2026 | 6:57 AM

Share

ಬೆಂಗಳೂರು, ಜೂನ್ 5: ನಮ್ಮ ಮೆಟ್ರೋದ ಆರ್​ವಿ ರಸ್ತೆ–ಬೊಮ್ಮಸಂದ್ರ ನಡುವಿನ ‘ಹಳದಿ ಮಾರ್ಗ’ (Yellow Line Metro) ಕೇವಲ ಪ್ರಯಾಣದ ಸಮಯವನ್ನು ಉಳಿಸುತ್ತಿಲ್ಲ, ಬದಲಿಗೆ ಸಾರ್ವಜನಿಕರ ಆರೋಗ್ಯ ವೃದ್ಧಿಸುವಲ್ಲಿ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ! ಇಂಥದ್ದೊಂದು ಅಚ್ಚರಿಯ ವಿಚಾರ ಇದೀಗ ತಿಳಿದುಬಂದಿದೆ. ಹಳದಿ ಮೆಟ್ರೋ ಮಾರ್ಗದ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ಸಾರಿಗೆ ಪ್ರಯೋಗಾಲಯವು ನಡೆಸಿರುವ ಸಮಗ್ರ ಅಧ್ಯಯನದಲ್ಲಿ ಈ ಕುರಿತು ಅತ್ಯಂತ ಆಸಕ್ತಿದಾಯಕ ಮತ್ತು ಸಕಾರಾತ್ಮಕ ಮಾಹಿತಿ ಬಹಿರಂಗವಾಗಿದೆ. ಮೆಟ್ರೋ ಸಂಚಾರ ಆರಂಭವಾದ ಬಳಿಕ ಜನಸಾಮಾನ್ಯರ ಜೀವನಮಟ್ಟ, ವರ್ತನೆ ಹಾಗೂ ದೈಹಿಕ-ಮಾನಸಿಕ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ವರದಿ ಹೇಳಿದೆ.

ಮುಖ್ಯಾಂಶಗಳು

  • ಐಐಎಸ್ಸಿ (IISc) ಸುಸ್ಥಿರ ಸಾರಿಗೆ ಪ್ರಯೋಗಾಲಯದಿಂದ ಸಮಗ್ರ ಅಧ್ಯಯನ.
  • ಮೆಟ್ರೋ ಬಳಕೆಯಿಂದಾಗಿ ಪ್ರಯಾಣಿಕರಿಗೆ ವಾರಕ್ಕೆ 50 ರಿಂದ 75 ನಿಮಿಷಗಳಷ್ಟು ಹೆಚ್ಚುವರಿ ದೈಹಿಕ ಚಟುವಟಿಕೆ ಲಭ್ಯ.
  • ಮಾನಸಿಕ ಒತ್ತಡ ಹಾಗೂ ಆಯಾಸ ಭಾರಿ ಪ್ರಮಾಣದಲ್ಲಿ ಕಡಿತ.

ಐಐಎಸ್ಸಿಯ ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಪ್ರೊ. ಆಶಿಶ್ ವರ್ಮಾ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಅಧ್ಯಯನವನ್ನು ಕೈಗೊಳ್ಳಲಾಗಿದೆ. ಹಳದಿ ಮಾರ್ಗದ ಕಾರಿಡಾರ್ ಉದ್ದಕ್ಕೂ ವಾಸಿಸುವ ಸುಮಾರು 600 ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಮೆಟ್ರೋ ಕಾರ್ಯಾಚರಣೆ ಆರಂಭವಾಗುವ ಮುನ್ನ ಹಾಗೂ ಜಾರಿಯಾದ ಆರು ತಿಂಗಳ ಬಳಿಕ ಸಾರ್ವಜನಿಕರ ಆರೋಗ್ಯ ಮತ್ತು ಜೀವನಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಟ್ರಾಫಿಕ್ ಕಿರಿಕಿರಿ ಮುಕ್ತಿ, ಆರೋಗ್ಯ ವೃದ್ಧಿ

ಅಧ್ಯಯನದ ಪ್ರಕಾರ, ಬೆಂಗಳೂರಿನಲ್ಲಿ ಪ್ರಸ್ತುತ ಶೇ 58 ರಷ್ಟು ಜನರು ಯಾವುದೇ ದೈಹಿಕ ಚಟುವಟಿಕೆ ಇಲ್ಲದೆ ಬಳಲುತ್ತಿದ್ದಾರೆ. ಇದು ಅಧಿಕ ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್) ಮತ್ತು ಉಸಿರಾಟದ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗುತ್ತಿದೆ. ಆದರೆ, ಮೆಟ್ರೋ ನಿಲ್ದಾಣಗಳಿಗೆ ನಡೆದುಕೊಂಡು ಹೋಗುವುದು ಮತ್ತು ಬರುವುದರಿಂದ ಪ್ರಯಾಣಿಕರಿಗೆ ವಾರಕ್ಕೆ 50 ರಿಂದ 75 ನಿಮಿಷಗಳಷ್ಟು ಹೆಚ್ಚುವರಿ ದೈಹಿಕ ಚಟುವಟಿಕೆ ಸಿಗುತ್ತಿದ್ದು, ಆರೋಗ್ಯ ಸುಧಾರಿಸುತ್ತಿದೆ.

ಈ ಕುರಿತು ಸಂತಸ ಹಂಚಿಕೊಂಡಿರುವ ಮೆಟ್ರೋ ಪ್ರಯಾಣಿಕರಾದ ದೇಶಪಾಂಡೆ ಮತ್ತು ವಿನಯ್ ಶ್ರೀನಿವಾಸ್, ‘ಹಿಂದೆ ವಾಹನಗಳಲ್ಲಿ ಆಫೀಸ್‌ಗೆ ಹೋಗುವಾಗ ತೀವ್ರ ಟ್ರಾಫಿಕ್‌ನಿಂದಾಗಿ ಮಾನಸಿಕ ಕಿರಿಕಿರಿ ಉಂಟಾಗುತ್ತಿತ್ತು, ಕೆಲಸ ಮಾಡಲು ಮನಸ್ಸಿರುತ್ತಿರಲಿಲ್ಲ. ಆದರೆ ಈಗ ಒಂದೂವರೆ ಗಂಟೆ ಮುಂಚಿತವಾಗಿಯೇ ಕಚೇರಿ ತಲುಪುತ್ತಿದ್ದು, ಮಾನಸಿಕ ಒತ್ತಡ ಮತ್ತು ಆಯಾಸ ಮುಕ್ತವಾಗಿದ್ದೇವೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು

ಸಮೀಕ್ಷೆಯಲ್ಲಿ ಭಾಗಿಯಾದವರ ಪೈಕಿ ಶೇ 83 ರಷ್ಟು ಮಂದಿ ಮೆಟ್ರೋ ವ್ಯವಸ್ಥೆಗೆ ಜೈ ಎಂದಿದ್ದರೆ, ಇನ್ನುಳಿದ ಶೇ 17 ರಷ್ಟು ಜನರು ಮಾತ್ರ ವೈಯಕ್ತಿಕ ಕಾರಣಗಳಿಂದಾಗಿ ಮೆಟ್ರೋ ಸಂಚಾರಕ್ಕೆ ಒಲವು ತೋರಿಲ್ಲ. ಒಟ್ಟಾರೆಯಾಗಿ, ಮಾಲಿನ್ಯ ನಿಯಂತ್ರಣ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಹಳದಿ ಮೆಟ್ರೋ ಮಾರ್ಗವು ಬೆಂಗಳೂರಿಗರ ಪಾಲಿಗೆ ವರದಾನವಾಗಿ ಮಾರ್ಪಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ