AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಖಾಲಿಯಿದ್ದ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ತಿಂಗಳಿಗೆ 22 ಲಕ್ಷ ಸಂಪಾದಿಸುವ ವ್ಯಕ್ತಿ

ಈಗಿನ ಕಾಲದಲ್ಲಿ ಎಲ್ಲರಂತೆ ಬದುಕೋಕೆ, ದುಡ್ಡು ಮಾಡೋಕೆ ಬುದ್ಧಿವಂತಿಕೆ ಇರಲೇಬೇಕು. ಆದರೆ ವ್ಯಕ್ತಿಯೊಬ್ಬರು, ತನ್ನ ಬಳಿಯಿದ್ದ ಖಾಲಿ ಜಾಗವನ್ನು ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ತನ್ನ ಗೆಳೆಯನ ಬ್ಯುಸಿನೆಸ್ ಬಗ್ಗೆ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಖಾಲಿ ಜಾಗದಿಂದಲೇ ಲಕ್ಷ ಸಂಪಾದಿಸಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದ್ದು, ಈ ಸ್ಟೋರಿ ಓದಿ.

Viral: ಖಾಲಿಯಿದ್ದ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ತಿಂಗಳಿಗೆ 22 ಲಕ್ಷ ಸಂಪಾದಿಸುವ ವ್ಯಕ್ತಿ
ಸ್ವಿಮ್ಮಿಂಗ್ ಪೂಲ್Image Credit source: Twitter
ಸಾಯಿನಂದಾ
|

Updated on: Jun 11, 2026 | 2:12 PM

Share

ಮೀರತ್, ಜೂನ್ 11: ಕೈಯಲ್ಲೊಂದು ಉದ್ಯೋಗ ಇಲ್ಲವಾದರೆ ಸ್ವಂತವಾದ ಬ್ಯುಸಿನೆಸ್ ಇದ್ರೆ ಮರ್ಯಾದೆ. ಕೆಲವರು ಸ್ವಂತ ಬ್ಯುಸಿನೆಸ್ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡೋದನ್ನು ನೀವು ನೋಡಿರುತ್ತೀರಿ. ಆದರೆ ವ್ಯಕ್ತಿಯೊಬ್ಬರು ಖಾಲಿ ಜಾಗವನ್ನೇ ಹಣದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿರುವ (Meerut in Uttar Pradesh) ತನ್ನ ಸ್ನೇಹಿತನ ಹೊಸ ಬ್ಯುಸಿನೆಸ್ ಐಡಿಯಾದ ಬಗ್ಗೆ ಯುವತಿಯೂ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ತನ್ನ ಬಳಿಯಿದ್ದ ಖಾಲಿ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ತಿಂಗಳಿಗೆ 22 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾ ಇದ್ದಾರಂತೆ. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಈ ವ್ಯಕ್ತಿಯ ಬ್ಯುಸಿನೆಸ್ ಐಡಿಯಾವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಕಂಟೆಂಟ್ ಕ್ರಿಯೇಟರ್ ಪೂಜಾ (@poojaofficial5) ಹೆಸರಿನ ಎಕ್ಸ್ ಖಾತೆಯಲ್ಲಿ ತನ್ನ ಸ್ನೇಹಿತನ ಹೊಸ ಬ್ಯುಸಿನೆಸ್ ಐಡಿಯಾವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಮೀರತ್‌ನಲ್ಲಿರುವ ತನ್ನ ಸ್ನೇಹಿತ, ಒಂದು ಸ್ವಿಮ್ಮಿಂಗ್ ಪೂಲ್ ಬ್ಯುಸಿನೆಸ್‌ನಿಂದ ಬೇಸಿಗೆಯಲ್ಲಿ ತಿಂಗಳಿಗೆ 22 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹಾಗೂ ಇನ್ನು ಉಳಿದ ತಿಂಗಳಿನಲ್ಲಿ 7.5 ಲಕ್ಷದವರೆಗೆ ಸಂಪಾದನೆ ಮಾಡ್ತಾರೆ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ನಾನು ಈ ಫಾರ್ಮ್‌ಗೆ ಹೋದಾಗ ಈ ಸ್ವಿಮ್ಮಿಂಗ್ ಪೂಲ್ ಗಮನಿಸಿದ್ದೆ. ಇದೇನಾದ್ರೂ ದುಡ್ಡು ಮಾಡ್ತಿದ್ಯಾ ಅಥವಾ ಸುಮ್ನೆ ಹವ್ಯಾಸಕ್ಕಾಗಿ ಮಾಡಿದ್ದೀಯಾ? ಎಂದು ಕೇಳಿದ್ದಕ್ಕೆ ನನ್ನ ಸ್ನೇಹಿತ, ಪರವಾಗಿಲ್ಲ, ನಡೀತಿದೆ ಎಂದು ನಗುತ್ತಾ ಉತ್ತರಿಸಿದ್ದಾರೆ. ಮೀರತ್‌ನ NH 58 ಹೆದ್ದಾರಿಯಲ್ಲಿರುವ ಈ ಫಾರ್ಮ್‌ಗೆ ಬೇಸಿಗೆಯಲ್ಲಿ ದಿನಕ್ಕೆ 700 ರಿಂದ 800 ಜನ ಬರ್ತಾರಂತೆ. ಒಬ್ಬರಿಗೆ 100 ರೂಪಾಯಿ ಟಿಕೆಟ್ ದರವಿದೆ. ಈ ಬೇಸಿಗೆಯಲ್ಲಿ ದಿನಕ್ಕೆ ಸರಾಸರಿ 750 ಜನ ಇಲ್ಲಿಗೆ ಬಂದರೆ, ದಿನಕ್ಕೆ 75,000 ರೂಪಾಯಿ ಆದಾಯ ಬರುತ್ತದೆ. ತಿಂಗಳಿಗೆ ಸುಮಾರು 22.5 ಲಕ್ಷ ರೂಪಾಯಿ ಆದಾಯವಾಗುತ್ತದೆ ಎಂದು ಪೂಜಾ ಹೇಳಿದ್ದಾರೆ.

ಬೇಸಿಗೆ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ಸುಮಾರು 250 ಜನ ಇಲ್ಲಿಗೆ ಬರುತ್ತಾರೆ. ದಿನಕ್ಕೆ 25000 ಸಾವಿರದಂತೆ ತಿಂಗಳಿಗೆ 7.5 ಲಕ್ಷ ರೂಪಾಯಿ ಬರುತ್ತದೆ. ಈ ಫಾರ್ಮ್‌ ನೋಡಿಕೊಳ್ಳಲು ಸೆಕ್ಯುರಿಟಿಗಾಗಿ ಗಾರ್ಡ್‌ಗಳನ್ನು ಮಾತ್ರ ನೇಮಿಸಿಕೊಂಡಿದ್ದಾರೆ. ಅವರಿಬ್ಬರಿಗೂ ಸೇರಿ ತಿಂಗಳಿಗೆ 20,000 ರೂಪಾಯಿ ಸಂಬಳ ಕೊಡುತ್ತಾರೆ. ಈ ಸ್ವಿಮ್ಮಿಂಗ್ ಪೂಲ್‌ನ ನೀರನ್ನು ಬದಲಾಯಿಸುವಾಗ ಅದನ್ನು ವ್ಯರ್ಥ ಮಾಡಲ್ಲ. ಈ ನೀರನ್ನು ರೈತರಿಗೆ ಕೃಷಿಗಾಗಿ ಮಾರಾಟ ಮಾಡುತ್ತಾರೆ. ಈ ಹಣದಿಂದ ಈಗಾಗಲೇ ವಾಹನಗಳನ್ನು ಖರೀದಿಸಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್

ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆ ಆದಾಯದ ಮೂಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ದಿನಕ್ಕೆ 700 ರಿಂದ 800 ಜನರೇ, ಈ ಸ್ವಿಮ್ಮಿಂಗ್ ಪೂಲ್ ನಲ್ಲಿ ಅದೇಗೆ ಸಾಧ್ಯ ಎಂದು ಕೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಸ್ನೇಹಿತನ ಐಡಿಯಾ ಚೆನ್ನಾಗಿದೆ ಎಂದು ಹೊಗಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More