AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vinay Kashappanavar

Vinay Kashappanavar

Author - TV9 Kannada

vinaykumar.kashappanavar@tv9.com
ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: 1,280 ವೈದ್ಯರು, ನರ್ಸ್‌ಗಳ ಭರ್ತಿಗೆ ಯು.ಟಿ. ಖಾದರ್ ಆದೇಶ

ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: 1,280 ವೈದ್ಯರು, ನರ್ಸ್‌ಗಳ ಭರ್ತಿಗೆ ಯು.ಟಿ. ಖಾದರ್ ಆದೇಶ

ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಚುರುಕಿನ ಕ್ರಮ ಕೈಗೊಂಡಿದ್ದಾರೆ. 1,280 ಎಂಬಿಬಿಎಸ್ ವೈದ್ಯರು, 924 ತಜ್ಞ ವೈದ್ಯರು, 892 ನರ್ಸ್‌ಗಳು ಸೇರಿದಂತೆ ಒಟ್ಟು 3000+ ಸಿಬ್ಬಂದಿ ನೇಮಕಾತಿಗೆ ಚಾಲನೆ ನೀಡಲಾಗಿದೆ. ಕೆಇಎ ಮೂಲಕ ಹಾಗೂ 'ವಾಕ್-ಇನ್ ಇಂಟರ್ವ್ಯೂ' ಮೂಲಕ ವೈದ್ಯರ ನೇಮಕ ನಡೆಯಲಿದೆ. ಔಷಧ ಗುಣಮಟ್ಟ ಮತ್ತು ಬೆಲೆ ನಿಯಂತ್ರಣವೂ ಸಚಿವರ ಆದ್ಯತೆ.

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ: 100 ದಿನಗಳೊಳಗೆ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ!

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ: 100 ದಿನಗಳೊಳಗೆ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ!

ಕರ್ನಾಟಕ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಮುಂದಿನ 100 ದಿನಗಳ ಒಳಗೆ 15,000 ಪ್ರಾಥಮಿಕ ಶಿಕ್ಷಕರು ಹಾಗೂ 2,500 ಐಟಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಮುಂದಿನ ವಾರವೇ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಎರಡು ತಿಂಗಳೊಳಗೆ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.

ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಯುಟಿ ಖಾದರ್ ಫುಲ್ ಆಕ್ಟಿವ್​​​: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲ್ಯಾನ್​

ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಯುಟಿ ಖಾದರ್ ಫುಲ್ ಆಕ್ಟಿವ್​​​: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲ್ಯಾನ್​

ನೂತನ ಆರೋಗ್ಯ ಸಚಿವ ಯು.ಟಿ. ಖಾದರ್​ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರಲು ಮುಂದಾಗಿದ್ದಾರೆ. ವೈದ್ಯರ ಕೊರತೆ ನೀಗಿಸಲು ಪ್ಲ್ಯಾನ್​ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಖಡಕ್​ ಸೂಚನೆಗಳನ್ನು ನೀಡಿದ್ದಾರೆ. ಡಿಹೆಚ್‌ಓಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ ತಾಂತ್ರಿಕ ಸಮಸ್ಯೆ: ರಿಸಲ್ಟ್​​ ನೋಡಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಟ

ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ ತಾಂತ್ರಿಕ ಸಮಸ್ಯೆ: ರಿಸಲ್ಟ್​​ ನೋಡಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಟ

ಎಂಜಿನಿಯರ್​​ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಏಪ್ರಿಲ್​​ನಲ್ಲಿ ನಡೆದಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಆದರೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಫಲಿತಾಂಶ ನೋಡಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. KEA ಸದ್ಯ ಪರ್ಯಾಯ ವ್ಯವಸ್ಥೆಯೊಂದು ಕಲ್ಪಿಸಿದೆ.

ಬೆಲೆ ಏರಿಕೆಯ ಬಿಸಿ: ಗೋಲ್ಡ್ ಸ್ಕೀಮ್ ಗಳಿಂದ ಹಿಂದೆ ಸರಿಯುತ್ತಿರುವ ಸಿಟಿ ಮಂದಿ

ಬೆಲೆ ಏರಿಕೆಯ ಬಿಸಿ: ಗೋಲ್ಡ್ ಸ್ಕೀಮ್ ಗಳಿಂದ ಹಿಂದೆ ಸರಿಯುತ್ತಿರುವ ಸಿಟಿ ಮಂದಿ

ಮಧ್ಯಮ ವರ್ಗದ ಜನರ ಜೀವನವೇ ಹಾಗೆ ಬಂಗಾರ ಇಷ್ಟ ಆದರೂ ಅದನ್ನ ಖರೀದಿ ಮಾಡಲು ಕಷ್ಟ ಪಡಬೇಕಾಗುತ್ತೆ. ಹೀಗಾಗಿ ಒಂದೇ ಸಲ ಅಷ್ಟೊಂದು ಹಣ ನೀಡಿ ಚಿನ್ನ ಖರೀದಿ ಮಾಡೋಕೆ ಆಗೋದಿಲ್ಲ ಅಂತ ಅನೇಕರು ಗೋಲ್ಡ್ ಸ್ಕೀಂಗಳ ಮೂಲಕ ಚಿನ್ನ ಖರೀದಿ ಮಾಡುತ್ತಿದ್ದರು. ಆದ್ರೆ, ಇದೀಗ ಈ ಸ್ಕೀಂಗಳಿಂದಲೂ ಕೂಡ ಜನರು ಹಿಂದೆ ಸರಿಯುವ ಪರಿಸ್ಥಿತಿ ಬಂದಿದ್ದು, ಜನರ ಜೀವನ ಬಲು ಕಷ್ಟ ಎನ್ನುವಂತಾಗಿದೆ. ಯಾಕೆ ಅಂತೀರಾ? ಈ ಕೆಳಗಿನಂತಿದೆ ನೋಡಿ.

ಬೆಂಗಳೂರು ವಾತಾವರಣದಲ್ಲಿ ಬದಲಾವಣೆ: ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ

ಬೆಂಗಳೂರು ವಾತಾವರಣದಲ್ಲಿ ಬದಲಾವಣೆ: ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ

ಬೆಂಗಳೂರಿನಲ್ಲಿ ಮಳೆ ಹಾಗೂ ಸೆಕೆ ಮಿಶ್ರಿತ ವಾತಾವರಣದಿಂದ ಮಕ್ಕಳಲ್ಲಿ ಸಾಂಕ್ರಾಮಿಕ ರೋಗಗಳು, ಡೆಂಗ್ಯೂ, ವೈರಲ್ ಜ್ವರಗಳು ಹೆಚ್ಚಾಗಿವೆ. ಕೆಮ್ಮು, ನೆಗಡಿ, ಗಂಟಲು ನೋವು, ವಾಂತಿ ಪ್ರಕರಣಗಳು ಉಲ್ಬಣಿಸಿವೆ. ಹೀಗಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳ ‘ಟ್ರಾನ್ಸ್‌ಪ್ಲಾಂಟ್’ ದಂಧೆಗೆ ಬೀಳುತ್ತಾ ಬ್ರೇಕ್? ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!

ಖಾಸಗಿ ಆಸ್ಪತ್ರೆಗಳ ‘ಟ್ರಾನ್ಸ್‌ಪ್ಲಾಂಟ್’ ದಂಧೆಗೆ ಬೀಳುತ್ತಾ ಬ್ರೇಕ್? ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!

ಖಾಸಗಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಚಿಕಿತ್ಸೆ ಹೆಸರಿನಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿಗಳ ಸುಲಿಗೆಗೆ ಬ್ರೇಕ್ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಮುಂದಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ‘ಕ್ಯಾಪಿಂಗ್’ ವಿಧಿಸಲು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲೇ ಕೈಗೆಟುಕುವ ದರದಲ್ಲಿ ಹೈಟೆಕ್ ಟ್ರಾನ್ಸ್‌ಪ್ಲಾಂಟ್ ಸೌಲಭ್ಯ ಒದಗಿಸಲು ಸಚಿವ ದಿನೇಶ್ ಗುಂಡೂರಾವ್ ಯೋಜನೆ ರೂಪಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ರಿಸಲ್ಟ್​​ ಪ್ರಕಟ:  ಶೇ. 62 ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ರಿಸಲ್ಟ್​​ ಪ್ರಕಟ: ಶೇ. 62 ಫಲಿತಾಂಶ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಶೇ. 62ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮೇ 18ರಿಂದ 25ರ ವರೆಗೆ 358 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇನ್ನು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ಇರುವುದಿಲ್ಲ ಎಂದು ಅದಾಗಲೇ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. SSLC ಪರೀಕ್ಷೆ ಒಂದರಲ್ಲಿ ಉತ್ತಮ ಫಲಿತಾಂಶ ಬಂದಿರುವುದರಿಂದ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ಸ್ವತಃ ಸಚಿವರೇ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಹಾವು ಕಡಿತದಿಂದ ಸಾವಿನ ಪ್ರಮಾಣ ಹೆಚ್ಚಳ:​ ನಿರ್ಲಕ್ಷ್ಯ ವಹಿಸದಂತೆ ಆರೋಗ್ಯ ಇಲಾಖೆ​ ಸೂಚನೆ

ಕರ್ನಾಟಕದಲ್ಲಿ ಹಾವು ಕಡಿತದಿಂದ ಸಾವಿನ ಪ್ರಮಾಣ ಹೆಚ್ಚಳ:​ ನಿರ್ಲಕ್ಷ್ಯ ವಹಿಸದಂತೆ ಆರೋಗ್ಯ ಇಲಾಖೆ​ ಸೂಚನೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಾವು ಕಡಿತ ಪ್ರಕರಣಗಳು ಮತ್ತು ಸಾವುಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿವೆ. ಕಳೆದ ಐದು ತಿಂಗಳಲ್ಲಿ 5597 ಜನರಿಗೆ ಹಾವು ಕಚ್ಚಿದ್ದು, 56 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆಗೆ ಮುಂದಾಗಿದೆ. ನಿರ್ಲಕ್ಷ್ಯ ವಹಿಸದ್ದಂತೆ ಜನರಿಗೂ ಸೂಚಿಸಲಾಗಿದೆ.

ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟವೀಗ ನಿರಾಳ: ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​

ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟವೀಗ ನಿರಾಳ: ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​

ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಉಗಾಂಡಾ ಮೂಲದ ಮಹಿಳೆಯ ಎಬೋಲಾ ವೈರಸ್ ತಪಾಸಣಾ ವರದಿ ನೆಗೆಟಿವ್ ಬಂದಿದೆ. ಇದರಿಂದಾಗಿ ರಾಜ್ಯ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದ್ದು, ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಉಗಾಂಡಾದ ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ಹೀಗಾಗಿ ಐಸೋಲೇಷನ್​​ನಲ್ಲಿ ಇಡಲಾಗಿದ್ದ ಅವರನ್ನು ಆಸ್ಪತ್ರೆಯಿಂದ ಹೋಟೆಲ್​ಗೆ ಸ್ಥಳಾಂತರ ಮಾಡಲಾಗಿದೆ.

ಕರ್ನಾಟಕಕ್ಕೆ ಕಾಲಿಟ್ಟಿತಾ ಎಬೋಲಾ? ಉಗಾಂಡಾದಿಂದ ಬೆಂಗಳೂರಿಗೆ ಬಂದ ಮಹಿಳೆಯಲ್ಲಿ ವೈರಸ್​​​ ಪತ್ತೆ ಶಂಕೆ

ಕರ್ನಾಟಕಕ್ಕೆ ಕಾಲಿಟ್ಟಿತಾ ಎಬೋಲಾ? ಉಗಾಂಡಾದಿಂದ ಬೆಂಗಳೂರಿಗೆ ಬಂದ ಮಹಿಳೆಯಲ್ಲಿ ವೈರಸ್​​​ ಪತ್ತೆ ಶಂಕೆ

ಆತಂಕ ಸೃಷ್ಟಿಸಿರುವ ಎಬೋಲಾ ವೈರಸ್​ ಸದ್ಯ ರಾಜಧಾನಿಗೂ ಕಾಲಿಟ್ಟಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ ಉಗಾಂಡಾದಿಂದ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಯಲ್ಲಿ ಎಬೋಲಾ ವೈರಸ್ ರೋಗ ಪತ್ತೆ ಶಂಕೆ ವ್ಯಕ್ತವಾಗಿದೆ. ಸದ್ಯ ಮಹಿಳೆಯನ್ನು ಐಸೋಲೇಷನ್​​ಗಾಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆರೋಗ್ಯ ಇಲಾಖೆ ವರದಿಗಾಗಿ ಕಾಯುತ್ತಿದೆ.

ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ: ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ

ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ: ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದಾದ್ಯಂತ ಶಾಲೆಗಳು (School) ಪುನರಾರಂಭವಾಗಲಿದೆ. ಬೇಸಿಗೆ ರಜೆ ಮುಗಿಸಿ ಮಕ್ಕಳೆಲ್ಲಾ (Students) ಶಾಲೆಗೆ ಬರಲು ತಯಾರಿ ಮಾಡಿಕೊಂಡಿದ್ದಾರೆ. ಶಾಲೆ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿರುವಾಗಲೇ ಶಿಕ್ಷಣ ಇಲಾಖೆ ಮಾರ್ಗಸೂಚಿ (Education Department Guidelines) ಬಿಡುಗಡೆ ಮಾಡಿದೆ. ಹಾಗಾದ್ರೆ, ಮಾರ್ಗಸೂಚಿಯಲ್ಲಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಏನೆಲ್ಲಾ ಅಂಶಗಳಿವೆ ಎನ್ನುವ ವಿವರ ಇಲ್ಲಿದೆ.